ಚಿಕ್ಕಬಳ್ಳಾಪುರ: ಪೊಲೀಸ್‌ ಠಾಣೆ ಎದುರೇ ಭೀಕರ ಅಪಘಾತ, 13 ಜನರ ದುರ್ಮರಣ

By Girish Goudar  |  First Published Oct 26, 2023, 8:40 AM IST

ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಎದುರೇ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು 


ಚಿಕ್ಕಬಳ್ಳಾಪುರ(ಅ.26):  ಸಿಮೆಂಟ್ ಬಲ್ಕರ್ ಲಾರಿ ಟಾಟಾ ಸುಮೋ ನಡುವೆ ಸಂಭವಿಸಿದ ಅಪಘಾತದಲ್ಲಿ 13 ಜನರು ಸಾವನ್ನಪ್ಪಿ ಹಲವರಿಗೆ ಗಾಯಗಳಾದ ಘಟನೆ ಚಿಕ್ಕಬಳ್ಳಾಪುರ ನಗರದ ಹೊರವಲಯದ ಚಿತ್ರಾವತಿ ಬಳಿ ಇಂದು(ಗುರುವಾರ) ನಡೆದಿದೆ. 

ಟಾಟಾ ಸುಮೋ ಕಾರು ಸಿಮೆಂಟ್ ಬಲ್ಕರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ದುರ್ಘಟನೆಯಲ್ಲಿ 8 ಗಂಡಸರು, 4 ಹೆಂಗಸರು, 1 ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಮೃತರ ಹೆಸರು ತಿಳಿದು ಬಂದಿಲ್ಲ.

Tap to resize

Latest Videos

ಬೆಂಗಳೂರು: ಸರಣಿ ಅಪಘಾತಕ್ಕೆ ತಾಯಿ-ಮಗು ಬಲಿ, ನಾಲ್ವರಿಗೆ ಗಾಯ

ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಎದುರೇ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 

click me!