ಕೆಟ್ಟದಾರಿಯಲ್ಲಿ ಹೋಗುತ್ತಿರುವವರನ್ನು ಯಾವತ್ತೂ ಸಮರ್ಥಿಸಬಾರದು. ತಪ್ಪುಗಳನ್ನು ಸಮರ್ಥಿಸುವುದು ತಪ್ಪು ಮಾಡಿದಷ್ಟೇ ಪಾಪ ಎಂದು ಹಿರಿಯ ಸಾಹಿತಿ ಪ್ರೊ. ಎಸ್.ಪಿ. ಪದ್ಮಪ್ರಸಾದ್ ಮಾರ್ಮಿಕವಾಗಿ ನುಡಿದರು.
ತುಮಕೂರು : ಕೆಟ್ಟ ದಾರಿಯಲ್ಲಿ ಹೋಗುತ್ತಿರುವವರನ್ನು ಯಾವತ್ತೂ ಸಮರ್ಥಿಸಬಾರದು. ತಪ್ಪುಗಳನ್ನು ಸಮರ್ಥಿಸುವುದು ತಪ್ಪು ಮಾಡಿದಷ್ಟೇ ಪಾಪ ಎಂದು ಹಿರಿಯ ಸಾಹಿತಿ ಪ್ರೊ. ಎಸ್.ಪಿ. ಪದ್ಮಪ್ರಸಾದ್ ಮಾರ್ಮಿಕವಾಗಿ ನುಡಿದರು.
ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಿಗಂಬರ ಜೈನ ಮತ್ತು ಶ್ವೇತಾಂಬರ ಜೈನ ಸಮುದಾಯದ ಬಾಂಧವರು, ಜಿಲ್ಲಾಡಳಿತ ಅಧಿಕಾರಿಗಳ ಸಮ್ಮುಖದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಹಮ್ಮಿಕೊಳ್ಳಲಾಗಿದ್ದ ಭಗವಾನ್ ಮಹಾವೀರರ ಜಯಂತಿಯಲ್ಲಿ ಮಾತನಾಡಿದರು.
ತಪ್ಪು ಮಾಡಿದಷ್ಟೇ ಪಾಪ ತಪ್ಪನ್ನು ಸಮರ್ಥಿಸುವವರದೂ ಆಗಿದೆ ಎಂಬುದು ಮಹಾವೀರ ತೀರ್ಥಂಕರರ ಸಂದೇಶವಾಗಿದೆ. ಮನುಷ್ಯನ ಆಸೆಗೆ ಕೊನೆಯಿಲ್ಲ. ನಿಮ್ಮ ಆಸೆಗಳನ್ನು, ವಸ್ತುಗಳನ್ನು ಪರಿಮಿತಿಯಲ್ಲಿಟ್ಟುಕೊಳ್ಳಬೇಕು ಎಂಬುದು ಸೇರಿದಂತೆ ಅನೇಕ ಅಂಶಗಳನ್ನು ಮಹಾವೀರರು ಎಲ್ಲ ಕಾಲಕ್ಕೂ ಅನ್ವಯವಾಗುವಂತೆ ಬೋಧಿಸುತ್ತಿದ್ದರು. ಜತೆಗೆ ಪ್ರಾಣಿ ಹಿಂಸೆಯನ್ನು ಸದಾ ವಿರೋಧಿಸಿದ್ದರು ಎಂದರು.
ಮಹಾವೀರರ ಪ್ರಭಾವದಿಂದಾಗಿ ಹಿಂಸೆ ಕಡಿಮೆಯಾಗಿ ಅಹಿಂಸೆ ಹೆಚ್ಚಾಗಿರುವುದನ್ನು ನಾವು ಕಾಣಬಹುದು. ಮಹಾವೀರರು ಸರ್ವಕಾಲಕ್ಕೂ ಪೂಜನೀಯರಾಗಿದ್ದಾರೆ ಎಂದುತಿಳಿಸಿದರು.
ಹೊಸ ಅಲೆ ಸೃಷ್ಟಿಸಿದ ಅಹಿಂಸಾ ಸಿದ್ಧಾಂತ:
ಮಹಾವೀರರು ಜೈನ ಧರ್ಮದ 24ನೇ ತೀರ್ಥಂಕರರು. ಅವರು ಬೋಧಿಸಿದಂತಹ ಅಹಿಂಸಾ ಸಿದ್ಧಾಂತ ಇಡೀ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಠಿಸಿತು. ಇದರೊಂದಿಗೆ ಮಹಾವೀರರು ದೇಶಿ ಭಾಷೆಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಯೋಜನಾ ಅಭಿವೃದ್ಧಿ ಅಧಿಕಾರಿ ಆಂಜಿನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಸುರೇಶ್‌ಕುಮಾರ್, ದಿಗಂಬರ ಜೈನ್ ಸಮುದಾಯದ ಅಧ್ಯಕ್ಷರಾದ ಎಸ್.ಜೆ. ನಾಗರಾಜು, ಆರ್.ಎ. ಸುರೇಶ್, ವಿನಯ್ ಜೈನ್, ಬಿ.ಎಲ್. ಚಂದ್ರಕೀರ್ತಿ, ಶ್ವೇತಾಂಬರ ಜೈನ್ ಸಮುದಾಯದ ಅಧ್ಯಕ್ಷರಾದ ಉತ್ತಮ್ ಬಾಯ್, ಸುರೇಂದ್ರ ಷಾ ಇತರರಿದ್ದರು.
