ಕೆಆರ್‌ಎಸ್‌ನಲ್ಲಿ ಜೀಪ್‌ ಚಾಲನೆ : ಇನ್ಸ್‌ಪೆಕ್ಟರ್‌ ಸಸ್ಪೆಂಡ್‌

By Kannadaprabha NewsFirst Published Mar 3, 2021, 7:30 AM IST
Highlights

KRS ಇನ್ಸ್‌ಪೆಕ್ಟರ್ ಎಸ್‌ಬಿ ಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ. ನಿಷೇಧಿತ ಪ್ರದೇಶದಲ್ಲಿ ಜೀಪ್ ಚಾಲನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಲಾಗಿದೆ. 

ಶ್ರೀರಂಗಪಟ್ಟಣ (ಮಾ.03): ಕೆಆರ್‌ಎಸ್‌ ಅಣೆಕಟ್ಟು ನಿಷೇಧಿತ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಗೆ ಇಲಾಖೆ ವಾಹನ ನೀಡಿ ಸುತ್ತಾಡಿದ್ದಲ್ಲದೇ ಪಕ್ಕದಲ್ಲಿ ಕುಳಿತು ವಿಡಿಯೋ ಚಿತ್ರೀಕರಿಸಿದ್ದ ಆರೋಪದ ಮೇಲೆ ಅಣೆಕಟ್ಟೆಭದ್ರತೆಗೆ ನಿಯೋಜನೆಗೊಂಡಿದ್ದ ಕರ್ನಾಟಕ ಕೈಗಾರಿಕಾ ಭದ್ರತೆಯ 3ನೇ ಪಡೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್‌.ಬಿ.ಸ್ವಾಮಿ ಅವರನ್ನು ಅಮಾನತ್ತುಗೊಳಿಸಲಾಗಿದೆ. 

ಕೆಆರ್‌ಎಸ್‌ನಲ್ಲಿ ಯುವಕನ ಪುಂಡಾಟಕ್ಕೆ ಪೊಲೀಸ್ ಅಧಿಕಾರಿ ಸಾಥ್, ಬೀದಿ ವ್ಯಾಪಾರಿಗಳಿಗೆ ಮಾತ್ರ ಥಳಿತ! ..

ಇತ್ತೀಚೆಗೆ ತಮ್ಮ ಸಂಬಂಧಿಕರೆನ್ನಲಾದ ಯುವಕನಿಗೆ ಜೀಪನ್ನು ಓಡಿಸಲು ಬಿಟ್ಟು ಪಕ್ಕದಲ್ಲಿ ಕುಳಿತು ಕನ್ನಂಬಾಡಿ ಅಣೆಕಟ್ಟೆಯ ಸೇತುವೆಯಲ್ಲಿ ಓಡಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. 

ಪ್ರಕ​ರ​ಣ​ವನ್ನು ಗಂಭೀ​ರ​ವಾಗಿ ಪರಿ​ಗ​ಣಿ​ಸಿ​ರುವ ಪೊಲೀಸ್‌ ಇಲಾಖೆ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯತೆ ಆರೋಪದಡಿ ರಾಜ್ಯ ಪೊಲೀಸ್‌ ಶಿಸ್ತು ನಡವಳಿ ನಿಯಮ 1965/89ರ ನಿಯಮ 5(1) ಮತ್ತು (2) ರಂತೆ ಸೇವೆಯಿಂದ ಅಮಾನಗೊಳಿಸಿ ಆದೇಶ ಹೊರಡಿಸಿದೆ.

click me!