ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಸಂತಸದ ಸುದ್ದಿ: ಬೆಂಗ್ಳೂರಿನ ಸುತ್ತಲಿನ ಊರಿಗೆ ಅಶ್ವಮೇಧ ಎಸಿ ಬಸ್!

By Kannadaprabha News  |  First Published Dec 5, 2024, 11:00 AM IST

ಅಶ್ವಮೇಧ ಬಸ್‌ಗಳನ್ನು ಮೇಲ್ಪರ್ಜೆಗೇರಿಸಲು ಮುಂದಾಗಿರುವ ಕೆಎಸ್‌ಆರ್‌ಟಿಸಿ, ಬೆಂಗಳೂರು ಸುತ್ತಲಿನ 100 ಕಿಮೀ ವ್ಯಾಪ್ತಿಯಲ್ಲಿ ಸೇವೆ ನೀಡು ವಂತೆ ಅಶ್ವಮೇಧ ಹವಾನಿಯಂತ್ರಿನ ಬಸ್‌ಗಳನ್ನು ಪರಿಚಯಿಸಲು ಚರ್ಚೆ ನಡೆಸಿದ ಅಧಿಕಾರಿಗಳು 


ಬೆಂಗಳೂರು(ಡಿ.05):  ಕೆಂಪು ಬಣ್ಣದ ಸಾಮಾನ್ಯ ಸಾರಿಗೆ ಬಸ್‌ಗಳಿಗೆ ಹೊಸ ರೂಪ ನೀಡಿ ಕಾರ್ಯಾಚರಣೆ ಮಾಡಲಾಗುತ್ತಿರುವ ಅಶ್ವಮೇಧ ಬಸ್‌ಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಬೆಂಗಳೂರು ಸುತ್ತಲಿನ 100 ಕಿ.ಮೀ. ವ್ಯಾಪ್ತಿಯಲ್ಲಿ ನಗರಗಳಿಗೆ ಅಶ್ವಮೇಧ ಹವಾನಿಯಂತ್ರಿತ ಬಸ್‌ಗಳನ್ನು ಪರಿಚ ಯಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. 

ಪ್ರಮುಖವಾಗಿ ಕೋಲಾರ, ತುಮಕೂರು, ಆನೇಕಲ್, ರಾಮನಗರ, ಕನಕಪುರ, ಚನ್ನಪಟ್ಟಣ, ಮಂಡ್ಯ, ಚಿಕ್ಕಬಳ್ಳಾಪುರ ಸೇರಿ ಮತ್ತಿತರ ನಗರ, ಪಟ್ಟಣಗಳಿಗೆ ಅಶ್ವಮೇಧ ಎಸಿ ಬಸ್‌ಗಳು ಓಡಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tap to resize

Latest Videos

ಸಾರಿಗೆ ನೌಕರರ ಪಿಎಫ್ ಪಾವತಿಸಲೂ ಸಾರಿಗೆ ನಿಗಮಗಳಲ್ಲಿ ಹಣವಿಲ್ಲ!

ಇದಕ್ಕೆ ಸಂಬಂಧಿಸಿ ಅಧ್ಯಯನ ನಡೆಸಲು ಕೆಎಸ್‌ಆರ್‌ಟಿಸಿ ಮುಂದಾಗಿದ್ದು, ಯಾವೆಲ್ಲ ಮಾರ್ಗದಲ್ಲಿ ಅಶ್ವಮೇಧ ಎಸಿ ಬಸ್‌ಗಳ ಸೇವೆ ನೀಡಬಹುದು ಹಾಗೂ ಜನರಿಗೆ ಅನುಕೂಲವಾಗಲಿದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ. ಸಾಮಾನ್ಯ ಬಸ್‌ಗಳಲ್ಲಿ ಬದಲಾವಣೆ ತಂದು, ಆಸನಗಳ ನಡುವಿನ ಅಂತರ, ಬಸ್‌ನ ಎತ್ತರ ಹೆಚ್ಚಿಸಲಾಗಿದೆ. ಅದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ದೊರೆತು ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ. ಕಳೆದ ಫೆಬ್ರವರಿಯಲ್ಲಿ 750 ಅಶ್ವಮೇಧ ಬಸ್ ಗಳನ್ನು ಕೆಎಸ್‌ಆರ್‌ಟಿಸಿಗೆ ಸೇರ್ಪಡೆ ಮಾಡಲಾಗಿದ್ದು, ಈ ಬಸ್‌ಗಳು ಪಾಯಿಂಟ್ ಟು ಪಾಯಿಂಟ್ ಸೇವೆ ನೀಡುತ್ತಿವೆ. ಅದರಂತೆ ಹೆಚ್ಚಿನ ನಿಲುಗಡೆ ನೀಡದೆ ನಿಗದಿತ ಸ್ಥಳಗಳಲ್ಲಿ ಮಾತ್ರ ನಿಲುಗಡೆ ನೀಡಲಾಗುತ್ತದೆ. ಇದರಿಂದ ಪ್ರಯಾಣ ಸಮಯ ಕಡಿಮೆಯಿರಲಿದೆ. ಹೀಗಾಗಿಯೇ ಈ ಬಸ್‌ಗಳಿಗೆ ಪ್ರಯಾಣಿ ಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ಈ ಅಶ್ವಮೇಧ ಬಸ್‌ಗಳನ್ನು ಮೇಲ್ಪರ್ಜೆಗೇರಿಸಲು ಮುಂದಾಗಿರುವ ಕೆಎಸ್‌ಆರ್‌ಟಿಸಿ, ಬೆಂಗಳೂರು ಸುತ್ತಲಿನ 100 ಕಿಮೀ ವ್ಯಾಪ್ತಿಯಲ್ಲಿ ಸೇವೆ ನೀಡು ವಂತೆ ಅಶ್ವಮೇಧ ಹವಾನಿಯಂತ್ರಿನ ಬಸ್‌ಗಳನ್ನು ಪರಿಚಯಿಸಲು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

