ದಿನಕ್ಕೆ 1000ಕ್ಕೂ ಹೆಚ್ಚು ಮಾಸ್ಕ್ ತಯಾರಿಸ್ತಿದ್ದಾರೆ KSRTC ನೌಕರರು..!

By Kannadaprabha NewsFirst Published Mar 21, 2020, 9:28 AM IST
Highlights

ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದಂತೆ ಜನ ಮಾಸ್ಕ್, ಸ್ಯಾನಿಟೈಸರ್ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ಮಾಸ್ಕ್‌ಗಳ ಕೊರತೆ ಉಂಟಾಗಿದ್ದು, ಕೆಎಸ್‌ಆರ್‌ಟಿಸಿ ಮಹಿಳಾ ನೌಕರರು ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದಾರೆ.

ಚಾಮರಾಜನಗರ(ಮಾ.21): ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದಂತೆ ಜನ ಮಾಸ್ಕ್, ಸ್ಯಾನಿಟೈಸರ್ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ಮಾಸ್ಕ್‌ಗಳ ಕೊರತೆ ಉಂಟಾಗಿದ್ದು, ಕೆಎಸ್‌ಆರ್‌ಟಿಸಿ ಮಹಿಳಾ ನೌಕರರು ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದಾರೆ.

ಕೊರೋನಾ ವೈರಸ್‌ ಹರಡದಂತೆ ತಡೆಯಲು ಮಾಸ್ಕ್‌ಗಳ ಕೊರತೆ ಇರುವ ಕಾರಣ ಕೆಎಸ್‌ಆರ್‌ಟಿಸಿ ನೌಕರರರಿಗೆ ನಮ್ಮ ಸಂಸ್ಥೆಯಲ್ಲಿ ಟೈಲರಿಂಗ್‌ ಕಲಿತಿರುವ ಮಹಿಳಾ ನೌಕರರಿಂದ ದಿನಕ್ಕೆ 1000 ಮಾಸ್ಕ್‌ಗಳನ್ನು ಶುಕ್ರವಾರದಿಂದ ಚಾಮರಾಜನಗರ ಕರ್ನಾಟಕ ರಾಜ್ಯ ವಿಭಾಗೀಯ ಕಾರ್ಯಾಗಾರದಲ್ಲಿ ತಯಾರಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗೀಯ ನಿಯಾಂತ್ರಣ ಅಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ತಿಳಿಸಿದ್ದಾರೆ.

'ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ'..!

ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗೀಯ ಕಾರ್ಯಾಗಾರದಲ್ಲಿ ಕೊರೋನಾ ವೈರಸ್‌ ಹರಡದಂತೆ ತಡೆಯಲು ನಮ್ಮ ಸಂಸ್ಥೆಯ ನೌಕರರಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಮಾಸ್ಕ್‌ ಗಳನ್ನುತಯಾರಿಸಿ ನೀಡಲಾಗುತ್ತಿದೆ. ಪ್ರತಿಯೊಬ್ಬರ ಆರೋಗ್ಯ ದೃಷ್ಠಿಯಿಂದ ಇಂತಹ ಕೆಲಸಗಳನ್ನು ಮಾಡಲಾಗುತ್ತಿದೆ.

ಮಹಿಳಾ ನೌಕರರರು ಇಂತಹ ಕೆಲಸಕ್ಕೆ ಉತ್ತಮ ಪ್ರೋತ್ಸಾಹದ ಜೊತೆಗೆ ಪುರುಷ ನೌಕಕರು ಸಹ ಕೈಜೊಡಿಸಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ವಿಭಾಗೀಯ ತಾಂತ್ರಿಕ ಶಿಲ್ಪಿ ಸೂರ್ಯಕಾಂತ್‌, ಉಗ್ರಾಣಾಧಿಕಾರಿ ಚಂದ್ರಮೌಳಿ, ಪಿ.ಕೆ, ಹಾಗೂ ಮಹಿಳಾ ನೌಕಕರು ಮಾಸ್ಕ್‌ ತಯಾರಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು.

click me!