ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಜೆಟ್‌ನಲ್ಲಿ ಬಸವ ಬೃಂಗೇಶ್ವರ ಮಠಕ್ಕೆ ಒಂದು ಕೋಟಿ ಬಿಟ್ಟರೆ ನನ್ನ ಗುಬ್ಬಿ ಕ್ಷೇತ್ರಕ್ಕೆ ಒಂದು ರುಪಾಯಿ ಅನುದಾನ ಕೊಡಲಿಲ್ಲ ಆದರೆ ಬೇರೆ ಬೇರೆ ತಾಲೂಕಿಗೆ ಬಿಜೆಪಿ ಶಾಸಕರು ಇರುವ ಕ್ಷೇತ್ರಕ್ಕೆ ಸಾಕಷ್ವು ಅನುದಾನ ನೀಡಿ ಗುಬ್ಬಿ ಕ್ಷೇತ್ರಕ್ಕೆ ಮೋಸ ಮಾಡಿದ್ದಾರೆ ಎಂದು ಶಾಸಕ ಮಾಜಿ ಎಸ್.ಆರ್ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ಗುಬ್ಬಿ : ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಜೆಟ್‌ನಲ್ಲಿ ಬಸವ ಬೃಂಗೇಶ್ವರ ಮಠಕ್ಕೆ ಒಂದು ಕೋಟಿ ಬಿಟ್ಟರೆ ನನ್ನ ಗುಬ್ಬಿ ಕ್ಷೇತ್ರಕ್ಕೆ ಒಂದು ರುಪಾಯಿ ಅನುದಾನ ಕೊಡಲಿಲ್ಲ ಆದರೆ ಬೇರೆ ಬೇರೆ ತಾಲೂಕಿಗೆ ಬಿಜೆಪಿ ಶಾಸಕರು ಇರುವ ಕ್ಷೇತ್ರಕ್ಕೆ ಸಾಕಷ್ವು ಅನುದಾನ ನೀಡಿ ಗುಬ್ಬಿ ಕ್ಷೇತ್ರಕ್ಕೆ ಮೋಸ ಮಾಡಿದ್ದಾರೆ ಎಂದು ಶಾಸಕ ಮಾಜಿ ಎಸ್.ಆರ್ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಮಾದಪುರ ಶ್ರೀ ಮಣ್ಣಮ್ಮ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚುನಾವಣೆ ಪ್ರಚಾರ ಆರಂಭಿಸಿ ನಂತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಮಾತ್ರ ನನ್ನ ಕುಮಾರಸ್ವಾಮಿ ನಡುವೆ ಜಗಳ ಬಿಟ್ಟರೆ ಬೇರೆ ಯಾವುದು ವಿಚಾರ ಇರಲಿಲ್ಲ. ಆದರೆ ಕುಮಾರಸ್ವಾಮಿಯವರೇ ನನ್ನಿಂದ ದೂರ ಆದರು. ಶಾಸಕರು ಇರುವಾಗಲೇ ಬೇರೊಬ್ಬ ಯನ್ನು ಘೋಷಣೆ ಮಾಡಿದರು. ಇದರಿಂದ ನಾನು ಬೇರೆ ಪಕ್ಷಕ್ಕೆ ಹೋಗಬೇಕಾಯಿತು ಎಂದರು.
undefined
ಲೋಕಸಭಾ ಚುನಾವಣೆಯಲ್ಲಿ ದೇವೆಗೌಡರ ಸೋಲಿಗೆ ನಾನೇ ಕಾರಣ ಎಂದು ಹೇಳುತ್ತಿದ್ದಾರೆ. ಗುಬ್ಬಿಯಲ್ಲಿ ದೇವೆಗೌಡರಿಗೆ ಹೆಚ್ಷು ಮತಗಳು ಬಂದಿದೆ. ಎಲ್ಲ ಕಾರ್ಯಕರ್ತರಿಗೂ ನಾನು ಜೆಡಿಎಸ್ ಪಕ್ಷಕ್ಕೆ ಮತಹಾಕಿ ಅಂಥ ಹೇಳಿದ್ದೇನೆ. ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಎಂದು ಮಾಡಿಲ್ಲ ಮಾಡೋದು ಇಲ್ಲ. ದೇವೆಗೌಡರ ಗೆಲುವಿಗೆ ಹಗಲು ರಾತ್ರಿ ಪ್ರಚಾರ ಮಾಡಿ ಗುಬ್ಬಿಯಲ್ಲಿ ಹೆಚ್ಚುಮತಗಳು ಬಂದಿದೆ. ಎಲ್ಲವನ್ನು ನನ್ನ ಮೇಲೆ ಹಾಕಿ ಗೊಬಿ ಕುರಿಸಿದ್ದಾರೆ. ನಾನೆಂದು ಅವರಿಂದ ದೂರ ಅಗಿಲ್ಲ ನನ್ನಿಂದ ಅವರೇ ದೂರ ಹೋಗಿ ಈಗ ನನ್ನ ಮೇಲೆ ಇಲ್ಲದ ಸಲ್ಲದ ಸುಳ್ಳು ಹೇಳಿದ್ದಾರೆ ಎಂದರು.
