ಕೆ. ಆರ್ ಪೇಟೆ: BJP ಅಭ್ಯರ್ಥಿಯ ಅಣ್ಣನಿಂದ ಕಾಂಗ್ರೆಸ್ ಪರ ಪ್ರಚಾರ..!

Kannadaprabha News   | Asianet News
Published : Nov 23, 2019, 08:01 AM IST
ಕೆ. ಆರ್ ಪೇಟೆ: BJP ಅಭ್ಯರ್ಥಿಯ ಅಣ್ಣನಿಂದ ಕಾಂಗ್ರೆಸ್ ಪರ ಪ್ರಚಾರ..!

ಸಾರಾಂಶ

ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಸಹೋದರ ಸವಾಲಿಗೆ ಸಾಕ್ಷಿಯಾಗಿದೆ. ತಮ್ಮನ ವಿರುದ್ಧ ಅಣ್ಣ ಸಮರ ಸಾರಿದ್ದಾರೆ!. ಅನರ್ಹ ಶಾಸಕ ನಾರಾಯಣಗೌಡರ, ಅಣ್ಣ ರಾಮಚಂದ್ರೇಗೌಡ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್‌ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಮಂಡ್ಯ(ನ.23): ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಸಹೋದರ ಸವಾಲಿಗೆ ಸಾಕ್ಷಿಯಾಗಿದೆ. ತಮ್ಮನ ವಿರುದ್ಧ ಅಣ್ಣ ಸಮರ ಸಾರಿದ್ದಾರೆ!. ಅನರ್ಹ ಶಾಸಕ ನಾರಾಯಣಗೌಡರ, ಅಣ್ಣ ರಾಮಚಂದ್ರೇಗೌಡ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್‌ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಕೆ.ಆರ್‌ ಪೇಟೆ ತಾಲೂಕಿನ ಅನುವಿನ ಕಟ್ಟೆಗ್ರಾಮದಲ್ಲಿ ಪ್ರಚಾರ ಆರಂಭಿಸಿರುವ ಅಣ್ಣ ರಾಮಚಂದ್ರೇಗೌಡ ಹೇಳಿಕೆಯೊಂದನ್ನು ನೀಡಿದ್ದಾರೆ. 2013 ರಲ್ಲಿ ನಾನು ನಾರಾಯಣಗೌಡ ಜೊತೆ ಇದ್ದೆ . ಆ ನಂತರ ಆತ ಸರಿ ಇರಲಿಲ್ಲ ಎಂಬ ಭಾವನೆ ಬಂತು. ಆತನ ದಗಲ್ ಬಾಜಿ ಎಂಬುದು ಗೊತ್ತಾಯ್ತು ಎಂದು ಹೇಳಿದ್ದಾರೆ.

ಮಂಡ್ಯ: ಚುಂಚನಗಿರಿ ಶ್ರೀಗಳ ಹೆಸರು ದುರ್ಬಳಕೆ

ಕ್ಷೇತ್ರದಲ್ಲಿ ಏನೂ ಕೆಲಸ ಮಾಡದಿದ್ದರೂ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾನೆ. ತಾಯಿ ಕ್ಷೇತ್ರ ಅಭಿವೃದ್ಧಿ ಮಾಡಲು ಹೇಳಿದ್ದಾರೆಂದು ಹೇಳುತ್ತಾ ನಾಟಕವಾಡುತ್ತಿದ್ದಾನೆ, ಆತ ಶಾಸಕ ಆಗಲು ಅನರ್ಹ. ಈಗ ಅನರ್ಹನೇ ಆಗಿದ್ದಾನೆಂದು ರಾಮಚಂದ್ರೇಗೌಡರು ಕಿಡಿಕಾರಿದ್ದಾರೆ. ಅನರ್ಹ ವ್ಯಕ್ತಿ ಮತ ಹಾಕುವ ಬದಲು ಕಾಂಗ್ರೆಸ್‌ ನ ಚಂದ್ರಶೇಖರ್‌ ಮತ ಹಾಕುವಂತೆ ಮತದಾರರಲ್ಲಿ ಕೋರಿರುವುದಾಗಿ ತಿಳಿಸಿದ್ದಾರೆ.

ದೇವರಾಜ್‌ ಪರ ರೇವಣ್ಣ ಪ್ರಚಾರ

ಕೆಆರ್‌ಪೇಟೆ ಉಪಚುನಾವಣೆ ಹಿನ್ನೆಲೆ ಜೆಡಿಎಸ್‌ ಅಭ್ಯರ್ಥಿ ದೇವರಾಜ್‌ ಪರ ಮಾಜಿ ಸಚಿವ ರೇವಣ್ಣ ಅಕ್ಕಿ ಹೆಬ್ಬಾಳು ಹೋಬಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು. ಕೆ.ಆರ್‌.ಪೇಟೆ ತಾಲೂಕಿನ ವಿವಿಧ ಹೋಬಳಿಗಳಲ್ಲಿ ಸತತ ಮೂರನೇ ದಿನಗಳಿಂದ ಪ್ರಚಾರ ಮಾಡುತ್ತಿರುವ ರೇವಣ್ಣ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ರೇವಣ್ಣ ಹೊರತುಪಡಿಸಿ ಕೆಆರ್‌ಪೇಟೆಯತ್ತ ಜೆಡಿಎಸ್‌ ಯಾವುದೇ ನಾಯಕರು ಮುಖ ಮಾಡಿಲ್ಲ.

ಸ್ವಾಭಿಮಾನಿ ಕಳಹೆ ಮೊಳಗಿಸಿದ ಪಕ್ಷೇತರ ಅಭ್ಯರ್ಥಿ ದೇವೇಗೌಡ

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!