Gadag: ಹಳ್ಳದಲ್ಲಿ ಸಿಲುಕಿದ್ದ ಸಾರಿಗೆ ಬಸ್: 22 ಪ್ರಯಾಣಿಕರ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ!

Published : Jun 19, 2022, 02:12 PM IST
Gadag: ಹಳ್ಳದಲ್ಲಿ ಸಿಲುಕಿದ್ದ ಸಾರಿಗೆ ಬಸ್: 22 ಪ್ರಯಾಣಿಕರ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ!

ಸಾರಾಂಶ

ಇಟಗಿ-ಸೂಡಿ ಮಾರ್ಗ ಮಧ್ಯದ ಹಳ್ಳದಲ್ಲಿ ಸಾರಿಗೆ ಬಸ್ ಸಿಲುಕಿ 22 ಜನ ಪ್ರಯಾಣಿಕರು ಪರದಾಡಿದ್ದು, ಸ್ವಲ್ಪದರಲ್ಲೇ ಭಾರಿ ದುರಂತ ಒಂದು ತಪ್ಪಿದೆ. ಜಿಲ್ಲೆಯ ರೋಣ ತಾಲೂಕಿನ ಇಟಗಿಯಿಂದ ಸೂಡಿ ಹೋಗುವ ಮಾರ್ಗ ಮಧ್ಯೆ ಹಳ್ಳದಲ್ಲಿ ಸಾರಿಗೆ ಬಸ್ ಸಿಕ್ಕಿ ಹಾಕಿಕೊಂಡಿದೆ. 

ಗದಗ (ಜೂ.19): ಜಿಲ್ಲೆಯ ಇಟಗಿ-ಸೂಡಿ ಮಾರ್ಗ ಮಧ್ಯದ ಹಳ್ಳದಲ್ಲಿ ಸಾರಿಗೆ ಬಸ್ ಸಿಲುಕಿ 22 ಜನ ಪ್ರಯಾಣಿಕರು ಪರದಾಡಿದ್ದು, ಸ್ವಲ್ಪದರಲ್ಲೇ ಭಾರಿ ದುರಂತ ಒಂದು ತಪ್ಪಿದೆ. ಜಿಲ್ಲೆಯ ರೋಣ ತಾಲೂಕಿನ ಇಟಗಿಯಿಂದ ಸೂಡಿ ಹೋಗುವ ಮಾರ್ಗ ಮಧ್ಯೆ ಹಳ್ಳದಲ್ಲಿ ಸಾರಿಗೆ ಬಸ್ ಸಿಕ್ಕಿ ಹಾಕಿಕೊಂಡಿದೆ. 

ಸಕಾಲಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, 10 ಜನ ಪುರುಷರು, ಇಬ್ಬರು ಮಕ್ಕಳು, 6 ಮಹಿಳೆಯರು, ನಿರ್ವಾಹಕ ಮತ್ತು ಡ್ರೈವರ್ ಸೇರಿ ಒಟ್ಟು 22 ಜನರನ್ನು ಸುರಕ್ಷಿತವಾಗಿ ಯಾವುದೇ ಪ್ರಾಣಾಪಾಯವಿಲ್ಲದೆ ರಕ್ಷಣೆ ಮಾಡಿದ್ದಾರೆ. ಹಳ್ಳದ ರಭಸಕ್ಕೆ ಬಸ್ ಅಲುಗಾಡಿದ್ದು, ಅರ್ಧದಷ್ಟು ಬಸ್ ಹಳ್ಳದಲ್ಲಿ ಮುಳುಗಿದೆ. ಮುಂದಿನ ಗ್ಲಾಸ್ ಒಡೆದು ಏಣಿ ಮೂಲಕ ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ವಲ್ಪ ತಡವಾಗಿದ್ದರು ಭಾರಿ ದುರಂತ ಸಂಭವಿಸುತ್ತಿತ್ತು. ಅಗ್ನಿ ಶಾಮಕದಳ ಸಿಬ್ಬಂದಿ ಸಮಯ ಪ್ರಜ್ಞೆಯಿಂದ 22 ಜನ ಜಚಾವ್ ಆಗಿದ್ದಾರೆ. 

ಜಿದ್ದಾ ಜಿದ್ದಿನ ಘೋರ ಕಾಳಗದಲ್ಲಿ ಗೆದ್ದಿದ್ದು 'ಸಾವು': ಶ್ವಾನ, ಸರ್ಪದ ವಿಡಿಯೋ ವೈರಲ್‌..!

ಅಂಗವಿಕಲ ಮಗನ ಬಾವಿಗೆ ತಳ್ಳಿ ತಂದೆ ನೇಣಿಗೆ ಶರಣು: ಅಂಗವಿಕಲ ಮಗನನ್ನು ಬಾವಿಗೆ ತಳ್ಳಿದ ತಂದೆ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದಲ್ಲಿ ನಿನ್ನೆ(ಶನಿವಾರ) ನಡೆದಿದೆ. ಪಾಚರ ಬೆಟ್ಟು ಕೃಷ್ಣ ಪೂಜಾರಿ ಆತ್ಮಹತ್ಯೆ ಮಾಡಿಕೊಂಡವರು. ಇವರು ತನ್ನ ಅಂಗವಿಕಲ ಪುತ್ರ 26 ವರ್ಷದ ದೀಪೇಶ್‌ ಎಂಬಾತನನ್ನು ಮನೆ ಸಮೀಪದ ಬಾವಿಗೆ ತಳ್ಳಿದ್ದಾರೆ. 

ಗದಗನ ಸಂಗೀತ ರಥೋತ್ಸವದಲ್ಲಿ ಮಿಂದೆದ್ದ ಭಕ್ತ ಸಾಗರ: 2 ವರ್ಷಗಳ ನಂತರ ನಡೆದ ಅದ್ಧೂರಿ ಜಾತ್ರೆ..!

ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣ ಪೂಜಾರಿ ಅವರ ಪತ್ನಿ ಅನಾರೋಗ್ಯಕ್ಕೀಡಾಗಿದ್ದು, ಇದ್ದ ಒಬ್ಬ ಮಗನೂ ಅಂಗವಿಕಲನಾಗಿದ್ದರಿಂದ ಮನನೊಂದು ಈ ಕೃತ್ಯವೆಸಗಿದ್ದಾರೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್‌, ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್‌, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ಅಜೆಕಾರು ಎಸ್‌ಐ ಶುಭಕರ್‌, ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