ಕೊಪ್ಪಳ ಜಿಲ್ಲೆಯ ಗಂಗಾವತಿ ಅಭ್ಯರ್ಥಿ ಜನಾರ್ಧನ ರಡ್ಡಿ, ಬಳ್ಳಾರಿ ಅಭ್ಯರ್ಥಿ ಅರುಣಾ ಲಕ್ಷ್ಮಿ ಹಾಗೂ ಕನಕಗಿರಿ ಅಭ್ಯರ್ಥಿ ಡಾ.ಚಾರುಲ್ ಭಾವಚಿತ್ರವಿದ್ದ ಅಂಬ್ಯುಲೆನ್ಸ್ ವಶಕ್ಕೆ ಪಡೆದ ಪೊಲೀಸರು.
ಕೊಪ್ಪಳ(ಏ.02): ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಕೆಆರ್‌ಪಿ ಪಕ್ಷದ ಅಂಬ್ಯುಲೆನ್ಸ್‌ಅನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಅಭ್ಯರ್ಥಿ ಜನಾರ್ಧನ ರಡ್ಡಿ, ಬಳ್ಳಾರಿ ಅಭ್ಯರ್ಥಿ ಅರುಣಾ ಲಕ್ಷ್ಮಿ ಹಾಗೂ ಕನಕಗಿರಿ ಅಭ್ಯರ್ಥಿ ಡಾ.ಚಾರುಲ್ ಭಾವಚಿತ್ರವಿದ್ದ ಅಂಬ್ಯುಲೆನ್ಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
undefined
ಗಂಗಾವತಿ: ಭೋಗಾಪುರೇಶ ಕೆರೆಗೆ ಗವಿ ಶ್ರೀಗಳಿಂದ ಬಾಗಿನ ಅರ್ಪಣೆ
ಸಾರ್ವಜನಿಕ ಉಪಯೋಗಕ್ಕಾಗಿ ಅಂಬ್ಯುಲೆನ್ಸ್ ಬಿಡಲಾಗಿತ್ತು. ನೀತಿ ಸಂಹಿತೆ ಜಾರಿಯಾದ ಸಮಯದಲ್ಲಿ ಮುಖಂಡರ ಭಾವಚಿತ್ರ ಬಳಸದಂತೆ ನಿಯಮ ಹಿನ್ನಲೆಯಲ್ಲಿ ಅಂಬ್ಯುಲೆನ್ಸ್ ವಶಕ್ಕೆ ಪಡೆಯಲಾಗಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.