ಕೊಡಗು: ರಜೆಯ ಮಜಾ ಸವಿಯಲು ಹೋಗಿ ಪ್ರಾಣ ಕಳೆದುಕೊಂಡು 3 ವಿದ್ಯಾರ್ಥಿಗಳು

By Web Desk  |  First Published Jun 5, 2019, 4:54 PM IST

ರಂಜಾನ್‌ ರಜೆ ಮಜಾ ಸವಿಯಲು ಹೋಗಿ  ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಓರ್ವನನ್ನು ರಕ್ಷಿಸಲು ಮುಂದಾಗಿ ಮೂವರು ನೀರು ಪಾಲಾಗಿದ್ದಾರೆ.


ಕೊಡಗು, [ಜೂನ್.05]:  ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ರ್ಘ‌ಟನೆ ಬುಧವಾರ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಘಟನೆ.

ಮೃತರು ಮಡಿಕೇರಿ ಜ್ಯೂನಿಯರ್‌ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಾದ ಆಕಾಶ್‌, ಗಗನ್‌ ಮತ್ತು ಶಶಾಂಕ್‌ ಎಂದು ತಿಳಿದು ಬಂದಿದೆ. ರಂಜಾನ್‌ ರಜೆ ನಿಮಿತ್ತ ಈಜಾಡಲು ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಮುಂಭಾಗದ ಕಾವೇರಿ ನದಿಗಿಳಿದಿದ್ದಾರೆ.

Tap to resize

Latest Videos

ಈಜು ಬಾರದ ಓರ್ವನನ್ನು ರಕ್ಷಿಸಲು ಹೋಗಿ ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರು, ಅಗ್ನಿಶಾಮಕದಳದ ಸಿಬಂದಿಗಳು ಮತ್ತು ಪೊಲೀಸರು ಸೇರಿಕೊಂಡು  ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಬಗ್ಗೆ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!