* ಬೆಳ್ಳೂಡಿ ಕನಕ ಗುರುಪೀಠದಲ್ಲಿ ಐಎಎಸ್ ಯುಪಿಎಸ್ ಸಿ ಕೋಚಿಂಗ್ ಸೆಂಟರ್ ಉದ್ಘಾಟನೆ
* ಸರ್ಕಾರದ ಮೇಲೆ ಒತ್ತಡ ಹಾಕಲು ಚಿಂತನಮಂಥನ
* ಶ್ರೀಗಳು ಕಿಂಡರ್ ಮಾಡಿದವರಿಗೆ ಟಾಂಗ್ ನೀಡಿದ ಕಾಗಿನೆಲೆ ನಿರಂಜನಾನಂದ ಶ್ರೀಗಳು
ದಾವಣಗೆರೆ(ಜು.04): ರಾಜ್ಯ ಸರ್ಕಾರಕ್ಕೆ ಇದೀಗ ಮತ್ತೊಂದು ಮೀಸಲಾತಿ ಹೋರಾಟ ಕಂಟಕ ಶುರುವಾಗುವ ಲಕ್ಷಣಗಳಿವೆ. ಈಗಾಗಲೇ ಕಳೆದ ಮೂರುವರೆ ತಿಂಗಳಿನಿಂದ ಎಸ್‌ಟಿ ಮೀಸಲಾತಿ ಹೆಚ್ಚುವರಿಗಾಗಿ ವಾಲ್ಮೀಕಿ ಶ್ರೀ ಬೆಂಗಳೂರಿನಲ್ಲೇ ಧರಣಿ ನಿರತರಾಗಿದ್ದಾರೆ. ಇದೀಗ ಕುರುಬ ಸಮಾಜ ಎಸ್‌ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹಾಕಲು ಚಿಂತನಮಂಥನ ನಡೆಸಿದೆ. ಹರಿಹರ ಸಮೀಪವಿರುವ ಬೆಳ್ಳೂಡಿ ಕನಕ ಗುರುಪೀಠದಲ್ಲಿ ಮೀಸಲಾತಿಗೆ ಹಕ್ಕೊತ್ತಾಯ ಸಭೆ ನಡೆದಿದ್ದು ಮತ್ತೊಂದು ಮೀಸಲಾತಿ ಹೋರಾಟ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕೆಂದು ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡಿ ಶಕ್ತಿ ಪ್ರದರ್ಶನ ಮಾಡಿದ್ದು ಇತಿಹಾಸ. ಈಗ ಮತ್ತೆ ದಾವಣಗೆರೆಯ ಹರಿಹರ ತಾಲ್ಲೂಕಿನ ಬಳಿ ಇರುವ ಬೆಳ್ಳೋಡಿ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಎಸ್ ಟಿ ಮೀಸಲಾತಿ ಸೌಲಭ್ಯಕ್ಕಾಗಿ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕುವುದಕ್ಕಾಗಿ ಮೀಸಲಾತಿ ಹಕ್ಕೊತ್ತಾಯ ಸಭೆ ನಡೆಸಿದ್ದಾರೆ. ಈಗಾಗಲೇ ಬುಡಕಟ್ಟು ಸಂಶೋಧನ ಕೇಂದ್ರ ಈಗಾಗಲೇ ಅಧ್ಯಯನ ನಡೆಸಿ ವರದಿ ತಯಾರು ಮಾಡುತ್ತಿದೆ. ಈಗಾಗಲೇ 70% ರಷ್ಟು ಕೆಲಸ ಮುಗಿದಿದ್ದು, ರಾಜ್ಯ ಸರ್ಕಾರದ ಮುಂದೆ ವರದಿ ಬಂದ ನಂತರ ಕೇಂದ್ರಕ್ಕೆ ಕಳುಹಿಸುವ ಒತ್ತಾಯವನ್ನು ಮಾಡುತ್ತೇವೆ ಎಂದು ಶ್ರೀಗಳು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.
