ಕುಂದಾಪುರ ಭಾಷೆ ನಮ್ಮ ಬದುಕು. ಹೊಸ ಪೀಳಿಗೆ ಸಂಸ್ಕೃತಿಯಿಂದ ದೂರ ಉಳಿಯುತ್ತಿದೆ. ನಮಗೆ ರಾಮಾಯಣ, ಮಹಾಭಾರತಗಳೆಲ್ಲವೂ ತಿಳಿದಿದ್ದು ಯಕ್ಷಗಾನದಿಂದ, ಕುಂದಾಪ್ರ ಕನ್ನಡ ಹಬ್ಬದಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳು ನಮ್ಮತನ ಅರಿತು ಪುನಃ ಆಚರಣೆಗೆ ತರುವಂತಾಗಬೇಕು. ಸಿನಿಮಾದಲ್ಲೂ ಅವಕಾಶ ಸಿಕ್ಕಲ್ಲೆಲ್ಲ ಅಕ್ಕಿಮುಡಿ, ಮೀನುಗಾರಿಕೆ, ಕಂಬಳ, ನಾಟಿ ಸೇರಿ ಹಲವು ಸಂಸ್ಕೃತಿಯನ್ನು ತೋರಿಸಿದ್ದೇವೆ ಎಂದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ
ಬೆಂಗಳೂರು(ಆ.18): 'ಎಷ್ಟೇ ಎತ್ತರಕ್ಕೇರಿದರೂ ನಮ್ಮ ನೆಲಮೂಲ ಮರೆಯಬಾರದು. ಹಿರಿಯರ ಹಾದಿ, ಭಾಷೆ- ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯಗಳು ಆಗಬೇಕು' ಎಂದು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
ಶನಿವಾರ ಬೆಂಗಳೂರು ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ 'ಕುಂದಾಪ್ರ ಕನ್ನಡ ಹಬ್ಬ'ದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಂಪತಿ ಸಮೇತ ಊರ ಗೌರವ' ಪ್ರಶಸ್ತಿ ಸ್ವೀಕರಿಸಿ ಕುಂದಾಪುರ ಕನ್ನಡದಲ್ಲಿ ಮಾತನಾಡಿದರು.
ರಿಷಬ್ ಶೆಟ್ಟಿ@ 41: ಸಿನಿಮಾ ನೋಡಲು ಹೋಗಿ ಹಸೆಮಣೆ ಏರುವವರೆಗೆ... ಹುಟ್ಟುಹಬ್ಬಕ್ಕೆ ಪತ್ನಿಯಿಂದ ಲವ್ಲಿ ವಿಷ್
`ಕುಂದಾಪುರ ಭಾಷೆ ನಮ್ಮ ಬದುಕು. ಹೊಸ ಪೀಳಿಗೆ ಸಂಸ್ಕೃತಿಯಿಂದ ದೂರ ಉಳಿಯುತ್ತಿದೆ. ನಮಗೆ ರಾಮಾಯಣ, ಮಹಾಭಾರತಗಳೆಲ್ಲವೂ ತಿಳಿದಿದ್ದು ಯಕ್ಷಗಾನದಿಂದ, ಕುಂದಾಪ್ರ ಕನ್ನಡ ಹಬ್ಬದಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳು ನಮ್ಮತನ ಅರಿತು ಪುನಃ ಆಚರಣೆಗೆ ತರುವಂತಾಗಬೇಕು. ಸಿನಿಮಾದಲ್ಲೂ ಅವಕಾಶ ಸಿಕ್ಕಲ್ಲೆಲ್ಲ ಅಕ್ಕಿಮುಡಿ, ಮೀನುಗಾರಿಕೆ, ಕಂಬಳ, ನಾಟಿ ಸೇರಿ ಹಲವು ಸಂಸ್ಕೃತಿಯನ್ನು ತೋರಿಸಿದ್ದೇವೆ' ಎಂದರು.
'ನಾವು ಎಲ್ಲಿಗೆ ಹೋದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ ನಾವು ಎಲ್ಲಿಂದ ಬಂದವರು ಎನ್ನುವುದನ್ನು ಮರೆಯಬಾರದು. ಅದೇ ನಮ್ಮ ವ್ಯಕ್ತಿತ್ವ ಹೇಳುತ್ತದೆ ಹಾಗೂ ಸರಿಯಾದ ದಾರಿಯಲ್ಲಿ ನಡೆಯಲು ನೆರವಾಗುತ್ತದೆ. ನಮ್ಮ ಸಾಧನೆ ಅದರ ಖುಷಿ ನಮ್ಮವರಿಗೆ, ನಮ್ಮ ಮನಸ್ಸಿಗೆ ಸೀಮಿತವಾಬೇಕು. ಅದನು ತಲೆಗೇರಿಸಿಕೊಳ್ಳಬಾರದು' ಎಂದು ಹೇಳಿದರು.
ಹಳೆಯ ಮಧುರ ಕ್ಷಣಗಳನ್ನ ಮೆಲುಕು ಹಾಕಿದ ರಿಷಭ್ ಶೆಟ್ಟಿ ಪತ್ನಿ… ಫ್ಯಾನ್ಸ್ ಏನಂದ್ರು ಗೊತ್ತಾ?
ಕುಂದಾಪುರ ಶಾಸಕ ಕಿರಣ ಕೊಡ್ಡಿ, 'ಭಾಷೆಯ ಹೆಸರಿನಲ್ಲಿ ಹಬ್ಬ ಆಚರಿಸುತ್ತಿರುವುದು ವಿಶೇಷ ವಿಚಾರ. ಆಧುನಿಕ ಯುಗದಲ್ಲಿ ಇಂಗ್ಲಿಷ್ ಸೇರಿ ವಿವಿಧ ಭಾಷೆಗಳ ವ್ಯಾಮೋಹದಿಂದ ಕುಂದಾಪುರ ಭಾಷೆಯನ್ನು ಮುಂದಿನ ಪೀಳಿಗೆಯವರು ಮಾತನಾಡುವುದು ಕಷ್ಟವಾಗಬಹುದು. ಆದರೆ ಇಂತಹ ಕಾರ್ಯಕ್ರಮ ಕುಂದಾಪುರ ಭಾಷೆಯ ಮೇಲೆ ಅಭಿಮಾನ ಮೂಡಿಸಿ ಮಾತನಾಡುವಂತೆ ಮಾಡುತ್ತದೆ' ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು, ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ, ಎಂ.ಎಸ್. ಮಂಜ, ಲೈಫ್‌ಲೈನ್ ಫೀಡ್ಸ್ ಪ್ರೈ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಕುಮಾರ್ ಹೆಗ್ಡೆ, ಉದ್ಯಮಿ ಶಿವಕುಮಾರ ಹೆಗ್ಡೆ, ಸತೀಶ್ ಶೆಟ್ಟಿ ಇದ್ದರು.