ಒಟ್ಟು 38 ಕಿ.ಮೀ. ಇರುವ ನೀಲಿ ಮಾರ್ಗದಲ್ಲಿ ವಿಮಾನ ನಿಲ್ದಾಣದಿಂದ ಹೆಬ್ಬಾಳದವರೆಗಿನ ಕಾಮಗಾರಿಗಳು ಚುರುಕಿನಿಂದ ನಡೆಯುತ್ತಿವೆ. ಹೀಗಾಗಿ ಮೊದಲು ಈ ಹಂತವನ್ನು ಪೂರ್ಣಗೊಳಿಸಿ 2026ರ ಸೆಪ್ಟೆಂಬರ್‌ನಲ್ಲಿ ಸಂಚಾರಕ್ಕೆ ತೆರೆಯುವ ಹಾಗೂ ಬಳಿಕ ಹೆಬ್ಬಾಳದಿಂದ ಕೆ.ಆರ್.ಪುರದವರೆಗಿನ ಹಂತವನ್ನು 2026ರ ಅಂತ್ಯ ಅಥವಾ 2027ರಲ್ಲಿ ತೆರೆಯಲು ಯೋಜಿಸಲಾಗಿದೆ.
ಬೆಂಗಳೂರು(ಡಿ.05): ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗವನ್ನು 2 ಹಂತದಲ್ಲಿ ಸೇವೆಗೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಯೋಜಿಸಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ನೇರಳೆ, ಹಸಿರು ಮಾರ್ಗಗಳು ಕೂಡ ಎರಡು, ಮೂರು ಹಂತಗಳಲ್ಲಿ ಲೋಕಾರ್ಪಣೆ ಆಗಿವೆ. ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಹಾಗೂ ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗವನ್ನು ಕೂಡ ಎರಡು ಹಂತದಲ್ಲಿ ಜನಸಂಚಾರಕ್ಕೆ ತೆರೆಯಲು ಬಿಎಂಆರ್‌ಸಿಎಲ್ ಯೋಜಿಸಿದೆ. ಈಗ ನೀಲಿ ಮಾರ್ಗವನ್ನು ಕೂಡ ಇದೇ ಮಾದರಿಯಲ್ಲಿ ತೆರೆಯಲಾಗುವದೆಂದು ಬಿಎಂಆರ್‌ಸಿಎಲ್ ಮೂಲ ತಿಳಿಸಿವೆ.
ಒಟ್ಟು 38 ಕಿ.ಮೀ. ಇರುವ ನೀಲಿ ಮಾರ್ಗದಲ್ಲಿ ವಿಮಾನ ನಿಲ್ದಾಣದಿಂದ ಹೆಬ್ಬಾಳದವರೆಗಿನ ಕಾಮಗಾರಿಗಳು ಚುರುಕಿನಿಂದ ನಡೆಯುತ್ತಿವೆ. ಹೀಗಾಗಿ ಮೊದಲು ಈ ಹಂತವನ್ನು ಪೂರ್ಣಗೊಳಿಸಿ 2026ರ ಸೆಪ್ಟೆಂಬರ್‌ನಲ್ಲಿ ಸಂಚಾರಕ್ಕೆ ತೆರೆಯುವ ಹಾಗೂ ಬಳಿಕ ಹೆಬ್ಬಾಳದಿಂದ ಕೆ.ಆರ್.ಪುರದವರೆಗಿನ ಹಂತವನ್ನು 2026ರ ಅಂತ್ಯ ಅಥವಾ 2027ರಲ್ಲಿ ತೆರೆಯಲು ಯೋಜಿಸಲಾಗಿದೆ.
ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಡಿಜಿಟಲ್ ಲಗೇಜ್ ಲಾಕರ್ ಪರಿಚಯಿಸಿದ ಬಿಎಂಆರ್‌ಸಿಎಲ್!