ಎಸ್‌ಸಿ ಮೀಸಲಿಗೆ ಬೇಡ ಜಂಗಮರ ಹೋರಾಟ, ಹೋರಾಟಗಾರರನ್ನು ತಡೆದಿದ್ದಕ್ಕೆ ಟ್ರಾಫಿಕ್ ಜಾಮ್
ಕನಕ ಗುರುಪೀಠದಲ್ಲಿ ಯುಪಿಎಸ್ಸಿ ಕೆಪಿಎಸ್ಸಿ ತರಬೇತಿ ಕೇಂದ್ರ ಪ್ರಾರಂಭೋತ್ಸವ ನಂತರ ಸಬೆಯನ್ನು ಮಾಡಿದ್ದು, ಈ ಸಭೆಯಲ್ಲಿ ರಾಜ್ಯದ ಹಾಲುಮತ ಸಮಾಜದ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಮುಂದಿನ ದಿನಗಳ ಹೋರಾಟ ಹಾಗೂ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವ ರೂಪರೇಷೆ ಗಳನ್ನು ರೂಪಿಸಿದ್ದಾರೆ. ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಿ 2A ಯಲ್ಲಿ ಇರುವ ಮೀಸಲಾತಿಯನ್ನು ಎಸ್ ಟಿ ಗೆ ವರ್ಗಾವಣೆ ಮಾಡಿ ನಮ್ಮನ್ನು ಎಸ್ ಟಿ ಗೆ ಸೇರ್ಪಡೆ ಮಾಡಲಿ ಎಂದಿದ್ದಾರೆ. ಅದರೆ ಈ ಈಗಿರುವ ಎಸ್‌ಟಿ ಸಮುದಾಯದ ಮೀಸಲಾತಿ ಯನ್ನು ಕಿತ್ತುಕೊಳ್ಳುತ್ತಿಲ್ಲ. ವರದಿ ಬಂದ ಕೂಡಲೇ ಕೇಂದ್ರಕ್ಕೆ ಕಳುಹಿಸಿ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ನೀಡುವಂತೆ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಐಎಎಸ್ ಯುಪಿಎಸ್‌ಸಿ ಕೋಚಿಂಗ್ ಸೆಂಟರ್ ಉದ್ಘಾಟನೆ
ದಾವಣಗೆರೆ ಜಿಲ್ಲೆಯ ಹರಿಹರದ ಬೆಳ್ಳೋಡಿ ಕನಕ ಗುರುಪೀಠ ಮಠದ ಆವರಣದಲ್ಲಿ ಇಂದು ಯುಪಿಎಸ್ಸಿ ,ಕೆಪಿಎಸ್ಸಿ ಕೋಚಿಂಗ್ ಸೆಂಟರ್ ಉದ್ಘಾಟನೆಯಾಗಿದೆ. ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಗಿನೆಲೆ ನಿರಂಜನಾನಂದ ಶ್ರೀಗಳಿಗೆ ಸಚಿವ ಬೈರತಿ ಬಸವರಾಜ್, ಮಾಜಿ ಎಂಎಲ್‌ಸಿ ಹೆಚ್.ಎಂ. ರೇವಣ್ಣ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ದಾರೆ.
ಪಂಚಮಸಾಲಿ ಮೀಸಲಾತಿಗಾಗಿ ವಿಧಾನಸೌಧದ ಒಳಗೂ ಶಕ್ತಿ ಪ್ರದರ್ಶನ: ಕೂಡಲ ಶ್ರೀ
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಕಿಂಡರ್ ಮಾಡಿದವರಿಗೆ ಟಾಂಗ್ ನೀಡಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಳ್ಳೋಡಿ ಬಳಿ ಇರುವ ಕನಕ ಗುರು ಪೀಠ ಮಠವನ್ನುಕಟ್ಟುವಾಗ ಕಿಂಡಲ್ ಮಾಡಿದ್ರು.. ಜಮೀನು ತೆಗೆದುಕೊಂಡ್ರೆ ಆಯ್ತಾ, ಮಠ ಕಟ್ಟಬೇಕಲ್ವಾ, ದೊಡ್ಡ ದೊಡ್ಡ ಸಮುದಾಯದವರ ಮಠ ಕಟ್ಟಲು ಹೋಗಿ ಅಡ್ಡಾಡ್ಡ ಮಲಗಿದ್ದಾರೆ ಎಂದು ಕಿಂಡಲ್ ಮಾಡಿದ್ರು. ಅವರು ಮಾಡಿದ ಕಿಂಡಲ್ ನಿಂದ ನಮಗೆ ಮಠ ಕಟ್ಟಲು ಸಾಧ್ಯವಾಯಿತು. ಮಠ ಕಟ್ಟಿದ ವರ್ಷವೇ ನಮ್ಮ ಸಮಾಜದ ಶಾಸಕರನ್ನು ಮಾಡಿದ್ದೇವೆ.
ಈಗ ಕೆಎಎಸ್ ಐಪಿಎಸ್ ಕೋಚಿಂಗ್ ಸೆಂಟರ್ ಮಾಡಲು ಹೊರಟಾಗ ಕಿಂಡಲ್ ಮಾಡಿದ್ರು. ಕಟ್ಟಡ ಕಟ್ಟಿ ಸಿದ್ದರಾಮಯ್ಯ ನವರ ಕೈಯಲ್ಲಿ ಉದ್ಘಾಟನೆ ಮಾಡಿದ್ದೇವೆ. ಐದು ಲಕ್ಷ ಜನರನ್ನು ಸೇರಿಸಿ ಉದ್ಘಾಟನೆ ಮಾಡಿದ್ದೇವೆ. ಐಎಎಸ್ ಕೆಎಎಸ್ ಕೋಚಿಂಗ್ ಸೆಂಟರ್ ಬಗ್ಗೆ ಒಬ್ಬ ಮುಖಂಡ ತುಚ್ಛವಾಗಿ ಮಾತನಾಡಿದ್ದರು. ಇಲ್ಲಿ ಕೋಚಿಂಗ್ ಸೆಂಟರ್ ಮಾಡಿದ್ದು ನಿಮ್ಮ ಮೂರ್ಖತನ ಎಂದು ಹೇಳಿದ್ರು. ಆದಕ್ಕೆ ಇಂದು ಉತ್ತರ ಕೊಟ್ಟಿದ್ದೇವೆ. ಇದು ಎಲ್ಲಿಯವರೆಗೂ ಎಂದರೆ ಇಲ್ಲಿರುವ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಅಧಿಕಾರಿಗಳಾಗುವರೆಗೂ ಇದು ನಿಲ್ಲುವುದಿಲ್ಲ ಎಂದರು.