ಹಾಸನಾಂಬೆ ದರ್ಶನಕ್ಕೆ KSRTC ಭರ್ಜರಿ ಕೊಡುಗೆ: ಕೇವಲ ₹375 ರಿಂದ ಸ್ಪೆಷಲ್ ಪ್ಯಾಕೇಜ್ ಟೂರ್‌ ಆರಂಭ

Published : Oct 26, 2026, 04:30 PM IST
KSRTC Hasanamba Tour Package

ಸಾರಾಂಶ

ಹಾಸನಾಂಬೆ ಜಾತ್ರಾ ಮಹೋತ್ಸವದ ಪ್ರಯುಕ್ತ ಕೆಎಸ್‌ಆರ್‌ಟಿಸಿ ಭಕ್ತರಿಗಾಗಿ 8 ವಿಶೇಷ ಪ್ಯಾಕೇಜ್ ಟೂರ್‌ಗಳನ್ನು ಘೋಷಿಸಿದೆ. ಅಕ್ಟೋಬರ್ 30 ರಿಂದ ನವೆಂಬರ್ 10 ರವರೆಗೆ ಲಭ್ಯವಿರುವ ಈ ಪ್ರವಾಸವು ಕೇವಲ ₹375 ರಿಂದ ಆರಂಭವಾಗಲಿದೆ. ಇದರಲ್ಲಿ ಹಾಸನಾಂಬೆ ವಿಶೇಷ ದರ್ಶನ ಸೇರಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಹಾಸನ (ಅ.26): ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆಯ ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಭರ್ಜರಿ ಸಿಹಿಸುದ್ದಿ ನೀಡಿದೆ. ಹಾಸನಾಂಬೆ ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ "ಯಾತ್ರೆ ನಮ್ಮದು - ದಿವ್ಯಾನುಭವ ನಿಮ್ಮದು" ಎಂಬ ಧ್ಯೇಯವಾಕ್ಯದೊಂದಿಗೆ ‘ಶ್ರೀ ಹಾಸನಾಂಬ ಪ್ಯಾಕೇಜ್ ಟೂರ್’ ಅನ್ನು ಘೋಷಿಸಿದೆ.

ಅಕ್ಟೋಬರ್ 30 ರಿಂದ ನವೆಂಬರ್ 10 ರವರೆಗೆ ಈ ವಿಶೇಷ ಪ್ರವಾಸ ಪ್ಯಾಕೇಜ್ ಲಭ್ಯವಿರಲಿದ್ದು, ಹಾಸನ ಜಿಲ್ಲೆ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ಕೆಎಸ್‌ಆರ್‌ಟಿಸಿ ಒಟ್ಟು 8 ಪ್ರತ್ಯೇಕ ಮಾರ್ಗಗಳ ಟೂರ್ ಪ್ಯಾಕೇಜ್‌ಗಳನ್ನು ರೂಪಿಸಿದೆ.

ಪ್ರವಾಸದ ಪ್ರಮುಖ ಅಂಶಗಳು:

  • ಆರಂಭದ ಸ್ಥಳ: ನಗರ ಬಸ್ ನಿಲ್ದಾಣ, ಹಾಸನ.
  • ಹೊರಡುವ ಸಮಯ: ಪ್ರತಿದಿನ ಬೆಳಗ್ಗೆ 07:30 ರಿಂದ 08:00 ಗಂಟೆಗೆ.
  • ವಾಪಸ್ ಆಗಮನ: ಸಂಜೆ ಸುಮಾರು 7:00 ಗಂಟೆಗೆ.
  • ಟಿಕೆಟ್ ದರ: ಕನಿಷ್ಠ ₹375/- ರಿಂದ ಆರಂಭ.

