ಬೆಂಗಳೂರು ಜನತೆಗೆ KSRTC ಬಂಪರ್ ಆಫರ್; ₹2000ಕ್ಕೆ ಹಾಸನಾಂಬೆ ದರ್ಶನದ ಜೊತೆಗೆ ಒಂದು ದಿನದ ಪ್ರವಾಸ!

Published : Oct 26, 2026, 11:04 PM IST
ksrtc hasanamba package tour

ಸಾರಾಂಶ

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ಜಾತ್ರಾ ಮಹೋತ್ಸವಕ್ಕೆ ಕೆಎಸ್‌ಆರ್‌ಟಿಸಿ ವಿಶೇಷ 'ಅಶ್ವಮೇಧ' ಬಸ್ ಪ್ಯಾಕೇಜ್ ಘೋಷಿಸಿದೆ. ಅಕ್ಟೋಬರ್ 30 ರಿಂದ ನವೆಂಬರ್ 10 ರವರೆಗೆ ಬೆಂಗಳೂರು ಮತ್ತು ಮೈಸೂರಿನಿಂದ ಈ ಸೌಲಭ್ಯ ಲಭ್ಯವಿದೆ. ಈ ಪ್ಯಾಕೇಜ್‌ನಲ್ಲಿ 1000 ರೂ. ಮೌಲ್ಯದ ವಿಐಪಿ ದರ್ಶನ ಟಿಕೆಟ್ ಕೂಡ ಸೇರಿದ್ದು, ಭಕ್ತರು ಸುಲಭವಾಗಿ ದರ್ಶನ ಪಡೆಯಬಹುದು.

ಬೆಂಗಳೂರು (ಅ.26): ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಇತಿಹಾಸ ಪ್ರಸಿದ್ಧ ಶ್ರೀ ಹಾಸನಾಂಬೆಯ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪವಿತ್ರ ಸಂದರ್ಭದಲ್ಲಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನ ಭಕ್ತಾದಿಗಳು ಸುಲಭವಾಗಿ ಮತ್ತು ಯಾವುದೇ ಆಯಾಸವಿಲ್ಲದೆ ದೇವಿಯ ದರ್ಶನ ಪಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಭರ್ಜರಿ ಸಿಹಿಸುದ್ದಿ ನೀಡಿದೆ.

'ಭಕ್ತಿಯ ಹೆಜ್ಜೆಗಳಿಗೆ ಕೆಎಸ್‌ಆರ್‌ಟಿಸಿ ಜೊತೆಯಾಗಲಿದೆ' ಎಂಬ ಪರಿಕಲ್ಪನೆಯೊಂದಿಗೆ ನಿಗಮವು ನೂತನ 'ಅಶ್ವಮೇಧ' (Ashwamedha Point-to-Point Express) ಬಸ್‌ಗಳ ಮೂಲಕ ವಿಶೇಷ ‘ಶ್ರೀ ಹಾಸನಾಂಬ ಪ್ಯಾಕೇಜ್ ಟೂರ್’ ಘೋಷಿಸಿದೆ. ಈ ಪ್ಯಾಕೇಜ್‌ನ ಪ್ರಮುಖ ಆಕರ್ಷಣೆಯೆಂದರೆ, ಇದರಲ್ಲಿ ಹಾಸನಾಂಬೆಯ ₹1,000 ಮೌಲ್ಯದ ವಿಶೇಷ (VIP) ದರ್ಶನ ಟಿಕೆಟ್ ಕೂಡ ಒಳಗೊಂಡಿರುತ್ತದೆ!

ಅಕ್ಟೋಬರ್ 30 ರಿಂದ ನವೆಂಬರ್ 10 ರವರೆಗೆ ಈ ವಿಶೇಷ ಪ್ಯಾಕೇಜ್

1. ಬೆಂಗಳೂರು - ಹಾಸನಾಂಬೆ ದರ್ಶನ ಪ್ಯಾಕೇಜ್ (ಅಶ್ವಮೇಧ ವಾಹನ)

  • ರಾಜಧಾನಿ ಬೆಂಗಳೂರಿನಿಂದ ನೇರವಾಗಿ ಹಾಸನಾಂಬೆಯ ಸನ್ನಿಧಿಗೆ ತೆರಳುವ ಭಕ್ತರಿಗೆ ಈ ಪ್ರವಾಸ ಅತ್ಯಂತ ಅನುಕೂಲಕರವಾಗಿದೆ.
  • ಪ್ರೇಕ್ಷಣೀಯ/ಯಾತ್ರಾ ಸ್ಥಳಗಳು: ಬೆಂಗಳೂರು ➔ ಶ್ರೀ ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯ ದರ್ಶನ ➔ ದೇವಿಗೆರೆ ಕಲ್ಯಾಣಿ ➔ ಬೆಂಗಳೂರು.
  • ಹೊರಡುವ ಸಮಯ & ಸ್ಥಳ: ಬೆಳಗ್ಗೆ 06:00 ಗಂಟೆಗೆ, ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಬೆಂಗಳೂರು.
  • ಒಟ್ಟು ಪ್ರಯಾಣ: 380 ಕಿ.ಮೀ.
  • ಟಿಕೆಟ್ ದರ: ₹2000/- ಮಾತ್ರ.
  • (ಇದರಲ್ಲಿ ₹1000 ಮೌಲ್ಯದ ಹಾಸನಾಂಬೆ ದೇವಿಯ ವಿಶೇಷ ದರ್ಶನ ಟಿಕೆಟ್ ಹಾಗೂ ₹1000 ಬಸ್ ಪ್ರಯಾಣ ದರ ಒಳಗೊಂಡಿದೆ).

