ಕೆವಿಜಿ ಬ್ಯಾಂಕ್ ಮ್ಯಾನೇಜರ್ ಅಶ್ವಿನ್ ವಾಸ್ನಿಕ್ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ರೈತ ರೈತ ಮಹಾದೇವಪ್ಪ ಜಾವೂರ ಅವರಿಗೆ ಸಾಲ ತುಂಬುವಂತೆ ಕಿರುಕುಳ ಕೊಟ್ಟಿದ್ದರು. ಈ ಬಗ್ಗೆ ಕಳೆದ ಮೂರು ದಿನಗಳ ಹಿಂದೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿತ್ತು.
ಧಾರವಾಡ(ಅ.26): ರೈತನಿಗೆ ಸಾಲ ತುಂಬುವಂತೆ ಕಿರುಕುಳ ಕೊಟ್ಟಿದ್ದ ಬ್ಯಾಂಕ್ ಮ್ಯಾನೆಜರ್‌ನನ್ನ ಬಂಧಿಸಲಾಗಿದೆ. ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಶಾಖೆಯ ಕೆವಿಜಿ ಬ್ಯಾಂಕ್ ಮ್ಯಾನೇಜರ್ ಅಶ್ವಿನ್ ವಾಸ್ನಿಕ್ ಅವರನ್ನ ಅರೆಸ್ಟ್ ಮಾಡಲಾಗಿದೆ.
ಕೆವಿಜಿ ಬ್ಯಾಂಕ್ ಮ್ಯಾನೇಜರ್ ಅಶ್ವಿನ್ ವಾಸ್ನಿಕ್ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ರೈತ ರೈತ ಮಹಾದೇವಪ್ಪ ಜಾವೂರ ಅವರಿಗೆ ಸಾಲ ತುಂಬುವಂತೆ ಕಿರುಕುಳ ಕೊಟ್ಟಿದ್ದರು. ಈ ಬಗ್ಗೆ ಕಳೆದ ಮೂರು ದಿನಗಳ ಹಿಂದೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿತ್ತು.
ಬರ ಇದ್ದರೂ ಸಾಲ ಕಟ್ಟಲು ಬ್ಯಾಂಕು ನೋಟಿಸ್: ನೋಟೀಸ್ ಕಂಡು ಆಸ್ಪತ್ರೆ ಸೇರಿದ ರೈತ!
14 ಲಕ್ಷ ಬೆಳೆಸಾಲಕ್ಕೆ 45 ಲಕ್ಷ ತುಂಬುವಂತೆ ನೋಟಿಸ್ ನೀಡಿ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ರೈತ ಮಹಾದೇವಪ್ಪ ಜಾವೂರು ನವಲಗುಂದ ಪೋಲಿಸ್ ಠಾಣೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ದೂರು ನೀಡಿದ್ದರು. ಸದ್ಯ ವರದಿಯನ್ನ ಆಧರಿಸಿ ಮ್ಯಾನೇಜರ್‌ನನ್ನ ಪೋಲಿಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಬ್ಯಾಂಕ್ ಮ್ಯಾನೆಜರ್‌ನನ್ನ ಬಂಧಿಸಿದ ನವಲಗುಂದ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.