ವಡಗೇರಾದ ತುಮಕೂರು ಮತ್ತು ವಡಗೇರಾ ಮಾರ್ಗ ಮಧ್ಯೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದಲ್ಲಿ ಗುರುವಾರ ಬೆ.10 ಗಂಟೆ ಸುಮಾರಿಗೆ ಯಾದಗಿರಿ-ವಡಗೇರಾ-ಬೆಂಡೆಬೆಂಬಳಿ ಮಾರ್ಗದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪಲ್ಟಿ ಆಗಿ ರಸ್ತೆ ಪಕ್ಕಕ್ಕೆ ಉರುಳಿದ್ದು, ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಅಪಾಯವಾಗಿಲ್ಲ.
ಯಾದಗಿರಿ(ನ.10): ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನ ಸ್ಟೀಯರಿಂಗ್ ಕಿತ್ತಿದ್ದರಿಂದ, ನಿಯಂತ್ರಣ ತಪ್ಪಿದ ಆ ಬಸ್ ರಸ್ತೆಬದಿಗೆ ಹಳ್ಳಕ್ಕೆ ಬಿದ್ದ ಘಟನೆ ಜಿಲ್ಲೆಯ ವಡಗೇರಾ ಸಮೀಪ ಗುರುವಾರ ನಡೆದಿದೆ.
ವಡಗೇರಾದ ತುಮಕೂರು ಮತ್ತು ವಡಗೇರಾ ಮಾರ್ಗ ಮಧ್ಯೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದಲ್ಲಿ ಗುರುವಾರ ಬೆ.10 ಗಂಟೆ ಸುಮಾರಿಗೆ ಯಾದಗಿರಿ-ವಡಗೇರಾ-ಬೆಂಡೆಬೆಂಬಳಿ ಮಾರ್ಗದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪಲ್ಟಿ ಆಗಿ ರಸ್ತೆ ಪಕ್ಕಕ್ಕೆ ಉರುಳಿದ್ದು, ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಅಪಾಯವಾಗಿಲ್ಲ.
undefined
ರಾಜ್ಯದ್ದಲ್ಲ, ಕೇಂದ್ರದ ಖಜಾನೆ ಖಾಲಿಯಾಗಿದೆ: ಸಚಿವ ಎಚ್. ಕೆ.ಪಾಟೀಲ್
ಬಸ್ಸಿನ ಸ್ಟೀಯರಿಂಗ್ ರಾಡ್ ಮುರಿದು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯ ಪಕ್ಕಕ್ಕೆ ಹೋಗಿ ಉರುಳಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಈ ಬಸ್ಸಿನಲ್ಲಿ ಸಾರ್ವಜನಿಕರು ಹಾಗೂ ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಘಟನೆಗೆ ನಮ್ಮ ಭಾಗಕ್ಕೆ ಹಳೆಯ ಬಸ್‌ಗಳು ಓಡಿಸುತ್ತಿರುವುದು ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಸರಿಯಾದ ಸಮಯಕ್ಕೆ ಬಸ್‌ಗಳ ಅನುಕೂಲವಿಲ್ಲ ಎಂಬುದು ಪ್ರಯಾಣಿಕರ ದೂರಾಗಿದೆ.
ಯಾದಗಿರಿಯಿಂದ ವಡಗೇರಾಕ್ಕೆ ಸಿಟಿ ಬಸ್ ಕೂಡಲೇ ಆರಂಭಿಸಬೇಕು ಹಾಗೂ ಹೊಸ ಬಸ್‌ಗಳನ್ನು ಓಡಿಸಬೇಕು. ಇಲ್ಲದಿದ್ದರೆ ರೈತ ಸಂಘ ವಡಗೇರಾ ತಾಲೂಕು ಘಟಕದ ವತಿಯಿಂದ ವಡಗೇರಾ ಪಟ್ಟಣದ ಮುಖ್ಯ ರಸ್ತೆ ಬಂದ್ ಮಾಡಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ವಡಗೇರಾ ತಾಲೂಕಾಧ್ಯಕ್ಷ ವಿದ್ಯಾಧರ ಜಾಕಾ ಎಚ್ಚರಿಸಿದ್ದಾರೆ.