Yadagiri: ರೈತರೇ ಗಮನಿಸಿ: ಕಾಲುವೆಗೆ ನೀರು ಹರಿಸೋ ಬಗ್ಗೆ ಹೊರಬಿತ್ತು ಮಹತ್ವದ ಆದೇಶ!

Published : Oct 20, 2026, 09:10 AM IST
Basava Sagara Dam

ಸಾರಾಂಶ

ಕೃಷ್ಣಾ ಭಾಗ್ಯ ಜಲ ನಿಗಮವು ಮುಂಗಾರು ಹಂಗಾಮಿಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸುವ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜಲಾಶಯಗಳಲ್ಲಿ ನೀರಿನ ಕೊರತೆ ಇರುವುದರಿಂದ ಈ ಬಾರಿ ಹಿಂಗಾರು ಹಂಗಾಮಿಗೆ ನೀರು ಪೂರೈಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಯಾದಗಿರಿ: ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್‌ಎಲ್) ಜೆ.ಬಿ.ಸಿ. ವೃತ್ತದ ವ್ಯಾಪ್ತಿಯಲ್ಲಿ ಬರುವ ಕಾಲುವೆ ಜಾಲಕ್ಕೆ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬಾಕಿ ಅವಧಿಗೆ ನೀರು ಹರಿಸುವ ದಿನಾಂಕಗಳನ್ನು ನಿಗದಿಪಡಿಸಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಆದರೆ, ಜಲಾಶಯಗಳಲ್ಲಿ ನೀರಿನ ಕೊರತೆ ಇರುವ ಹಿನ್ನೆಲೆಯಲ್ಲಿ ಈ ಬಾರಿ ಹಿಂಗಾರು ಹಂಗಾಮಿಗೆ ನೀರು ಪೂರೈಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.

ಹಿಂಗಾರು ಹಂಗಾಮಿಗೆ ನೀರು ಬಿಡುಗಡೆ ಇಲ್ಲ

ಹಿಂಗಾರು ಹಂಗಾಮಿನ ನೀರಾವರಿಗಾಗಿ ಒಟ್ಟು 80.00 ಟಿ.ಎಮ್.ಸಿ ನೀರು ಅಗತ್ಯವಿದ್ದು, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರು ಲಭ್ಯವಿಲ್ಲ. ಈ ಕಾರಣದಿಂದ 2026-27ನೇ ಸಾಲಿನ ಹಿಂಗಾರು ಹಂಗಾಮಿಗೆ ಕಾಲುವೆ ಜಾಲಕ್ಕೆ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ, ಕಾಲುವೆಗಳಿಗೆ ನೀರು ಹರಿಸಲು ಮತ್ತು ಬಂದ್ ಮಾಡಲು ವೇಳಾಪಟ್ಟಿ ನೀಡಲಾಗಿದೆ.

ಕಾಲುವೆ ಜಾಲದ ಗೇಟ್‌ಗಳಿಗೆ ಹಾನಿ ಮಾಡುವುದು, ಎಸ್ಕೇಪ್‌ಗಳ ಮೂಲಕ ಪಕ್ಕಕ್ಕೆ ನೀರು ಹರಿಸುವುದು, ಸೈಫನ್‌ಗಳ ಮೂಲಕ ಮಧ್ಯದ ಹೊಳೆಯಲ್ಲಿ ನೀರು ಎತ್ತುವುದು ಹಾಗೂ ಪಂಪ್‌ಸೆಟ್‌ಗಳ ಮೂಲಕ ನೀರು ಎತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ರೀತಿಯ ಅಕ್ರಮಗಳು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

ನೀರು ಅಭಾವವಿರುವ ಈ ಸಂಕಷ್ಟದ ಸಮಯದಲ್ಲಿ ರೈತರು ನೀರನ್ನು ಅನಗತ್ಯವಾಗಿ ಪೋಲು ಮಾಡದೆ, ಮಿತವ್ಯಯದಿಂದ ಬಳಸಿ ನಿಗಮದ ಅಧಿಕಾರಿಗಳೊಂದಿಗೆ ಸಹಕರಿಸಬೇಕಾಗಿ ಅಧೀಕ್ಷಕ ಅಭಿಯಂತರರು (ಎಚ್.ಪಿ), ಕೆ.ಬಿ.ಜೆ.ಎನ್.ಎಲ್ ವೃತ್ತ, ಭೀಮರಾಯನಗುಡಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ನೀರು ಚಾಲನೆ: ವೇಳಾಪಟ್ಟಿ

ಅ.8ರಂದು ಆರಂಭಗೊಂಡಿದ್ದು, ಅ.21ರ ತನಕ ಒಟ್ಟು 14 ದಿನಗಳು ಇರಲಿವೆ. ಅ.22ರಿಂದ 25ರವರೆಗೆ (4 ದಿನ), ಅ.03ರಿಂದ 12ತನಕ (10 ದಿನ).ನೀರು ಚಾಲನೆಯಲ್ಲಿರಲಿದೆ. ಅ.26ರಿಂದ ಅ.2ರ ತನಕ ಕಾಲುವೆ ಬಂದ್‌ ಆಗಿರಲಿದೆ.

PREV
Read more Articles on
click me!

Recommended Stories

ಗೃಹಜ್ಯೋತಿ ಯೋಜನೆ: ದಾಖಲೆ ಸಲ್ಲಿಕೆಗೆ ಅ.31 ಕೊನೆ ದಿನ, ರಾಜ್ಯಾದ್ಯಂತ 24 ಲಕ್ಷ ಮಂದಿ ತಿರಸ್ಕರಿಸಿದ್ರಾ!
ಸಿದ್ದರಾಮಯ್ಯಗೆ ಗೌರವ ಡಾಕ್ಟರೇಟ್: 'ನಾನು ಡಾಕ್ಟರ್ ಅಲ್ಲ, ವಕೀಲ..' ಎಂದ ಮಾಜಿ ಸಿಎಂ