'ಪ್ರೀತಿಯ ಅಕ್ಕಾ ಆ ಮಾತು ಕನ್ನಡಿ ಮುಂದೆ ನಿಂತು ಹೇಳಿಕೊಳ್ಳಿ' : ಶೋಭಾಗೆ ಕುಸುಮಾ ರಿಯಾಕ್ಷನ್

Suvarna News   | Asianet News
Published : Oct 12, 2020, 02:07 PM ISTUpdated : Oct 12, 2020, 02:10 PM IST
'ಪ್ರೀತಿಯ ಅಕ್ಕಾ ಆ ಮಾತು ಕನ್ನಡಿ ಮುಂದೆ ನಿಂತು ಹೇಳಿಕೊಳ್ಳಿ'  : ಶೋಭಾಗೆ ಕುಸುಮಾ ರಿಯಾಕ್ಷನ್

ಸಾರಾಂಶ

ಪ್ರೀತಿಯ ಅಕ್ಕಾ ನನಗೆ ಹೇಳಿದ ಆ ಮಾತುಗಳನ್ನು ಕನ್ನಡಿ ಮುಂದೆ ನಿಂತು ನೀವೆ ಹೇಳಿಕೊಳ್ಳಿ ಎಂದು ಕುಸುಮಾ ಶೋಭಾ ಕರಂದ್ಲಾಜೆ ಮಾತಿಗೆ ಪ್ರತಿಕ್ರಿಯಿಸಿದ್ದಾರೆ

ಬೆಂಗಳೂರು (ಅ.12): ರಾಜ್ಯದಲ್ಲಿ ಉಪ ಚುನಾವಣೆ ರಂಗೆರುತ್ತಿದೆ. ಇದೇ ಸಂದರ್ಭದಲ್ಲಿ ಪಕ್ಷಗಳ ನಡುವೆ ಪರಸ್ಪರ ವಾಕ್ಸಮರಗಳು ಜೋರಾಗುತ್ತಿದೆ.  ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್‌ ಆರ್‌ ನಗರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. 

ಡಿಕೆ ರವಿ ಹೆಸರು ಉಪಯೋಗಿಸಿಕೊಳ್ಳುವ ಬಗ್ಗೆ ಶೋಭಾ ಕರಂದ್ಲಾಜೆ ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಕುಸುಮಾ ಟಾಂಗ್ ಕೊಟ್ಟಿದ್ದಾರೆ.  ತಮ್ಮ ಫೇಸ್ ಬುಕ್ ಖಾತೆಯಲ್ಲಿ  ಹೀಗೆ ಬರೆದುಕೊಂಡಿದ್ದಾರೆ. 

ಡಿ.ಕೆ. ರವಿ ಹೆಸರು ಚರ್ಚೆ ಮಾಡಿದ್ರೆ ಒಳ್ಳೆಯದಾಗಲ್ಲ : ಎಚ್ಚರಿಕೆ .

ಪ್ರೀತಿಯ ಅಕ್ಕ

ನನ್ನ ಗಂಡನ ಹೆಸರಿನಲ್ಲಿ ರಾಜಕೀಯ ಮಾಡಿದವರು ಯಾರು.. ಮಾಡುತ್ತಿರುವವರು ಯಾರು ಎನ್ನುವುದನ್ನು ಇಡೀ ದೇಶವೇ ನೋಡಿದೆ ನೋಡುತ್ತಿದೆ. ಈ ಸಂದರ್ಭದಲ್ಲಿ ನನಗೆ ಅಕ್ಕ ಮಹಾದೇವಿಯವರ ನೊಂದವರ ನೋವ ನೋಯದವರೆತ್ತ ಬಲ್ಲರೋ ? ಎಂಬ ವಚನ ನೆನಪಿಗೆ ಬರುತಿದೆ.

ರವಿ ಅವರ ಹೆಸರನ್ನು ಬಳಸಿಕೊಂಡವರಿಗೆ ಒಳ್ಳೆಯದಾಗುವುದಿಲ್ಲ ಎಂದಿದ್ದೀರಿ. 

 ಇದು ನಿಮಗೆ ನೀವೆ ಹೇಳಿದಂತೆ ಇದೆ. ಕನ್ನಡಿ ಮುಂದೆ ನಿಂತು ಇನ್ನೊಮ್ಮೆ ಈ ಹೇಳಿಕೆ ಕೊಟ್ಟು ನೋಡಿ. ಸತ್ಯ ಮನದಟ್ಟಾಗುತ್ತದೆ ಎಂದು ಬರೆದುಕೊಂಡಿದ್ದಾರೆ. 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು