KRS ಹಿನ್ನೀರಿನಲ್ಲಿ ಈಶ್ವರಪ್ಪ ವಾಟರ್‌ ರ‍್ಯಾಫ್ಟಿಂಗ್

By Kannadaprabha NewsFirst Published Oct 5, 2019, 12:53 PM IST
Highlights

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌ .ಈಶ್ವರಪ್ಪ ಅವರು KRS ಹಿನ್ನೀರಿನಲ್ಲಿ ರ‍್ಯಾಫ್ಟಿಂಗ್ ನಡೆಸಿ ಆನಂದಿಸಿದ್ದಾರೆ. ಸಾಹಸ ಕ್ರೀಡೆ ಪರಿವೀಕ್ಷಣೆ ಮಾಡಿದ ನಂತರ ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದ ಮಯೂರ ಹೋಟೆಲ್ ಸಮೀಪ ಆಯೋಜಿಸಿದ್ದ  ವಾಟರ್‌ ರ‍್ಯಾಫ್ಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ.

ಮಂಡ್ಯ(ಅ.05): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌ .ಈಶ್ವರಪ್ಪ ಕೃಷ್ಣರಾಜಸಾಗರ ಜಲಾಶಯ ಹಿನ್ನೀರಿನ ವೈಟ್‌ ವಾಟರ್‌ ರ‍್ಯಾಫ್ಟಿಂಗ್‌ನಲ್ಲಿ ಕೆಲಕಾಲ ಭಾಗವಹಿಸಿ ಖುಷಿ ಅನುಭವಿಸಿದರು.

ಸಾಹಸ ಕ್ರೀಡೆ ಪರಿವೀಕ್ಷಣೆ ಮಾಡಿದ ನಂತರ ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದ ಮಯೂರ ಹೋಟೆಲ್ ಸಮೀಪ ಆಯೋಜಿಸಿದ್ದ  ವಾಟರ್‌ ರ‍್ಯಾಫ್ಟಿಂಗ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಪ್ರವಾಸಿಗರು ತಮ್ಮ ಕುಟುಂಬದ ಸಮೇತ ಕೆಆರ್‌ ಎಸ್‌ ಹಿನ್ನೀರಿನ ಪ್ರದೇಶಕ್ಕೆ ಬಂದರೆ ಸಾಹಸ ಕ್ರೀಡೆಯಲ್ಲಿ ಭಾಗವಹಿಸಬಹುದು ಎಂದಿದ್ದಾರೆ.

ರ‍್ಯಾಫ್ಟಿಂಗ್‌ನಲ್ಲಿ ಭಾಗವಹಿಸಿದ ನಂತರ ಸಚಿವರು ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. 

ಇಂದು ಸಂಜೆ ಮೈಸೂರು ದಸರಾ ಪ್ರಯುಕ್ತ ಉಂಡುವಾಡಿ ಸಮೀಪ ಕೆ.ಆರ್.ಎಸ್. ಹಿನ್ನೀರಿನಲ್ಲಿ ನಮ್ಮ ಇಲಾಖೆಯಿಂದ
ಆಯೋಜಿಸಿರುವ ದಸರಾ ಸಾಹಸ ಕ್ರೀಡಾಕೂಟವನ್ನು ವೀಕ್ಷಣೆ ಮಾಡಿದೆ. pic.twitter.com/D219kxj7ST

— K S Eshwarappa (@ikseshwarappa)

 ರ‍್ಯಾಫ್ಟಿಂಗ್‌ನಿಂದ ಹೆಚ್ಚು ಸಂತೋಷ ಹಾಗೂ ಉಲ್ಲಾಸ ಆಗುವುರ ಜೊತೆಗೆ ಇಲ್ಲಿನ ಇತಿಹಾಸದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ತಾಣಕ್ಕೆ ಬರಬೇಕು ಎಂದು ತಿಳಿಸಿದ್ದಾರೆ.

ಮಂಡ್ಯ: ಅಪ್ರಾಪ್ತೆಗೆ ತಾಳಿ ಕಟ್ಟಿದ ವಿವಾಹಿತ

ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲು ಅಗತ್ಯ ಕ್ರಮವಹಿಸಲಾಗುವುದು. ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಹರೀಶ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀರಂಗಪಟ್ಟಣ ದಸರಾ, ಸಂಸದೆ ಸುಮಲತಾ ಸೇರಿ ಜನಪ್ರತಿನಿಧಿಗಳು ಗೈರು

click me!