8 ಪ್ಯಾಕೇಜ್ ಟೂರ್‌ಗಳ ಸಂಪೂರ್ಣ ವಿವರ ಮತ್ತು ದರ ಪಟ್ಟಿ:

ಪ್ಯಾಕೇಜ್ 1: ಹಾಸನಾಂಬೆ ವಿಶೇಷ ದರ್ಶನ ಪ್ಯಾಕೇಜ್

  • ಸ್ಥಳಗಳು: ಶ್ರೀ ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯ ದರ್ಶನ, ದೇವಿಗೆರೆ ಕಲ್ಯಾಣಿ, ಕೆಂಚಮ್ಮನ ಹೊಸಕೋಟೆ ದೇವಾಲಯ.
  • ಸಮಯ & ದಿನ: ಬೆಳಗ್ಗೆ 08:00 (ಬುಧವಾರ, ಶುಕ್ರವಾರ ಮತ್ತು ಭಾನುವಾರ ಮಾತ್ರ).
  • ಒಟ್ಟು ಕಿ.ಮೀ: 90 ಕಿ.ಮೀ.
  • ಟಿಕೆಟ್ ದರ: ₹1400/- (ಇದರಲ್ಲಿ ₹1000 ಮೌಲ್ಯದ ಹಾಸನಾಂಬೆ ವಿಶೇಷ ದರ್ಶನ ಟಿಕೆಟ್ ಹಾಗೂ ₹400 ಬಸ್ ಪ್ರಯಾಣ ದರ ಒಳಗೊಂಡಿದೆ).

ಪ್ಯಾಕೇಜ್ 2: ವಾಟೇಹೊಳೆ - ಬೈರವೇಶ್ವರ ಪ್ರವಾಸ

  • ಸ್ಥಳಗಳು: ವಾಟೇಹೊಳೆ ಡ್ಯಾಂ, ಜನಾರ್ದನಸ್ವಾಮಿ ದೇವಸ್ಥಾನ, ಪಾಳ್ಯ, ಮುರಗಡಿ ಜಲಪಾತ, ಬೆಟ್ಟದ ಭೈರವೇಶ್ವರ ದೇವಸ್ಥಾನ.
  • ಸಮಯ: ಬೆಳಗ್ಗೆ 07:30 (184 ಕಿ.ಮೀ).
  • ಟಿಕೆಟ್ ದರ: ₹500/-.
  • ಪ್ಯಾಕೇಜ್ 3: ಮಂಜರಾಬಾದ್ ಕೋಟೆ - ಬಿಸಿಲೆ ಘಾಟ್ ವೀಕ್ಷಣೆ
  • ಸ್ಥಳಗಳು: ಮಂಜರಾಬಾದ್ ಕೋಟೆ, ಮೂಕನಮನೆ ಜಲಪಾತ, ಬಿಸಿಲೆ ಘಾಟ್ ವೀಕ್ಷಣಾ ಕೇಂದ್ರ.
  • ಸಮಯ: ಬೆಳಗ್ಗೆ 07:30 (192 ಕಿ.ಮೀ).
  • ಟಿಕೆಟ್ ದರ: ₹525/-.

ಪ್ಯಾಕೇಜ್ 4: ಬೇಲೂರು - ಹಳೇಬೀಡು ಐತಿಹಾಸಿಕ ತಾಣಗಳ ಯಾತ್ರೆ

  • ಸ್ಥಳಗಳು: ಬೇಲೂರು ಶ್ರೀ ಚನ್ನಕೇಶವ ದೇವಾಲಯ, ಯಾಗಚಿ ಜಲಸಾಹಸ ಕ್ರೀಡಾ ಕೇಂದ್ರ, ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ, ಹಳೇಬೀಡು ಹೊಯ್ಸಳೇಶ್ವರ ದೇವಾಲಯ, ಕೊಂಡಜ್ಜಿ ವರದರಾಜ ಸ್ವಾಮಿ ದೇವಾಲಯ.
  • ವಿಶೇಷತೆ: ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ದಾಸೋಹ (ಊಟ) ಲಭ್ಯ.
  • ಸಮಯ: ಬೆಳಗ್ಗೆ 07:30 (117 ಕಿ.ಮೀ).
  • ಟಿಕೆಟ್ ದರ: ₹375/-.

