ಕೆ.ಆರ್.ಮಾರ್ಕೆಟ್ ಉದ್ಘಾಟನೆಗೆ ಕೂಡಿಲ್ಲ ಯೋಗ

By Kannadaprabha News  |  First Published Oct 19, 2022, 11:06 AM IST

ನೂರಾರು ವರ್ಷಗಳ ಇತಿಹಾಸವಿದ್ದ ಕೆ.ಆರ್‌ ಮಾರುಕಟ್ಟೆಇದೀಗ ಹೊಸದಾಗಿ ನಿರ್ಮಾಣವಾಗಿ, ಲೋಕಾರ್ಪಣೆಗೆ ಸನ್ನದ್ಧವಾಗಿದ್ದರೂ ಅದಕ್ಕೆ ಕಾಲ ಕೂಡಿ ಬಂದಂತಿಲ್ಲ!


ದಾವಣಗೆರೆ (ಅ.19) : ನೂರಾರು ವರ್ಷಗಳ ಇತಿಹಾಸವಿದ್ದ ಕೆ.ಆರ್‌ ಮಾರುಕಟ್ಟೆಇದೀಗ ಆಧುನಿಕ ಸ್ಪರ್ಶದೊಂದಿಗೆ ಹೊಸದಾಗಿ ನಿರ್ಮಾಣವಾಗಿ, ಲೋಕಾರ್ಪಣೆಗೆ ಸನ್ನದ್ಧವಾಗಿದ್ದರೂ ಅದಕ್ಕೆ ಕಾಲ ಕೂಡಿ ಬಂದಂತಿಲ್ಲ! ನಗರದ ಕೆಆರ್‌ ಮಾರುಕಟ್ಟೆಹೊಸದಾಗಿ ನಿರ್ಮಿಸಲು ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್‌.ಎಸ್‌.ಮಲ್ಲಿಕಾರ್ಜುನ ಎಪಿಎಂಸಿಯಿಂದ 2013-14ನೇ ಸಾಲಿನ ನಬಾರ್ಡ್‌(ಡಬ್ಲ್ಯುಐಎಫ್‌) ಹೆಚ್ಚುವರಿ ಯೋಜನೆಯಡಿ 25 ಕೋಟಿ ರು. ವೆಚ್ಚದಲ್ಲಿ ಕೆಆರ್‌ ಮಾರುಕಟ್ಟೆನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು.

ಶಾಸಕ ರೇಣುಕಾಚಾರ್ಯ ಸಮ್ಮುಖ ಬಿಜೆಪಿ ಸೇರ್ಪಡೆಯಾದ ಮುಸ್ಲಿಮರು

Latest Videos

undefined

ಪಾಲಿಕೆ ಜಾಗದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ, ನಬಾರ್ಡ್‌ನಿಂದ 25 ಕೋಟಿ ರು. ವೆಚ್ಚದಲ್ಲಿ ಮೂರಂತಸ್ತಿನ ಕೆ.ಆರ್‌.ಮಾರುಕಟ್ಟೆನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಮೈಸೂರು ಮಹಾರಾಜ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್‌ ಹೆಸರಿನಲ್ಲಿ ಹಿಂದಿನ ಸರ್ಕಾರ ನಿರ್ಮಾಣಕ್ಕೆ ಚಾಲನೆ ನೀಡಿದ್ದ ಮಾರುಕಟ್ಟೆಕಾಮಗಾರಿ ಪೂರ್ಣವಾಗಿದೆ. ಆದರೆ, ಈಗಿನ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಚರ್ಚಿಸಿದ ನಂತರ ಮಾರುಕಟ್ಟೆಜಾಗ ಪಾಲಿಕೆಗೆ ಹಸ್ತಾಂತರವಾದ ಬಳಿಕ ಲೋಕಾರ್ಪಣೆಗೊಳಿಸಲು ಎಪಿಎಂಸಿ ಆಲೋಚಿಸಿದೆ.