ಒಟ್ಟಾರೆ ಮಾರ್ಗದ ಕಾಮಗಾರಿ ಮುಗಿಸಿ ವಾಣಿಜ್ಯ ಸಂಚಾರ ಆರಂಭಿಸುವುದು ವಿಳಂಬವಾಗುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ನೀಲಿ ಹಾಗೂ ಗುಲಾಬಿ ಮಾರ್ಗಕ್ಕೆ ಭಾರತ್ ಅರ್ಥ್ ಮೂವರ್ಸ್ ಲಿ. ಈ ಮಾರ್ಗಕ್ಕಾಗಿ ರೈಲುಗಳನ್ನು (318 ಬೋಗಿ) ಪೂರೈಸಲಿದೆ.ಆರುಬೋಗಿಗಳ 16 ರೈಲುಗಳು ಗುಲಾಬಿ ಮಾರ್ಗಕ್ಕೆ, ಆರು ಬೋಗಿಗಳ 16 ರೈಲು ಕೇಂದ್ರ ರೇಷ್ಮೆ ಮಂಡಳಿಯಿಂದ ಕೆ.ಆರ್.ಪುರ ಹಾಗೂ ಆರು ಬೋಗಿಗಳ 21 ರೈಲುಗ ಳನ್ನು ಕೆ.ಆರ್.ಪುರ-ವಿಮಾನ ನಿಲ್ದಾಣ ಮಾರ್ಗಕ್ಕೆ ನಿಯೋಜನೆ ಆಗಲಿವೆ. 2025ರ ಡಿಸೆಂಬರ್‌ನಿಂದ ಈ ಮಾರ್ಗಗಳಿಗೆ ರೈಲು ಪೂರೈಸುವ ಸಂಬಂಧ ಒಪ್ಪಂದವಾಗಿದೆ.
ಬೆಂಗಳೂರು: 2027ಕ್ಕೆ ಮೆಟ್ರೋ ಗುಲಾಬಿ ಮಾರ್ಗ ಪೂರ್ಣ
ಬೆಂಗಳೂರು: ಕಾಳೇನ ಅಗ್ರಹಾರ ಮತ್ತು ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಪೂರ್ಣ ಪ್ರಮಾಣದ ರೈಲ್ವೆ ಸೇವೆ ಆರಂಭ 1 ವರ್ಷ ಮುಂದಕ್ಕೆ ಹೋಗಿದ್ದು, 2025ರ ಬದಲಾಗಿ 2026ರ ಡಿಸೆಂಬರ್ ಗೆತೆರೆಯಲು ಬೆಂಗಳೂರು ಮೆಟ್ರೋ ರೈಲುನಿಗಮವು ಯೋಜಿಸಿದೆ.
ಒಟ್ಟೂ 21.26 8 ಕಿ.ಮೀ ಇರುವ ಈ ಮಾರ್ಗ ಎರಡು ಹಂತದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗುವ ಸಾಧ್ಯತೆಯಿದೆ. ಮೊದಲ ಹಂತವಾಗಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮಾರ್ಗ (7.5ಕಿಮೀ) 2025ರ ಡಿಸೆಂಬರ್‌ಗೆ ಹಾಗೂ ಎರಡನೇ ಹಂತವಾಗಿ ಡೇರಿ ಸರ್ಕಲ್‌ನಿಂದ ನಾಗವಾರ ದವರೆಗೆ ಸುರಂಗ ಮಾರ್ಗ (13.76ಕಿಮೀ) 2026ರ ಡಿಸೆಂಬರ್‌ಗೆ ಪೂರ್ಣ ಮಾರ್ಗ ಆರಂಭಿಸುವ ಬಗ್ಗೆ ಯೋಜಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದರು.