ಪ್ಯಾಕೇಜ್ 5: ಶ್ರವಣಬೆಳಗೊಳ - ನುಗ್ಗೇಹಳ್ಳಿ ಟೂರ್

  • ಸ್ಥಳಗಳು: ನುಗ್ಗೇಹಳ್ಳಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ, ಶ್ರವಣಬೆಳಗೊಳ, ವಿಂಧ್ಯಗಿರಿ ಬೆಟ್ಟ, ಚಂದ್ರಗಿರಿ ಬೆಟ್ಟ, ಬಿಸಿಲಿಸಿದ್ಧ ಪಾರ್ಕ್.
  • ವಿಶೇಷತೆ: ಶ್ರವಣಬೆಳಗೊಳ ಜೈನ ಮಠದಲ್ಲಿ ದಾಸೋಹ ವ್ಯವಸ್ಥೆ.
  • ಸಮಯ: ಬೆಳಗ್ಗೆ 07:30 (132 ಕಿ.ಮೀ).
  • ಟಿಕೆಟ್ ದರ: ₹400/-.

ಪ್ಯಾಕೇಜ್ 6: ಅರಸೀಕೆರೆ - ಜೇನುಕಲ್ಲು ಸಿದ್ಧೇಶ್ವರ ಬೆಟ್ಟ ಯಾತ್ರೆ

  • ಸ್ಥಳಗಳು: ಕೋರವಂಗಲ ಭೂವನೇಶ್ವರ ದೇವಾಲಯ, ಹಾರನಹಳ್ಳಿ ಕೇಶವ ಮತ್ತು ಸೋಮೇಶ್ವರ ದೇವಾಲಯ, ಮಾಲೇಕಲ್ಲು ತಿರುಪತಿ ದೇವಾಲಯ, ಜೇನುಕಲ್ಲು ಸಿದ್ದೇಶ್ವರ ಬೆಟ್ಟ, ಅರಸೀಕೆರೆ ಮಹಾತ್ಮ ಗಾಂಧಿ ಚಿತಾಭಸ್ಮ-ನರಸಿಂಹಸ್ವಾಮಿ ದೇವಾಲಯ, ಶಾಂತಿಗ್ರಾಮ, ಗೆಂಡೆಕಟ್ಟೆ ಫಾರೆಸ್ಟ್, ಹಾಸನ ವಸ್ತು ಸಂಗ್ರಹಾಲಯ.
  • ವಿಶೇಷತೆ: ಜೇನುಕಲ್ಲು ಸಿದ್ಧೇಶ್ವರ ಬೆಟ್ಟದಲ್ಲಿ ದಾಸೋಹ ಲಭ್ಯ.
  • ಸಮಯ: ಬೆಳಗ್ಗೆ 07:30 (134 ಕಿ.ಮೀ).
  • ಟಿಕೆಟ್ ದರ: ₹400/-.

ಪ್ಯಾಕೇಜ್ 7: ಗೋರೂರು ಡ್ಯಾಂ - ಶೆಟ್ಟಿಹಳ್ಳಿ ಚರ್ಚ್ ಪ್ರವಾಸ

  • ಸ್ಥಳಗಳು: ಹಾಲುವಾಗಿಲು ಕಟ್ಟೆ, ಮುಳುಗಡೆ ಖ್ಯಾತಿಯ ಶೆಟ್ಟಿಹಳ್ಳಿ ಚರ್ಚ್, ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಕೋಣಾಪುರ-ಹೇಮಾವತಿ ಜಲಾಶಯ (ಗೋರೂರು), ಗೋರೂರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ರಾಮನಾಥಪುರ ರಾಮೇಶ್ವರ ದೇವಸ್ಥಾನ.
  • ಸಮಯ: ಬೆಳಗ್ಗೆ 07:30 (143 ಕಿ.ಮೀ).
  • ಟಿಕೆಟ್ ದರ: ₹400/-.

