ಕೆ.ಆರ್.ಪೇಟೆ ಉಪ ಚುನಾವಣೆ ಕಣ ರಂಗೇರುತ್ತಿದ್ದು, ಟ್ರೋಲಿಗರ ಕೈಚಳಕ ತೋರಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಹೆಸರನ್ನೂ ಕೂಡ ದುರ್ಬಳಕೆ ಮಾಡಿಕೊಂಡಿದ್ದಾರೆ.
ಮಂಡ್ಯ(ನ.23): ಕೆ.ಆರ್.ಪೇಟೆ ಉಪ ಚುನಾವಣೆ ಕಣ ರಂಗೇರುತ್ತಿದ್ದು, ಟ್ರೋಲಿಗರ ಕೈಚಳಕ ತೋರಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಹೆಸರನ್ನೂ ಕೂಡ ದುರ್ಬಳಕೆ ಮಾಡಿಕೊಂಡಿದ್ದಾರೆ.
ಕುಮಾರಸ್ವಾಮಿ ಅವರ ಸರ್ಕಾರ ಬೀಳಿಸಿದ ಒಕ್ಕಲಿಗ ವಿರೋಧಿ ಅನರ್ಹ ಶಾಸಕರಿಗೆ ಒಕ್ಕಲಿಗರು ಮತನೀಡಬಾರದು ಎಂದು ಸ್ವಾಮೀಜಿಗಳ ಪೋಟೊ ಹಾಕಿ ಸಾಮಾಜಿಕ ಜಾಲ ತಾಣದಲ್ಲಿ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ.
undefined
ಸ್ವಾಭಿಮಾನಿ ಕಳಹೆ ಮೊಳಗಿಸಿದ ಪಕ್ಷೇತರ ಅಭ್ಯರ್ಥಿ ದೇವೇಗೌಡ
ಪೋಟೊ ವೈರಲ್ ಆಗುತ್ತಲೇ ಎಚ್ಚೆತ್ತು ಕೊಂಡ ಶ್ರೀಮಠ, ಇದು ಪೂಜ್ಯ ಸ್ವಾಮೀಜಿಯವರ ಹೇಳಿಕೆಯಲ್ಲ. ಯಾರೋ ಸೃಷ್ಟಿಸಿದ ಹೇಳಿಕೆಯಾಗಿದೆ. ಮಠಕ್ಕೂ, ಈ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ಆದಿಚುಂಚನಗಿರಿ ಮಠದ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದಾರೆ.
ಬೈ ಎಲೆಕ್ಷನ್ ಬಿಸಿ ನಡುವೆ ಮಹಾಲಕ್ಷ್ಮೀಗೆ ಭಾರೀ ಮೊತ್ತದ ಚಿನ್ನದ ಹಾರ, ಕಾರಣ?