ಮಹಾವೀರರು ದಿನವಾಣಿ ಸರ್ವಭಾಷಾಮಯಿ ಎಂದು ಸದಾ ಹೇಳುತ್ತಿದ್ದರು. ಯಾರು ಏನೇ ವಿಚಾರ ಹೇಳಿದರೂ ಅದರಲ್ಲಿನ ಸತ್ಯಾಂಶವನ್ನು ಗ್ರಹಿಸಿಕೊಳ್ಳಬೇಕು. ನೀನು ಬದುಕು, ಬೇರೆಯವರನ್ನು ಬದುಕಲಿಕ್ಕೆ ಬಿಡು ಎನ್ನುವುದು ಮಹಾವೀರರ ಸಿದ್ದಾಂತವಾಗಿದೆ.
- ಪ್ರೊ. ಎಸ್.ಪಿ. ಪದ್ಮಪ್ರಸಾದ್, ಪದ್ಮಪ್ರಸಾದ್
ಮಕ್ಕಳ ಕೆಟ್ಟ ವರ್ತನೆ ಸರಿಪಡಿಸುವುದು ಹೇಗೆ
ಮಕ್ಕಳು ಕೆಲವೊಮ್ಮೆ ಕೆಟ್ಟ ವರ್ತನೆ ಮಾಡುತ್ತಾರೆ. ಆದರೆ, ಯಾವತ್ತೂ ಹಾಗೆಯೇ ಮಾಡುತ್ತಿರುವುದಕ್ಕೂ, ಯಾವಾಗಲಾದರೂ ಒಮ್ಮೆ ಮಾಡುವುದಕ್ಕೂ ವ್ಯತ್ಯಾಸವಿದೆ. ಒಂದು ಮಾತಿದೆ, “ಬೆಳೆಯುವ ಕುಡಿ ಮೊಳಕೆಯಲ್ಲಿʼ ಎಂದು. ಇದು ಸತ್ಯವಾದದ್ದು. ನಿಮ್ಮ ಮಗ ಅಥವಾ ಮಗಳು ಸದಾಕಾಲ ಕೆಲವು ದುರ್ವರ್ತನೆ ತೋರುತ್ತಿದ್ದರೆ ಅಸಡ್ಡೆ ಮಾಡುವುದು ಸರಿಯಲ್ಲ. ಏಕೆಂದರೆ, ಇದು ಅವರ ಭವಿಷ್ಯದ ಪ್ರಶ್ನೆ. ಕೆಲವು ವರ್ತನೆಗಳು ದಾರಿ ತಪ್ಪಿದ ಮಕ್ಕಳ ಲಕ್ಷಣಗಳನ್ನು ತೋರುತ್ತವೆ. ಹೀಗಾಗಿ, ಇವುಗಳ ಬಗ್ಗೆ ಗಮನ ವಹಿಸಬೇಕು. ವರ್ತನೆ ಸಂಬಂಧಿ ಸಮಸ್ಯೆಗಳನ್ನು ಮೊದಲೇ ಗುರುತಿಸಿ ಅವುಗಳನ್ನು ನಿಭಾಯಿಸುವುದು ಮುಖ್ಯ. ಕೆಲವೊಮ್ಮೆ ಮಗುವಾಗಿದ್ದಾಗ ಸಹ್ಯವೆನಿಸುವ ಕೆಲವು ವರ್ತನೆಗಳು ಹಾಗೆಯೇ ಮುಂದುವರಿದರೆ ದೊಡ್ಡವರಾಗುವ ಹಂತದಲ್ಲಿ ಸಹ್ಯವಾಗುವುದಿಲ್ಲ. ಅವರು ನಿಭಾಯಿಸುವ ಹಂತದಿಂದ ಮೀರಿ ಹೋದರೆ ಪಾಲಕರಿಗೂ ಬಹುದೊಡ್ಡ ಸವಾಲು ಎದುರಾಗುತ್ತದೆ.
ಕೆಟ್ಟ ಮಕ್ಕಳು ಕೆಟ್ಟ ಪಾಲಕತನದಿಂದ ಸೃಷ್ಟಿಯಾಗುವುದಿಲ್ಲ. ಅದಕ್ಕೆ ಕಾರಣಗಳನ್ನು ಹುಡುಕುವುದು ವ್ಯರ್ಥ. ಉತ್ತಮ ಪಾಲಕರಿಗೂ ದಾರಿ ತಪ್ಪಿದ ಮಕ್ಕಳಿರುವ ಎಷ್ಟೋ ದೃಷ್ಟಾಂತಗಳಿವೆ. ಅಷ್ಟಕ್ಕೂ ಎಷ್ಟೇ ಒಳ್ಳೆಯವರಾದರೂ ಎಲ್ಲ ಪಾಲಕರೂ ಒಂದಿಲ್ಲೊಂದು ತಪ್ಪುಗಳನ್ನು ಮಾಡಿರುತ್ತಾರೆ. ಹೀಗಾಗಿ, ಹಳಹಳಿಸುವ ಮುನ್ನ ಮಕ್ಕಳ ವರ್ತನೆಗಳನ್ನು ಸುಧಾರಿಸಲು ಧನಾತ್ಮಕ ಕ್ರಮಗಳ ಮೂಲಕ ಯತ್ನಿಸಬೇಕು.
