
ಮಂಗಳೂರು(ಜೂ.23): ಲಾಕ್‌ಡೌನ್ ಹಿನ್ನೆಲೆ ಮಾಚ್‌ರ್ 23ರಿಂದ ನಿಲುಗಡೆಯಾಗಿದ್ದ ಮಾರ್ಗಗಳಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಕೆಎಸ್‌ಆರ್‌ಟಿಸಿ ಮೇ 19ರಿಂದ ಬಸ್ ಸಂಚಾರ ಆರಂಭಿಸಿದೆ. ಸಾರ್ವಜನಿಕರಿಗೆ ಅನುಕೂಲವಾಗಲು ಕೆಎಸ್‌ಆರ್‌ಟಿಸಿ ಸಂಚಾರಕ್ಕೆ ಮಾಸಿಕ ಪಾಸ್ ಸೌಲಭ್ಯವನ್ನು ಮಂಗಳೂರು ವಿಭಾಗ ಕಲ್ಪಿಸಿದೆ.
ನಿಗಮದ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆಗಳಲ್ಲಿ ಪ್ರತಿ ನಿತ್ಯ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಬಸ್ ಪಾಸ್ ಸೌಲಭ್ಯವಿದ್ದು, ಮಂಗಳೂರು/ಸ್ಟೇಟ್‌ಬ್ಯಾಂಕ್- ಧರ್ಮಸ್ಥಳ, ಮಂಗಳೂರು/ಸ್ಟೇಟ್‌ಬ್ಯಾಂಕ್- ಉಪ್ಪಿನಂಗಡಿ, ಮಂಗಳೂರು/ಸ್ಟೇಟ್‌ಬ್ಯಾಂಕ್- ಸುಬ್ರಹ್ಮಣ್ಯ, ಮಂಗಳೂರು/ಸ್ಟೇಟ್‌ಬ್ಯಾಂಕ್- ಬಿ.ಸಿ.ರೋಡ್, ಮಂಗಳೂರು/ಸ್ಟೇಟ್‌ಬ್ಯಾಂಕ್- ಉಡುಪಿ, ಮಾರ್ಗಗಳಲ್ಲಿ ಈ ಮಾಸಿಕ ಪಾಸ್‌ಗಳನ್ನು ಜೂನ್ 20ರಿಂದ ವಿತರಿಸಲಾಗುತ್ತಿದೆ.
ದೇಶದಲ್ಲಿ ಒಂದೇ ದಿನ 19,400 ಮಂದಿಗೆ ಸೋಂಕು, 503 ಸೋಂಕಿತರು ಸಾವು!
ಹೆಚ್ಚಿನ ಮಾಹಿತಿಗೆ ಮಂಗಳೂರು ಬಸ್ ನಿಲ್ದಾಣ ಮೊಬೈಲ್ ಸಂಖ್ಯೆ 7760990720, ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಮೊಬೈಲ್ ಸಂಖ್ಯೆ 9663266001, ಉಡುಪಿ ಬಸ್ ನಿಲ್ದಾಣ ಮೊಬೈಲ್ ಸಂಖ್ಯೆ 9663266400, ಕುಂದಾಪುರ ಬಸ್ ನಿಲ್ದಾಣ ಮೊಬೈಲ್ ಸಂಖ್ಯೆ 9663266009 ಸಂಪರ್ಕಿಸಬಹುದು ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.