
ಮೈಸೂರು, [ಡಿ.17): ಇತ್ತೀಚಿಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿಯ ಪ್ರತಿಭಟನೆ ಬೆನ್ನಲ್ಲೇ ಈಗ ನಂಜನಗೂಡು ಶ್ರೀಕಂಠೇಶ್ವರನ ಅರ್ಚಕರು ಹಾಗೂ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ವೇತನ ಹೆಚ್ಚಳ, ಗುತ್ತಿಗೆ ನೌಕರರ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು [ಸೋಮವಾರ] ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಪುರೋಹಿತರು ಹಾಗೂ ಸಿಬ್ಬಂದಿ ಪ್ರತಿಭಟನೆ ಕೈಗೊಂಡಿದ್ದಾರೆ. ಬೆಳಗ್ಗೆ ಪ್ರಾತಃಕಾಲದ ಪೂಜೆಯ ನಂತರ ಪ್ರತಿಭಟನೆ ನಡೆಸಲಿದ್ದು, ದೇವಾಲಯಲಕ್ಕೆ ಬರುವ ಭಕ್ತರಿಗೆ ದರ್ಶನ ಇರುವುದಿಲ್ಲ.
ತಾರಕ್ಕೇರಿದ ಸರ್ಕಾರ, ಪುರೋಹಿತರ ಕಿತ್ತಾಟ; ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬೀಗ
6ನೇ ವೇತನ ಆಯೋಗ ಜಾರಿ, ಗುತ್ತಿಗೆ ನೌಕರರ ಖಾಯಂ ಮಾಡವುದು, ಸೇವಾ ನಿರತಾರಾಗಿದ್ದಾಗ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ನೀಡುವಂತೆ, ಕರ್ತವ್ಯ ವೇಳೆ ಮೃತಪಟ್ಟರೆ ಕುಟುಂಬಸ್ಥರಿಗೆ ಉದ್ಯೋಗ, ಬೋನಸ್ ಹಾಗೂ ಇತರೆ ಸೌಲಭ್ಯಕ್ಕೆ ಆಗ್ರಹಿಸಿ ಸಿಬ್ಬಂದಿ ವರ್ಗ ಪ್ರತಿಭಟನೆ ನಡೆಸಲಿದೆ.
ದೇವಾಲಯದಲ್ಲಿ 9 ಗಂಟೆಯ ನಂತರ ಪ್ರತಿಭಟನೆ ಪ್ರಾರಂಭವಾಗಲಿದ್ದು, ಲಾಡು ಪ್ರಸಾದ, ಮಂಗಳಾರತಿ ಸೇವೆ, ವಿಶೇಷ ಪೂಜೆಗಳು ನೆರವೇರುವುದಿಲ್ಲ. ಇನ್ನೂ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ.
ಸಂಘದ ಸದಸ್ಯರ ಜತೆ ಚರ್ಚಿಸಿ ಮುಂದಿನ ಹೋರಾಟದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶ್ರೀಕಂಠೇಶ್ವರ ದೇವಸ್ಥಾನ ನೌಕರರ ಸಂಘದ ಅಧ್ಯಕ್ಷ ಎನ್.ಎಂ. ಶ್ರೀಕಂಠ ತಿಳಿಸಿದ್ದಾರೆ.