ಒಟ್ಟು 254 ಮಳಿಗೆಗಳು:

ನೆಲ ಮಹಡಿ ಸೇರಿ ಮೂರಂತಸ್ತಿನ ವಿಶಾಲ ಕಟ್ಟಡವನ್ನು ತಮಿಳುನಾಡಿನ ತಿರುಪುರದ ಒಂದನೇ ದರ್ಜೆ ಗುತ್ತಿಗೆದಾರರ ನಂದಗೋಪಾಲ್‌ರ ಟೀಮೇಜ್‌ ಬಿಲ್ಡರ್‌ ಪ್ರೈವೇಟ್‌ ಲಿಮಿಟೆಡ್‌ ನಿರ್ಮಾಣ ಮಾಡಿದ್ದು, 176.00​​-30.00 ಮೀಟರ್‌ ಏರಿದಂತೆ ಒಟ್ಟು 5,286ಚ.ಮೀ. ನಿವೇಶನದಲ್ಲಿ ಕೆಆರ್‌ ಮಾರುಕಟ್ಟೆನಿರ್ಮಾಣವಾಗಿದೆ. 3 ಅಡಿ ಅಗಲ, 3 ಅಡಿ ಉದ್ದದ 138 ಮಳಿಗೆ ನೆಲ ಮಹಡಿಯಲ್ಲಿ, 116 ಮಳಿಗೆ 1ನೇ ಮಹಡಿಯಲ್ಲಿ ಸೇರಿ ಒಟ್ಟು 254 ಮಳಿಗೆಗಳು ನಿರ್ಮಾಣವಾಗಿವೆ. ನೆಲ ಮಹಡಿಯಲ್ಲಿ 2 ಸವೀರ್‍ಸ್‌ ರೂಂ, 1ನೇ ಮಹಡಿಯಲ್ಲೂ 2 ಸವೀರ್‍ಸ್‌ ರೂಂ ಇವೆ.

ಶೌಚಾಲಯಗಳಿಗೆ ನೀರು ಪೂರೈಸಲು 1 ಸಾವಿರ ಲೀಟರ್‌ ಸಾಮರ್ಥ್ಯದ 10 ನೀರಿನ ಟ್ಯಾಂಕ್‌ ಅಳವಡಿಸಿದೆ. ಪುರುಷರು, ಮಹಿಳೆಯರಿಗೆ ಇಂಡಿಯನ್‌ ಮತ್ತು ಪಾಶ್ಚಿಮಾತ್ಯ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಮೂಲತಃ ಇಡೀ ಮಾರುಕಟ್ಟೆಜಾಗವು ಪಾಲಿಕೆಗೆ ಸೇರಿದೆ. ಹಿಂದೆ ಎಪಿಎಂಸಿ ಸಚಿವರೂ ಆಗಿದ್ದ ಎಸ್ಸೆಸ್‌ ಮಲ್ಲಿಕಾರ್ಜುನ ಎಪಿಎಂಸಿ ಮೂಲಕವೇ ನಿರ್ಮಾಣಕ್ಕೆ ಮುಂದಾದರು. ಎಪಿಎಂಸಿ ಮಾರುಕಟ್ಟೆನಿರ್ಮಾಣ ಮಾಡಿದ ನಂತರ ಅದನ್ನು ಪಾಲಿಕೆಗೆ ಹಸ್ತಾಂತರಿಸಬೇಕೆಂಬ ಒಪ್ಪಂದವೂ ಆಗಿದೆ. ಈಗ ಪಾಲಿಕೆಗೆ ಹಸ್ತಾಂತರ, ಮಾರುಕಟ್ಟೆಉದ್ಘಾಟನೆಗೆ ಮುಹೂರ್ತ ಕೂಡಿ ಬಂದಂತಿಲ್ಲ.

ನೂತನ ಮಾರುಕಟ್ಟೆಯಲ್ಲಿ ಏನೇನಿದೆ?

  • ಮಾರುಕಟ್ಟೆಗೆ ಬಂದ ವಾಹನ ನಿಲುಗಡೆಗೆ ವ್ಯವಸ್ಥೆ.
  •  2ನೇ ಮಹಡಿಯಲ್ಲಿ ಸುಮಾರು 50-60 ಲಘು ವಾಹನ ನಿಲ್ಲಿಸುವ ಸಾಮರ್ಥ್ಯ.
  • ನೆಲ ಮಹಡಿಯಿಂದ 1ನೇ ಮಹಡಿಗೆ ಎಸ್ಕಲೇಟರ್‌ ಅಳವಡಿಸಲು ಸ್ಥಳಾವಕಾಶವಿದೆ.
  • 10 ಜನರ ಸಾಮರ್ಥ್ಯದ ಲಿಫ್‌್ಟ, ನೆಲ ಮಹಡಿಯಲ್ಲಿ 8 ದ್ವಾರ, 2ನೇ ಮಹಡಿಯಲ್ಲಿ 2 ದ್ವಾರವಿದೆ.
  •  ಮಾರ್ಕೆಟ್‌ನ ದಕ್ಷಿಣಕ್ಕೆ ಕಾಂಪೌಂಡ್‌ ಇದೆ. ಮಾರುಕಟ್ಟೆಸುತ್ತಲೂ ಮಳೆ ನೀರು ಚರಂಡಿ ನಿರ್ಮಾಣ
  • ಪಾಲಿಕೆ ಮಳೆ ನೀರು ಛೇಂಬರ್‌ಗೆ ಜೋಡಣೆ ಮಾಡಲಾಗಿದೆ.
  •  ನೆಲ ಮಹಡಿಯಲ್ಲಿ 50 ಸಾವಿರ ಲೀಟರ್‌ ಸಾಮರ್ಥ್ಯದ ತೊಟ್ಟಿಇದ್ದು, ಕೊಳವೆ ಬಾವಿ, ಪಾಲಿಕೆ ನಳದ ವ್ಯವಸ್ಥೆ ಇದೆ.