ನಾನು ಯಾರಿಗೋ ಹೆದರುವ ಪ್ರಶ್ನೆಯೇ ಇಲ್ಲ ನನ್ನ ಮತದಾರರಿಗೆ ಮಾತ್ರ ಎದರುತ್ತೇನೆ ಬಿಟ್ಟರೇ ಇನ್ಯಾರಿಗೋ ಎದರುವ ಮಾತೇ ಇಲ್ಲ. ನನ್ನಗೂ ಚುನಾವಣೆ ಮಾಡುಕ್ಕೆ ಬರುತ್ತೇ. ನಾಲ್ಕು ಭಾರಿ ಚುನಾವಣೆ ಎದುರಿಸಿದ್ದೇನೆ. ಈಗಲೂ ಪ್ರತಿ ಮನೆ ಮನೆಗೆ ಹೋಗುತ್ತೇನೆ. ನನ್ನ ಕಾರ್ಯಕರ್ತರೇ ನನ್ನ ಆಸ್ತಿ. ಮುಂಬರುವ ಚುನಾವಣೆಯಲ್ಲಿ ಗೆಲುವು ನನ್ನದೆ ಎಂದು ಕಾರ್ಯಕರ್ತರಿಗೆ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶಂಕರನಂದ್ ಮಾತನಾಡಿ, ವಾಸಣ್ಣ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ಆನೆ ಬಲ ಬಂದತೆ ಆಗಿದೆ. ಗುಬ್ಬಿಯಲ್ಲಿ ಕಾಂಗ್ರೆಸ್ ಅಸ್ವಿತ್ವ ಕಳೆದುಕೊಂಡಿತ್ತು. ಸುಮಾರು ವರ್ಷದಿಂದ ಕಾಂಗ್ರೆಸ್ ಗುಬ್ಬಿಯಲ್ಲಿ ಗೆದ್ದೆ ಇಲ್ಲ ಅದ್ದರಿಂದ ಈ ಭಾರಿ ಶ್ರೀನಿವಾಸ್ ಬಂದಿರುವುದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು ಗುಬ್ಬಿಯಲ್ಲಿ ಕಾಂಗ್ರೆಸ್ ಶಾಸಕರಾಗಿ ಶ್ರೀನಿವಾಸ್ ಗೆಲ್ಲುವುದು ಶತಸಿದ್ಧ. ಸಣ್ಣಪುಣ್ಣ ವೈಯಕ್ತಿಕ ದ್ವೇಷಗಳಿಂದ ಕೆಲವು ಜನರು ಬಂದಿಲ್ಲ. ಪಕ್ಷದಲ್ಲಿ ಗೊಂದಲಗಳು ಸರ್ವೆ ಸಾಮಾನ್ಯ ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿಪಡಿಸಿಕೊಂಡು ಚುನಾವಣೆಗೆ ಹೋಗೋಣ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ತಾತಯ್ಯ, ಚಿಕ್ಕರಂಗಯ್ಯ, ಗುರುರೇಣುಕರಾಧ್ಯ, ಬಿದರೆ ಬಿ.ಕೆ.ಕುಮಾರು, ಮಂಜನಾಥ್, ಯತೀಶ್, ಶಂಕರಪ್ಪ, ಹೊಸಕೆರೆ ಬಾಬು, ಕೋಳಿ ಶಿವಣ್ಣ, ನಿಂಬೆಕಟ್ಟೆಜಯಣ್ಣ, ಜುಂಜೇಗೌಡ, ಭರತ್ ಗೌಡ, ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.