ಅಂದು ಮಹಿಳಾ ಅಧಿಕಾರಿ ಮೇಲೆ ಹಲ್ಲೆ : ಇಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Kannadaprabha News   | Asianet News
Published : Jan 25, 2020, 11:59 AM IST
ಅಂದು ಮಹಿಳಾ ಅಧಿಕಾರಿ ಮೇಲೆ ಹಲ್ಲೆ : ಇಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಸಾರಾಂಶ

ಅಂದು ಮಹಿಳಾ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಸ್ಟೇಷನ್ ಹೆಲ್ಪರ್ ಈಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಹಾಸನ [ಜ.25]: ಮಹಿಳಾ ಅಧಿಕಾರಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ಕೆಪಿಟಿಸಿಎಲ್ ಸ್ಟೇಷನ್ ಹೆಲ್ಪರ್ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಹಾಸನದ ಕೆಪಿಟಿಸಿಎಲ್ ಸ್ಟೇಷನ್ ಹೆಲ್ಪರ್ ಮಂಜುನಾಥ್ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. 

2019ರ ಜೂನ್ ತಿಂಗಳಲ್ಲಿ ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕಿ ಸ್ವಾತಿ ದೀಕ್ಷಿತ್ ಮೇಲೆ ಹಲ್ಲೆ ನಡೆಸಿದ್ದ ಮಂಜುನಾಥ್ ಜೈಲು ಸೇರಿ ಒಂದು ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. 

ಪ್ರಿಯಕರನ ಜೊತೆಗೆ ಲಾಡ್ಜ್‌ನಲ್ಲಿ ಇರುವಾಗಲೇ ಪತ್ನಿ ಹಿಡಿದ ಪತಿ...

ಸ್ವಚ್ಛತೆ ಮಾಡುವಂತೆ ಹೇಳಿದ್ದಕ್ಕೆ ಕತ್ತಯಿಂದ ಮನಬಂದಂತೆ ಸ್ವಾತಿ ಮೇಲೆ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸ್ವಾತಿ ಬಳಿಕ ಚೇತರಿಸಿಕೊಂಡಿದ್ದರು. 

ಇದೀಗ ಮಂಜುನಾಥ್ ಶುಕ್ರವಾರ ರಾತ್ರಿ ಹಾಸನ ರೈಲ್ವೆ ನಿಲ್ದಾಣದ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

PREV
click me!

Recommended Stories

ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಶೀಘ್ರ ಸಂಚಾರಕ್ಕೆ ಮುಕ್ತ: 30 ಕೇಬಲ್‌ ಅಳವಡಿಕೆ ಮಾತ್ರ ಬಾಕಿ
‘ಶಿಕ್ಷಣ ಹಬ್‌’ ಮಂಗಳೂರು ಈಗ ಡ್ರಗ್ಸ್‌ಗೂ ಕುಖ್ಯಾತ: ವಿದ್ಯಾರ್ಥಿಗಳೇ ಬಲಿಪಶು!