ಕಳೆದ ಅಕ್ಟೋಬರ್ 31ರಂದು ಸುರಂಗ ಕೊರೆಯುವ 9ನೇ ಟಿಬಿಎಂ ಭದ್ರಾ ಯಂತ್ರ ತನ್ನ ಕಾರ್ಯವನ್ನು ಮುಗಿಸುವ ಮೂಲಕ ಈ ಮಾರ್ಗದಲ್ಲಿ ಸುರಂಗ ಕೊರೆವ ಕೆಲಸ ಪೂರ್ಣಗೊಂಡಿದೆ. ಹಳಿ ಅಳವಡಿಕೆ ಕಾರ್ಯ ನಡೆಯುತ್ತಿದ್ದು, 2025ರ ಅಕ್ಟೋಬರ್ ವೇಳೆಗೆ ಈ ಕೆಲಸ ನಡೆಯಲಿದೆ. ಗುಲಾಬಿ ಮಾರ್ಗ ಒಳಗೊಂಡು ನಮ್ಮ ಮೆಟ್ರೋ 2ನೇ ಹಂತ ಕ್ಕಾಗಿ ಹಳಿ ಜೋಡಣೆಯ ಹೊಣೆ ಹೊತ್ತಿರುವ ಟೆಕ್ಸ್ ಮ್ಯಾಕೋ ರೈಲ್ ಅಂಡ್ ಎಂಜಿನಿಯರಿಂಗ್ ಲಿಮಿಟೆಡ್ 521.76 ಕೋಟಿ ಗುತ್ತಿಗೆ ಪಡೆದಿದೆ.
ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಡಬಲ್ ಡೆಕ್ಕರ್ ರೈಲುಗಳು: ಟೆಂಡರ್ ಆಹ್ವಾನ
ಎಂ.ಜಿ.ರಸ್ತೆ, ಶಿವಾಜಿನಗರದ ಬಳಿ ಟ್ರ್ಯಾಕ್ ಅಳವಡಿಕೆ ಮುಗಿದಿದೆ. ರಾಷ್ಟ್ರೀಯ ಮಿಲಿಟರಿ ಸ್ಕೂಲ್ (ವೆಲ್ಲಾರ ಜಂಕ್ಷನ್) ನಿಂದ ಕಂಟೋನ್ಸೆಂಟ್ ಬಂಬೂ ಬಜಾರ್ ಸ್ಟೇಷನ್‌ವರೆಗೆ ಬಲ್ಲಾಸ್ಟ್‌ಲೆಸ್ ಟ್ರ್ಯಾಕ್‌ಗಳನ್ನು ಅಳವಡಿಸಲಾಗಿದೆ. ಸದ್ಯ ಡೇರಿ ಸರ್ಕಲ್ ಮತ್ತು ಲಾಂಗ್‌ಫೋರ್ಡ್ ಟೌನ್ ನಿಲ್ದಾಣಗಳ ನಡುವೆ ಹಳಿ ಜೋಡಣಾ ಕೆಲಸ ನಡೆಯುತ್ತಿದೆ. ಮುಂದುವರಿದು ಟ್ರಾಕ್ಟನ್ ಹಾಗೂ ಸಿಗ್ನಲಿಂಗ್ ಕೆಲಸಕ್ಕೆ 6 ರಿಂದಃ ತಿಂಗಳು ಹಿಡಿಯುವ ಸಾಧ್ಯತೆಯಿದೆ. ಬಳಿಕ 4 ತಿಂಗಳು ಪ್ರಾಯೋಗಿಕ ಸಂಚಾರ ನಡೆಯಲಿದೆ.
ಸುರಂಗ ಮಾರ್ಗದ ಕಾಮಗಾರಿಯಿಂದಾಗಿಯೇ ಒಟ್ಟಾರೆ ಗುಲಾಬಿ ಮಾರ್ಗದ ಕಾರ್ಯಾಚರಣೆ ಆರಂಭ 1 ವರ್ಷ ಮುಂದಕ್ಕೆ ಹೋಗಿದೆ. ಈ ಮಾರ್ಗದಲ್ಲಿ 18 ನಿಲ್ದಾಣಗಳು ನಿರ್ಮಾಣ ಕಾರ್ಯ ಶೇ. 90 ರಷ್ಟು ಮುಗಿದಿದೆ. ಆದರೆ, ರ್ಯಾಂಪ್ ಸೇರಿ ಇತರೆ ಕಾಮಗಾರಿ ಕೆಲಸ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.