Kalaburagi airport: ಕಲಬುರಗಿಯಿಂದ ರಾತ್ರಿ ವೇಳೆಯೂ ವಿಮಾನ ಸಂಚಾರ ಶುರು!

By Ravi Janekal  |  First Published Apr 2, 2023, 9:33 AM IST

ಕಲ್ಬುರ್ಗಿ ವಿಮಾನ ನಿಲ್ದಾಣದಿಂದ ಇನ್ನು ರಾತ್ರಿ ವಿಮಾನ ಸಂಚಾರ ಸಹ ಶುರು ಆಗಲಿದೆ. ಕಲ್ಬುರ್ಗಿ ವಿಮಾನ ನಿಲ್ದಾಣದಿಂದ ಇದುವರೆಗೂ ಹಗಲು ಹೊತ್ತಲ್ಲಿ ಮಾತ್ರ ವಿಮಾನ ಸಂಚಾರ ಇತ್ತು. ಇನ್ನು ಮುಂದೆ ರಾತ್ರಿ ವೇಳೆಯೂ ಸಂಚರಿಸಲಿದೆ. 


ಕಲಬುರಗಿ (ಏ.2) : ಕಲ್ಬುರ್ಗಿ ವಿಮಾನ ನಿಲ್ದಾಣದಿಂದ ಇನ್ನು ರಾತ್ರಿ ವಿಮಾನ ಸಂಚಾರ ಸಹ ಶುರು ಆಗಲಿದೆ. ಕಲ್ಬುರ್ಗಿ ವಿಮಾನ ನಿಲ್ದಾಣದಿಂದ ಇದುವರೆಗೂ ಹಗಲು ಹೊತ್ತಲ್ಲಿ ಮಾತ್ರ ವಿಮಾನ ಸಂಚಾರ ಇತ್ತು. ಇನ್ನು ಮುಂದೆ ರಾತ್ರಿ ವೇಳೆಯೂ ಸಂಚರಿಸಲಿದೆ. 

ಕಲ್ಬುರ್ಗಿ ವಿಮಾನ ನಿಲ್ದಾಣ(Kalaburagi airport)ದ ನಿರ್ದೇಶಕ ಚಿಲಕಾ ಮಹೇಶ್(Chilaka mahesh) ಅವರು, ಕಲ್ಬುರ್ಗಿ ಏರ್ಪೋರ್ಟ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. ರಾತ್ರಿ ವಿಮಾನ ಸಂಚಾರಕ್ಕೆ ಬೇಕಾದ ಎಲ್ಲಾ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ರಾತ್ರಿ ಫ್ಲೈಟ್ ಲ್ಯಾಂಡಿಂಗನಲ್ಲಿ ಲೈಟಿಂಗ್ ಪಾತ್ರ ಪ್ರಮುಖವಾಗಿದ್ದು, ಇಟಲಿಯಿಂದ ಈಗಾಗಲೇ ಅಗತ್ಯ ಲೈಟಿಂಗ್ ಗಳನ್ನು ತರಿಸಿಕೊಂಡು ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು. 

Latest Videos

undefined

ರಾತ್ರಿ ವಿಮಾನ ಸಂಚಾರಕ್ಕಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಎಲ್ಲಾ ಅಗತ್ಯ ಸಿದ್ಧತೆಗಳನ್ನ ಕೈಗೊಳ್ಳಲಾಗಿದೆ. ಬರುವ ತಿಂಗಳಿಂದ ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿಯೂ ಸಹ ವಿಮಾನ ಸಂಚಾರ ಶುರುವಾಗಲಿದೆ ಎಂದು ಅವರು ತಿಳಿಸಿದರು. 

ಕಲಬುರಗಿ: ಮತದಾನ ಜಾಗೃತಿಗೆ ಮೊಂಬತ್ತಿ ಮೆರವಣಿಗೆ

ಬೆಂಗಳೂರು, ತಿರುಪತಿ ಮತ್ತು ದೆಹಲಿಗೆ ನೈಟ್ ಫ್ಲೈಟ್

ಕಲ್ಬುರ್ಗಿಯಿಂದ ಬೆಂಗಳೂರು, ಕಲ್ಬುರ್ಗಿಯಿಂದ ತಿರುಪತಿ ಮತ್ತು ಕಲ್ಬುರ್ಗಿಯಿಂದ ದೆಹಲಿಯ ಇಂಡನ್ ಏರ್ಪೋರ್ಟ್ ಗೆ ರಾತ್ರಿ ವಿಮಾನ ಸೇವೆ ಲಭ್ಯವಾಗಲಿವೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಲಯ ಅನುಮತಿ ನೀಡಿದ ತಕ್ಷಣ ಇಲ್ಲಿಂದ ರಾತ್ರಿ ಹಾರಾಟ ಆರಂಭ ಮಾಡಲಾಗುವುದು ಎಂದು ಅವರು ವಿವರಿಸಿದರು. 

ಬಹುತೇಕ ಈ ಮಾಸಾಂತ್ಯದ ಒಳಗೆ ಕಲ್ಬುರ್ಗಿ ಏರ್ಪೋರ್ಟ್ ನಿಂದ ರಾತ್ರಿ ವಿಮಾನ ಸಂಚಾರ ಶುರುವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ ಅವರು, ಸಾರ್ವಜನಿಕರ ಸೇವೆಯ ಜೊತೆಗೆ ವೈದ್ಯಕೀಯ ತುರ್ತು ಚಿಕಿತ್ಸೆಗಳಿಗೆ ರಾತ್ರಿ ವಿಮಾನ ಸೇವೆ ಸಹಕಾರಿಯಾಗಲಿದೆ ಎಂದರು. ಇದೆ ವೇಳೆ ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಹಾರಾಟಕ್ಕೆ ನಡೆಸಿದ ತಯಾರಿಯ ನೀಲ ನಕ್ಷೆಯನ್ನು ಕಲ್ಬುರ್ಗಿ ವಿಮಾನ ನಿಲ್ದಾಣದ ನಿರ್ದೇಶಕ ಚೀಲಕ ಮಹೇಶ್ ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. 

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಶೀಘ್ರ ರಾತ್ರಿ ವಿಮಾನ ಸೇವೆ ಆರಂಭ

ಪೈಲೆಟ್ ಕ್ಯಾಪ್ಟನ್ ಸತೀಶ್ ಸಿಂಗ್ , ವಿಮಾನ ನಿರೀಕ್ಷಕರಾದ ದೇವೇಂದ್ರನಾಥ್, ಅವಿನಾಶ್ ಯಾದವ್ ನಿರ್ದೇಶಕ ನರಸಿಂಹ ಮೆಂಡನ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

click me!