2. ಮೈಸೂರು - ಹಾಸನಾಂಬೆ & ಹೊಳೆನರಸೀಪುರ ಪ್ಯಾಕೇಜ್ (ಅಶ್ವಮೇಧ ವಾಹನ)

  • ಮೈಸೂರಿನ ಜನತೆಗಾಗಿ ಹಾಸನಾಂಬೆ ಜೊತೆಗೆ ಹೊಳೆನರಸೀಪುರದ ಪ್ರಸಿದ್ಧ ನರಸಿಂಹಸ್ವಾಮಿ ದೇವಾಲಯ ದರ್ಶನದ ಅವಕಾಶವನ್ನೂ ಕಲ್ಪಿಸಲಾಗಿದೆ.
  • ಪ್ರೇಕ್ಷಣೀಯ/ಯಾತ್ರಾ ಸ್ಥಳಗಳು: ಮೈಸೂರು ➔ ಶ್ರೀ ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯ ದರ್ಶನ ➔ ದೇವಿಗೆರೆ ಕಲ್ಯಾಣಿ ➔ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ (ಹೊಳೆನರಸೀಪುರ) ➔ ಮೈಸೂರು.
  • ಹೊರಡುವ ಸಮಯ & ಸ್ಥಳ: ಬೆಳಗ್ಗೆ 06:00 ಗಂಟೆಗೆ, ಮೈಸೂರು ಕೇಂದ್ರೀಯ ಬಸ್ ನಿಲ್ದಾಣ.
  • ಒಟ್ಟು ಪ್ರಯಾಣ: 250 ಕಿ.ಮೀ.
  • ಟಿಕೆಟ್ ದರ: ₹1600/- ಮಾತ್ರ.
  • (ಇದರಲ್ಲಿ ₹1000 ಮೌಲ್ಯದ ಹಾಸನಾಂಬೆ ದೇವಿಯ ವಿಶೇಷ ದರ್ಶನ ಟಿಕೆಟ್ ಹಾಗೂ ₹600 ಬಸ್ ಪ್ರಯಾಣ ದರ ಒಳಗೊಂಡಿದೆ).

ಪ್ರವಾಸದ ಮುಖ್ಯ ನಿಯಮಗಳು ಹಾಗೂ ಸೌಲಭ್ಯಗಳು:

ವಿಐಪಿ ದರ್ಶನ ಸೌಲಭ್ಯ: ಪ್ಯಾಕೇಜ್ ಟಿಕೆಟ್‌ನಲ್ಲೇ ₹1000 ಮೌಲ್ಯದ ದರ್ಶನ ಪಾಸ್ ಇರುವುದರಿಂದ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ಇರುವುದಿಲ್ಲ.

ಆಗಮನದ ಸಮಯ: ಬೆಳಗ್ಗೆ 6 ಗಂಟೆಗೆ ಹೊರಡುವ ಬಸ್‌ಗಳು ಸಂಜೆ ವೇಳೆಗೆ ದರ್ಶನ ಮುಗಿಸಿ, ರಾತ್ರಿ ಸುಮಾರು 8:00 ಗಂಟೆಗೆ ಮರಳಿ ಆರಂಭಿಕ ಸ್ಥಳಕ್ಕೆ ತಲುಪಿಸಲಿವೆ.

ಪ್ರತ್ಯೇಕ ದರ: ಮಕ್ಕಳಿಗೆ ಪ್ರತ್ಯೇಕ ಪ್ರಯಾಣ ದರ ನಿಗದಿಪಡಿಸಲಾಗಿದೆ.

ಊಟ/ಪ್ರವೇಶ ಶುಲ್ಕ: ಊಟೋಪಚಾರ ಹಾಗೂ ಇತರೆ ಪ್ರವೇಶ ಶುಲ್ಕಗಳನ್ನು ಪ್ರಯಾಣಿಕರೇ ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ.

ಮಾಹಿತಿ ಹಾಗೂ ಮುಂಗಡ ಬುಕಿಂಗ್‌ಗಾಗಿ ಸಂಪರ್ಕಿಸಿ:

ಈ ವಿಶೇಷ ಪ್ಯಾಕೇಜ್ ಟೂರ್‌ನ ಸೀಟುಗಳನ್ನು ಕಾಯ್ದಿರಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:

ಮೊಬೈಲ್ ಸಂಖ್ಯೆಗಳು: 7760990518, 7760990519, 7760990520, 7760990523

ಟೋಲ್ ಫ್ರೀ / ವಿಚಾರಣೆ: 080 2625 2625

ಅಧಿಕೃತ ವೆಬ್‌ಸೈಟ್: www.ksrtc.in

PREV
Read more Articles on
click me!

Recommended Stories

ರೈಲ್ವೇ ಇಲಾಖೆಯಿಂದ ಬಿಗ್ ಅಲರ್ಟ್‌, ಒಟ್ಟು 53 ರೈಲುಗಳ ಓಡಾಟ ದಿಢೀರ್ ರದ್ದು! ಕಾರಣವೇನು?
'ಕೆ.ಎಲ್.ರಾಹುಲ್ ಬಿಟ್ಟರೆ ನಾನೇ ನಿಮ್ಮೂರಿನ ಮಗ' ತುಳು ಮಾತನಾಡಿ ಹೇಗಿದೆ ಎಂದ ದಿನೇಶ್ ಕಾರ್ತಿಕ್!