ಸಂವೇದನೆ ರಹಿತವಾಗಿರುವುದು (Insensitivity): ಒಂದೊಮ್ಮೆ ನಿಮ್ಮ ಮಗು ಇತರರ ಬಗ್ಗೆ ಸಂವೇದನೆ, ಕರುಣೆ, ಸಹಾನುಭೂತಿ (Empathy) ವ್ಯಕ್ತಪಡಿಸದೇ ಇದ್ದರೆ ಅದು ಸಮಸ್ಯೆಯ (Problem) ಲಕ್ಷಣ. ಕರುಣೆ ಹೊಂದಿರುವ ಮಕ್ಕಳು ಸಾಮಾನ್ಯವಾಗಿ ಚಿತ್ರ ಬಿಡಿಸುವಲ್ಲಿ ಆಸಕ್ತಿ ಹೊಂದಿರುತ್ತಾರೆ. ಪ್ರೀತಿಪಾತ್ರರು ಹುಷಾರಿಲ್ಲದೆ ಇರುವಾಗ ಕಾಳಜಿ (Cares) ವಹಿಸುತ್ತಾರೆ. ದುಃಖದಲ್ಲಿರುವಾಗ ಪಾಲಕರನ್ನು ಬಿಗಿಯಾಗಿ ತಬ್ಬಿಕೊಳ್ಳಲು ಬಯಸುತ್ತಾರೆ. ಆದರೆ, ಸಮಸ್ಯೆ ಹೊಂದಿರುವ ಮಕ್ಕಳು ಇಂತಹ ಸಂವೇದನೆ ಹೊಂದಿರುವುದಿಲ್ಲ. ಇಂತಹ ಮಕ್ಕಳಿಗೆ ಇತರರ ಕಷ್ಟಗಳ ಬಗ್ಗೆ ತಿಳಿಸಿ ಹೇಳುವುದು ಹಾಗೂ ಅವರಿಗೆ ಸಹಾಯ (Help) ಮಾಡಬೇಕೆಂದು ತಿಳಿಹೇಳಬೇಕಾಗುತ್ತದೆ.
Parenting Tips: ಮಕ್ಕಳು ಯಾಕೆ ಪದೇ ಪದೇ ಪ್ರಶ್ನೆ ಕೇಳಿ ಇರಿಟೇಟ್ ಮಾಡ್ತಾರೆ?
ಅವರು ಬಯಸಿದ್ದನ್ನೆಲ್ಲ ಪೂರೈಸುವುದು: ಮಕ್ಕಳು (Children) ಏನಾದರೂ ಬಯಸುವುದು, ಪಾಲಕರು (Parents) ಅದನ್ನು ಪೂರೈಸುವುದು ಸಹಜ. ಆದರೆ, ಎಲ್ಲ ಬಾರಿಯೂ ಪಾಲಕರಿಗೆ ಮಕ್ಕಳ ಇಚ್ಛೆ ಪೂರೈಸಲು ಸಾಧ್ಯವಾಗುವುದಿಲ್ಲ ಹಾಗೂ ಎಲ್ಲ ಬಾರಿಯೂ ಮಕ್ಕಳು ಕೇಳಿದ್ದನ್ನೆಲ್ಲ ನೀಡಬಾರದು. ಅವರು ಬಯಸಿದ್ದನ್ನೆಲ್ಲ ನೀಡುವ ಪಾಲಕರು ನೀವಾಗಿದ್ದರೆ ಮಕ್ಕಳು ಖಂಡಿತವಾಗಿ ಹಾದಿ ತಪ್ಪುತ್ತಾರೆ. ಅವರಿಗೆ ತಾವು ಬಯಸಿದ್ದೆಲ್ಲ ದೊರೆಯುತ್ತದೆ ಎನ್ನುವ ಭಾವನೆ (Feel) ಗಟ್ಟಿಯಾಗುತ್ತದೆ. ಏನು ಬಯಸಿದರೆ ದೊರೆಯುತ್ತದೆ ಎನ್ನುವ ಬಗ್ಗೆ ಮಗು ಯೋಚಿಸುವುದನ್ನೇ ಬಿಟ್ಟುಬಿಡುತ್ತದೆ. ನಿರಾಶೆ (Disappointment), ಬೇಸರ ನಿಭಾಯಿಸುವುದನ್ನು ಮಕ್ಕಳು ಕಲಿತುಕೊಳ್ಳುವುದು ಸಹ ಅಗತ್ಯ.