ಮುಖ್ಯಮಂತ್ರಿಗಳು ಪಕ್ಷದ ಹಾಗೂ ಸರ್ಕಾರದ ಹಿರಿಯರಾಗಿ ಇಂತಹ ದುರಂತ ಸಂದರ್ಭದಲ್ಲಿಯೂ, ಕೋಮು ರಾಜಕಾರಣ ಮಾಡುತ್ತಿರುವ ಸಂಸದರು, ಶಾಸಕರಿಗೆ ಛೀಮಾರಿ ಹಾಕಬೇಕು| ಪ್ರಕರಣದ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳಬೇಕು: ಸಲೀಂ ಅಹಮದ್|
ಬೆಂಗಳೂರು(ಮೇ.07): ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರು ಬೆಡ್ ಬ್ಲಾಕಿಂಗ್ ಹಗರಣ ವಿಚಾರವಾಗಿ ಮಾಡಿರುವ ಆಪಾದನೆಗೆ ಸಂಬಂಧಪಟ್ಟ ಅಧಿಕಾರಿಗಳು, ಕೋವಿಡ್ ವಾರ್ ರೂಂ ಮುಖ್ಯಸ್ಥರನ್ನು ಅಮಾನತು ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಸದರಿ ಬೆಡ್ ಬ್ಲಾಕಿಂಗ್ ಹಗರಣ ಗಂಭೀರ ಸ್ವರೂಪದ್ದಾಗಿದ್ದು, ಬಿಬಿಎಂಪಿ ಕೊರೋನಾ ವಾರ್ ರೂಂನಲ್ಲಿ 205 ಜನ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 17 ಜನ ಒಂದೇ ಕೋಮಿಗೆ ಸೇರಿದವರ ಮೇಲೆ ಆಪಾದನೆ ಹೊರಿಸಿ ಈ ಕೊರೋನಾ ಸಂದರ್ಭದಲ್ಲಿಯೂ ಧರ್ಮವನ್ನು ತರುವಂತಹ ಬಾಲಿಶ ಹೇಳಿಕೆ ನೀಡಿರುವುದನ್ನು ಖಂಡಿಸುವುದಾಗಿ ಹೇಳಿದ್ದಾರೆ.
undefined
ಕಾಂಗ್ರೆಸ್ ಮುಖಂಡರೊಂದಿಗೆ ಬೆಡ್ ಬ್ಲಾಕಿಂಗ್ ದಂಧೆಕೋರ್ತಿ!
ಮುಖ್ಯಮಂತ್ರಿಗಳು ಪಕ್ಷದ ಹಾಗೂ ಸರ್ಕಾರದ ಹಿರಿಯರಾಗಿ ಇಂತಹ ದುರಂತ ಸಂದರ್ಭದಲ್ಲಿಯೂ, ಕೋಮು ರಾಜಕಾರಣ ಮಾಡುತ್ತಿರುವ ಸಂಸದರು, ಶಾಸಕರಿಗೆ ಛೀಮಾರಿ ಹಾಕಿ ತಿಳುವಳಿಕೆ ಹೇಳಬೇಕು. ಪ್ರಕರಣದ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.