ಪ್ಯಾಕೇಜ್ 8: ಜಾವಗಲ್ - ಬಾಣಾವರ ಕೋಟೆ ಪರಂಪರೆ ಯಾತ್ರೆ

  • ಸ್ಥಳಗಳು: ಜಾವಗಲ್ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಅರಕೆರೆ ಶ್ರೀ ಚನ್ನಕೇಶವ ದೇವಸ್ಥಾನ, ಬೆಟ್ಟದಪುರ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಬಾಣಾವರ ಕೋಟೆ, ಬೆಳಕಲ್ಲು ಶ್ರೀ ರಂಗನಾಥಸ್ವಾಮಿ ದೇವಸ್ಥಾನ.
  • ಸಮಯ: ಬೆಳಗ್ಗೆ 07:30 (181 ಕಿ.ಮೀ).
  • ಟಿಕೆಟ್ ದರ: ₹500/-.

ಗಮನಿಸಬೇಕಾದ ಮುಖ್ಯ ನಿಯಮಗಳು:

ಮಕ್ಕಳಿಗೆ ಪ್ರತ್ಯೇಕ ಪ್ರಯಾಣ ದರ ನಿಗದಿಪಡಿಸಲಾಗಿದೆ. ಊಟ ಮತ್ತು ಪ್ರವಾಸಿ ತಾಣಗಳ ಪ್ರವೇಶ ಶುಲ್ಕ (Entry Fee) ಪ್ರಯಾಣಿಕರೇ ಪ್ರತ್ಯೇಕವಾಗಿ ಭರಿಸಬೇಕು (ದಾಸೋಹ ಇರುವ ಸ್ಥಳಗಳನ್ನು ಹೊರತುಪಡಿಸಿ).

ಎಲ್ಲಾ ಬಸ್‌ಗಳು ಹಾಸನ ನಗರ ಬಸ್ ನಿಲ್ದಾಣದಿಂದಲೇ ಹೊರಟು ಸಂಜೆ ಅಲ್ಲೇ ಪ್ರವಾಸ ಮುಕ್ತಾಯಗೊಳಿಸಲಿವೆ.

ಮಾಹಿತಿ ಮತ್ತು ಮುಂಗಡ ಬುಕಿಂಗ್‌ಗಾಗಿ ಸಂಪರ್ಕಿಸಿ:

  • ಪ್ಯಾಕೇಜ್ ಪ್ರವಾಸದ ಹೆಚ್ಚಿನ ಮಾಹಿತಿ ಹಾಗೂ ಆಸನಗಳ ಕಾಯ್ದಿರಿಸುವಿಕೆಗಾಗಿ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
  • ಮೊಬೈಲ್ ಸಂಖ್ಯೆಗಳು: 7760990518, 7760990519, 7760990520, 7760990523
  • ಗ್ರಾಹಕ ಸೇವಾ ಸಂಖ್ಯೆ: 080 2625 2625
  • ಅಧಿಕೃತ ವೆಬ್‌ಸೈಟ್: www.ksrtc.in

PREV
Read more Articles on
click me!

Recommended Stories

ರಸ್ತೆ ಮೇಲೆ ಬಿದ್ದು ನರಳಾಡಿದ್ರೂ ಕರಗದ ಹೃದಯ, ಬೆಂಗಳೂರಲ್ಲಿ ಭೀಕರ ಹಿಟ್‌ ಅಂಡ್‌ ರನ್‌ಗೆ ICU ಸೇರಿದ ಬೈಕ್ ಸವಾರ
ಉದ್ಯಮಿ, ಸಮಾಜಸೇವಕ ಗೋಪಾಡಿ ಶ್ರೀನಿವಾಸ ರಾಯರಿಗೆ ಪ್ರತಿಷ್ಠಿತ ಫಾರ್ ಈಸ್ಟ್ ಏಷ್ಯಾ ಲೀಡರ್‌ಶಿಪ್ ಅಂತಾರಾಷ್ಟ್ರೀಯ ಪ್ರಶಸ್ತಿ