ಕುಟುಂಬಕ್ಕೊಂದೇ ಮಳಿಗೆಗೆ ಆಗ್ರಹ

ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾರುಕಟ್ಟೆಉದ್ಘಾಟನೆಯಾದರೆ, ಸುಮಾರು 254 ಮಳಿಗೆಗಳು ಕಾರ್ಯಾರಂಭ ಮಾಡಲಿದೆ. ಈ ಮಧ್ಯೆ ಒಂದು ಕುಟುಂಬಕ್ಕೆ ಒಂದೇ ಮಳಿಗೆ ನೀಡಬೇಕು. ಪರ ಊರಿನವರಿಗೆ ನೀಡುವ ಬದಲು ಸ್ಥಳೀಯರೇ ಸ್ವಯಂ ಉದ್ಯೋಗ, ವ್ಯಾಪಾರ ಹೊಂದಲು ಅವಕಾಶ ಮಾಡಬೇಕು. ಅಲ್ಲದೇ, ಪಾರದರ್ಶಕವಾಗಿ ಮಳಿಗೆಗಳ ಹಂಚಿಕೆಯಾಗಬೇಕು. ಹಳೆಯ ವ್ಯಾಪಾರಸ್ಥರ ಜೊತೆಗೆ ಹೊಸಬರಿಗೂ ಮಳಿಗೆ ನೀಡಬೇಕು. ಹಿಂದೆಲ್ಲಾ ಅಣ್ಣ-ತಮ್ಮ ಅಂತಾ ಅನೇಕ ಮಳಿಗೆ ಹೊಂದಿದ್ದರು. ಈ ಸಲ ಆ ರೀತಿ ಆಗಬಾರದು ಎಂದು ಅನೇಕರ ಒತ್ತಾಯವೂ ಆಗಿದೆ.

ದಾವಣಗೆರೆಯಿಂದ ‘ಮೀಸಲಾತಿ ಸುಂಟರಗಾಳಿ’ ಶುರು

ಹಣ್ಣು, ತರಕಾರಿ ಮಾರುವವರು ನಮ್ಮ ಅಂಗಡಿ ಮುಂದೆ ಹಾಕಿ ಮಾರಾಟ ಮಾಡುತ್ತಾರೆ. ನಿತ್ಯ ನಮಗೂ ಹೇಳಿ ಹೇಳಿ ಸಾಕಾಗಿದ್ದು, ಆದಷ್ಟುಬೇಗನೆ ಕೆ.ಆರ್‌.ಮಾರುಕಟ್ಟೆಯನ್ನು ಲೋಕಾರ್ಪಣೆಗೊಳಿಸಿ, ಮಳಿಗೆಗಳನ್ನು ಹಂಚಿಕೆ ಮಾಡಲಿ.

ಎಸ್‌.ಎನ್‌.ಪ್ರಕಾಶ, ಮಾಲೀಕ, ಮಹಾವೀರ ಮೆಟಲ್‌.

ಒಂದು ಕುಟುಂಬಕ್ಕೆ ಒಂದೇ ಮಳಿಗೆ ಪರಿಶೀಲಿಸಿ, ನೀಡಬೇಕು. ಮಾರುಕಟ್ಟೆಯ ಸ್ವಚ್ಛತೆ ಕಾಪಾಡಿ, ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು. ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ದಾವಣಗೆರೆ ಇತರೆಡೆಯೂ ಉಪ ಮಾರುಕಟ್ಟೆನಿರ್ಮಿಸಬೇಕು.

ಎಂ.ಜಿ.ಶ್ರೀಕಾಂತ, ಸಾಮಾಜಿಕ ಕಾರ್ಯಕರ್ತ

click me!