KSRTC 1,308 ಸಿಬ್ಬಂದಿಗೆ ಅಂತರ ನಿಗಮ ವರ್ಗಾವಣೆ ಸೌಲಭ್ಯ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಜಿಲ್ಲೆ ಹಾಗೂ ಪ್ರದೇಶಗಳಿಂದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಹಲವು ವಿಭಾಗಗಳಲ್ಲಿ ನೌಕರಿಗೆ ಸೇರಿದ ಸಾರಿಗೆ ನಿಗಮದ ಸಿಬ್ಬಂದಿ ವಾಪಸ್ ತಮ್ಮ ಊರಿನತ್ತ ಹೋಗಲಾಗದೇ ಪರದಾಡುತ್ತಿದ್ದರು. ಇಂಥವರಿಗೆ ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟ ಕೆಎಸ್‌ಆರ್‌ಟಿಸಿ ಸಂಸ್ಥೆಯು ಈವರೆಗೆ 1,308 ನೌಕರರಿಗೆ ಅಂತರ ನಿಗಮ ವರ್ಗಾವಣೆ ಸೌಲಭ್ಯವನ್ನು ಒದಗಿಸಿದೆ.

ಸಾರಿಗೆ ಸಂಸ್ಥೆಯಲ್ಲಿ 9000 ಹುದ್ದೆ ಭರ್ತಿ: ಸಚಿವ ರಾಮಲಿಂಗಾರೆಡ್ಡಿ

ರಾಜ್ಯ ರಸ್ತೆ ಸಾರಿಗೆ ನಿಗಮದ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ 2023ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ 2023ರ ಜು.5ರಿಂದ ಡಿ.31ರ 2023ರವರೆಗೆ ಆನ್-ಲೈನ್ ಮೂಲಕ www.ksrtc.org/transfer ರಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಸದರಿ ಅಂತರ ನಿಗಮ ವರ್ಗಾವಣೆಯಲ್ಲಿ ಈ ಕೆಳಗಿನಂತೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಕೆಲವೊಂದು ವಿಶೇಷ ಪ್ರಕರಣಗಳನ್ನು ಪರಿಗಣಿಸಲು ಇಲ್ಲಿ ಅಂತರ ನಿಗಮ ವರ್ಗಾವಣೆಯನ್ನು ಮಾಡಿಕೊಡಲಾಗಿದೆ.

ಸಾರಿಗೆ ನಿಗಮದಲ್ಲಿ ಇದೇ ಪ್ರಥಮ ಬಾರಿಗೆ ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು ಹಾಗೂ ತೀವ್ರ ತರಹದ ಅನಾರೋಗ್ಯ (ಹೃದಯ ರೋಗ, ಕ್ಯಾನ್ಸರ್, ಸ್ಪಯಿನಾಲ್ ಕಾರ್ಡ್, ಕಿಡ್ನಿ ವೈಪಲ್ಯ ಹಾಗೂ ಮೆದಳು ಸಂಭಂದಿಸಿದ ಖಾಯಿಲೆಗಳು) ನೌಕರರ ಪ್ರಕರಣಗಳಿಗೆ ಅಂತರ ನಿಗಮ ವರ್ಗಾವಣೆಯ ಶೇ 5.ರಷ್ಟು ಮೀಸಲಿರಿಸಲಾಗಿದೆ. ಜೊತೆಗೆ, ನೌಕರರ ಪತಿ ಅಥವಾ ಪತ್ನಿಯು ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರದ ಸ್ವಾಮ್ಯದ ಸಂಸ್ಥೆಯ ಅಧಿಕಾರಿ/ನೌಕರರಾಗಿ ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕರಣಗಳಿಗೆ ಅಂತರ ನಿಗಮ ವರ್ಗಾವಣೆಯ ಶೇ.5 ರಷ್ಟು ಹುದ್ದೆಗಳನ್ನು ಮೀಸಲಿರಿಸಿದ್ದು, ಒಟ್ಟು ಶೇ.10 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಉಳಿದಂತೆ ಇತರೆ ಸಾಮಾನ್ಯ ಅಭ್ಯರ್ಥಿಗಳಿಗೆ ವರ್ಗಾವಣೆ ಪರಿಗಣಿಸಲಾಗುತ್ತದೆ.

click me!