ಹುಂಜಕ್ಕೆ ಟಿಕೆಟ್ ಕೊಟ್ಟ ನಿರ್ವಾಹಕ, ಸರಿಯಾದ ಉತ್ತರನ್ನೇ ಕೊಟ್ಟ ಪ್ರಯಾಣಿಕ

Published : May 09, 2019, 07:55 PM ISTUpdated : Dec 18, 2019, 05:01 PM IST
ಹುಂಜಕ್ಕೆ ಟಿಕೆಟ್ ಕೊಟ್ಟ ನಿರ್ವಾಹಕ, ಸರಿಯಾದ ಉತ್ತರನ್ನೇ ಕೊಟ್ಟ ಪ್ರಯಾಣಿಕ

ಸಾರಾಂಶ

ಆ ವ್ಯಕ್ತಿ ಹುಂಜದೊಂದಿಗೆ ಬಸ್ ಏರಿದ್ದ.  ಇದನ್ನು ಕಂಡ ನಿರ್ವಾಹಕ ಹುಂಜಕ್ಕೂ ಟಿಕೆಟ್ ನೀಡಿದ್ದ. ಸದ್ಯ ಈ ಹುಂಜದ ಸವಾರಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಕೋಲಾರ[ಮೇ. 09]  KSRTC ಬಸ್ ನಿರ್ವಾಹಕ ಹುಂಜಕ್ಕೂ15 ರುಪಾಯಿ ಟಿಕೆಟ್ ನೀಡಿದ್ದಾರೆ. ಟಿಕೆಟ್ ನೀಡಿದ ಮೇಲೆ ಸೀಟು ಸಿಗಬೇಕಲ್ವಾ?  ಪ್ರಯಾಣಿಕ ಕೂಡಾ ಅಷ್ಟೆ ಚಾಲಾಕಿ. ಟಿಕೆಟ್ ಗೆ ದುಡ್ಡು ಕೊಟ್ಟ ಕಾರಣಕ್ಕೆ ಹುಂಜವನ್ನು ಸೀಟ್ ಮೇಲೆಯೇ ಕುಳ್ಳಿರಿಸಿಕೊಂಡು ಪ್ರಯಾಣ ಮಾಡಿದ್ದಾನೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಘಟಕಕ್ಕೆ ಸೇರಿರುವ ಬಸ್ಸು ಇದಾಗಿದ್ದು ಕೋಲಾರದಿಂದ ಎಚ್.ಕ್ರಾಸ್ ಗೆ ಹೋಗುವ ಪ್ರಯಾಣಿಕನಿಂದ ಹುಂಜಗೂ ಟಿಕೆಟ್ ಪಡೆದಿದ್ದಾನೆ. ಮೇ 7ನೇ ತಾರೀಖು ಈ ಘಟನೆ ನಡೆದಿದ್ದು ನಾನು ಹುಂಜಕ್ಕೂ ಟಿಕೆಟ್ ತೆಗೆದುಕೊಂಡಿದ್ದೇನೆ ಎಂದು ಬೇರೆಯವರಿಗೆ ಸೀಟು ಬಿಡದೆ ಹುಂಜದ ಮಾಲೀಕ ತನ್ನ ಪಕ್ಕದಲ್ಲೇ ಕೂರಿಸಿಕೊಂಡಿರುವ ಪೋಟೋ ಹಾಗೂ ಬಸ್ ಟಿಕೆಟ್ ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಕುದುರೆ ಏರಿ ಎಕ್ಸಾಂಗೆ ಬಂದ ವಿದ್ಯಾರ್ಥಿನಿ, ವಿಡಿಯೋ ವೈರಲ್

ಒಟ್ಟಿನಲ್ಲಿ ಸೇರಿಗೆ ಸವ್ವಾಸೇರು ಎಂಬ ರೀತಿಯ ಈ ಪ್ರಕರಣ ಒಂದು  ಕ್ಷಣ ನಗು ತರಿಸಿದರೂ ಇಂಥವರೂ ಇರುತ್ತಾರೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.

PREV
click me!

Recommended Stories

Udupi: 'ನಾನು ಕೇಳುವ ಪ್ರಶ್ನೆಯನ್ನು ಜನರು ಕೇಳುವಂತಾಗಲಿ', ಕೇಂದ್ರದ BJP ಸರ್ಕಾರ ವಿರುದ್ಧ ಗುಡುಗಿದ ಅಣ್ಣಾಮಲೈ
ಭಾರತದ ವಿದ್ಯುತ್ ಭವಿಷ್ಯದಲ್ಲಿ ಕರ್ನಾಟಕವೇ ಹೈಲೈಟ್‌: ಬೆಂಗಳೂರಿನಲ್ಲಿ Elecrama 2027 ಮೊದಲ ರೋಡ್‌ಶೋ ನಡೆಸಿದ IEEMA