ಎರಡು ಸಲ ಸೋಲಿಸಿದ್ರಿ, ಈ ಬಾರಿ ಗೆಲ್ಲಿಸಿ: ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ

By Kannadaprabha News  |  First Published Dec 3, 2019, 8:02 AM IST

ನಿಮ್ಮ ಜತೆಯಲ್ಲಿದ್ದು ಮನೆ ಮಗನಂತೆ ಶಾಸಕನಾಗಿ ಕೆಲಸ ಮಾಡುತ್ತೇನೆ. ಈ ಬಾರಿ ನನ್ನ ಗೆಲ್ಲಿಸಿಕೊಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಮನವಿ ಮಾಡಿದ್ದಾರೆ.


ಮಂಡ್ಯ(ಡಿ.03): ನಿಮ್ಮ ಜತೆಯಲ್ಲಿದ್ದು ಮನೆ ಮಗನಂತೆ ಶಾಸಕನಾಗಿ ಕೆಲಸ ಮಾಡುತ್ತೇನೆ. ಈ ಬಾರಿ ನನ್ನ ಗೆಲ್ಲಿಸಿಕೊಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಮನವಿ ಮಾಡಿದ್ದಾರೆ.

ತಾಲೂಕಿನ ಬೂಕನಕೆರೆ ಹೋಬಳಿಯ ಮತ್ತಿಕೆರೆ, ಮಾಚಗೋನಹಳ್ಳಿ, ಬಲ್ಲೇನಹಳ್ಳಿ, ಕಾಶಿಮುರಕುನಹಳ್ಳಿ, ಹೆರಗನಹಳ್ಳಿ, ಬಸ್ಥಿಹೊಸಕೋಟೆ, ದೊಡ್ಡಗಾಡಿಗನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಿ ಮಾತನಾಡಿದ್ದಾರೆ.

Tap to resize

Latest Videos

undefined

ಮತ್ತೆ ಚಂಡಮಾರುತ, ರಾಜ್ಯದ ಈ ಭಾಗದಲ್ಲಿ ಇನ್ನೆರಡು ದಿನ ಭಾರೀ ಮಳೆ

ಬಿಜೆಪಿ ನೀಡುವ ಹಣ, ಸೀರೆ, ಮೂಗು ಬಟ್ಟು, ವಾಚ್‌ ತಗೆದುಕೊಳ್ಳಿ. ಆದರೆ, ಮತವನ್ನು ನನಗೆ ಹಾಕಿ, ಎರಡು ಬಾರಿ ಸೋಲಿಸಿದ್ದೀರಿ. ಈ ಬಾರಿ ಗೆಲ್ಲಿಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದಿದ್ದಾರೆ.

ನಾನು ಕೂಡ ಈ ಹಿಂದೆ ಹಣಕ್ಕಾಗಿ ಮಾರಾಟ ಮಾಡಿಕೊಳ್ಳಬಹುದಿತ್ತು. ಕೇಳಿದಷ್ಟುದುಡ್ಡು, ಅಧಿಕಾರ ಎಲ್ಲವನ್ನೂ ನೀಡುತ್ತಿದ್ದರು. ಆದರೆ, ಮತದಾರರು ನೀಡಿರುವ ಅಧಿಕಾರವನ್ನು ಮಾರಾಟ ಮಾಡಿಕೊಂಡರೇ ಹೆತ್ತ ತಾಯಿಗೆ ಮೋಸ ಮಾಡಿದಂತೆ ಎಂದು ಭಾವಿಸಿ ಅಂತಹ ನೀಚ ಕೆಲಸಕ್ಕೆ ಹೋಗಲಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಕಬಲೆಗೆರೆ ಪುಟ್ಟಸ್ವಾಮಿ, ಲಕ್ಕೇಗೌಡ, ಬಸವರಾಜು, ಗ್ರಾಪಂ ಸದಸ್ಯ ಮಂಜು ಸೇರಿದಂತೆ ಹಲವರಿದ್ದರು.

ಪ್ರಣಾಳಿಕೆ ಬಿಡುಗಡೆ: ಕೆ. ಆರ್. ಪೇಟೆ ಅಭಿವೃದ್ಧಿಗೆ ಬಿಜೆಪಿ ಪ್ಲಾನಿಂಗ್ ಏನು..?

click me!