ಜಮೀರ್ ಅಹಮದ್ ಅವರೇ ನಿಮ್ಮ ರಕ್ತದಲ್ಲೇ ಮುಸಲ್ಮಾನರ ಪರ, ಹಿಂದು ವಿರೋಧ ಇದೆ ಎಂದು ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಡಿಕೆಶಿ, ಜಮೀರ್ ಅವರೇ ಮುಸಲ್ಮಾನರ ಪರವಾಗಿಯೇ ಇರಿ. ಹಿಂದೂಗಳು ನಿಮಗೆ ಓಟ್ ಹಾಕಿದ್ದಾರೆನ್ನೋದು ಮರೀಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು (ಮೇ.07): ಜಮೀರ್ ಅಹಮದ್ ಆಗೊಂದು-ಈಗೊಂದು ಬಾರಿ ಮುಸಲ್ಮಾನ್ ನಾಯಕ ಆಗೋಕೆ ಹೊರಟು ಬಿಡ್ತಾರೆ. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಆಗಿದ್ದಾಗ ಇವನೇ ಲೀಡರ್ ಶಿಫ್ ವಹಿಸಿಕೊಂಡಿದ್ದು ಎಂದು ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಜಮೀರ್ ಅಹಮದ್ ಹಾಗೂ ಡಿಕೆ ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.
ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಆಗಿದ್ದಾಗ ಇವನೇ ಲೀಡರ್ ಶಿಫ್ ವಹಿಸಿಕೊಂಡಿದ್ದು ಎಂದು ಅವರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರೇ ನೇರವಾಗಿ ಆರೋಪ ಮಾಡಿದ್ದರು. ನಾನು ಆವರ ಬಗ್ಗೆ ಆರೋಪ ಮಾಡಿಲ್ಲ. ಅವರ ಶಾಸಕ ಮಾಡಿದ ಆರೋಪಕ್ಕೆ ಮೊದಲು ಉತ್ತರ ಕೊಡಲಿ. ಜಮೀರ್ ಅಹಮದ್ ಅವರೇ ನಿಮ್ಮ ರಕ್ತದಲ್ಲೇ ಮುಸಲ್ಮಾನರ ಪರ, ಹಿಂದು ವಿರೋಧ ಇದೆ ಎಂದು ತೀವ್ರ ವಾಕ್ ಪ್ರಹಾರ ನಡೆಸಿದರು.
ಲಾಕ್‌ಡೌನ್ ಬಗ್ಗೆ ಶೀಘ್ರವೇ ಸಿಎಂ ಆದೇಶ ನೀಡ್ತಾರೆ : ಈಶ್ವರಪ್ಪ ...
ಮುಸಲ್ಮಾನರನ್ನು ಎತ್ತಿ ಕಟ್ಟುವುದು, ಬಾಯಿಗೆ ಬಂದ ಹಾಗೆ ಮಾತನಾಡುವುದು ನಿಮಗೆ ಬೇರೆ ಉದ್ಯೋಗವೇ ಇಲ್ಲ. ತೇಜಸ್ವಿ ಸೂರ್ಯ ಅವರ ಬಗ್ಗೆ ಜಮೀರ್ ಆಡಿರುವ ಮಾತುಗಳನ್ನು ಕೇಳಿದೆ. ನನಗೆ ಅಂತಹ ಪದಗಳನ್ನು ಬಳಸುವುದಕ್ಕೆ ಇಷ್ಟವಾಗಲ್ಲ. ಡಿಕೆಶಿ, ಜಮೀರ್ ಅವರೇ ಮುಸಲ್ಮಾನರ ಪರವಾಗಿಯೇ ಇರಿ. ಹಿಂದೂಗಳು ನಿಮಗೆ ಓಟ್ ಹಾಕಿದ್ದಾರೆನ್ನೋದು ಮರೀಬೇಡಿ. ಹಿಂದುಗಳ ಅನ್ನವನ್ನು ತಿಂದಿದ್ದೀರಾ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದರು.
ತೇಜಸ್ವಿ ಸೂರ್ಯ ಬಗ್ಗೆ, ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತೀರಾ. ನೀವು ಮಾತನಾಡಿ ಅದಕ್ಕಿಂತ ಕೆಟ್ಟ ಪದಗಳು ನನಗೂ ಬರುತ್ತದೆ. ಆದರೆ ಈ ಸಂದರ್ಭದಲ್ಲಿ ನಾನು ಮಾತನಾಡಲ್ಲ. ಜಮೀರ್ ಅಹಮದ್, ಡಿಕೆಶಿ ಅವರು ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡಲಿ ಎಂದು ಎಚ್ಚರಿಕೆಯನ್ನೂ ಸಚಿವ ಈಶ್ವರಪ್ಪ ನೀಡಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona