ಮೇಹಕರ್‌ ಏತ ನೀರಾವರಿ ಯೋಜನೆ: ಮೂರು ವರ್ಷಗಳ ಹೋರಾಟಕ್ಕೆ ಸಂದ ಜಯ, ಖಂಡ್ರೆ

By Kannadaprabha News  |  First Published Dec 24, 2022, 10:30 PM IST

2019-20ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಗೆ ಅನುದಾನ ಮೀಸಲಿಟ್ಟು ಅದನ್ನು ಘೋಷಣೆ ಮಾಡಲಾಗಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿ​ಕಾರಕ್ಕೆ ಬಂದ ಮೇಲೆ ಕೋವಿಡ್‌ ನೆಪವೊಡ್ಡಿ ಈ ಯೋಜನೆಗೆ ತಡೆ ಹಿಡಿಯಲಾಗಿತ್ತು: ಈಶ್ವರ ಖಂಡ್ರೆ 


ಭಾಲ್ಕಿ(ಡಿ.24): ತಾಲೂಕಿನ ಗಡಿ ಭಾಗದ ಮೇಹಕರ್‌ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ 762 ಕೋಟಿ ರು. ಅನುದಾನಕ್ಕೆ ರಾಜ್ಯ ಸಚಿವ ಸಂಪುಟ ಅನಮೋದನೆ ನೀಡಿರುವುದು ಸಂತಸ ತರಿಸಿದೆ ಎಂದು ಶಾಸಕ ಈಶ್ವರ ಖಂಡ್ರೆ ತಿಳಿಸಿದರು. ಈ ಕುರಿತು ಪ್ರಕಟಣೆ ನೀಡಿ, ಈ ಯೋಜನೆಯಿಂದ ಸಾಯಗಾಂವ ವ್ಯಾಪ್ತಿಯ 12 ಗ್ರಾಮಗಳ ಸುಮಾರು 25 ಸಾವಿರ ಎಕರೆ ಪ್ರದೇಶ ನೀರಾವರಿ ಸೌಲಭ್ಯಕ್ಕೆ ಒಳಪಡಲಿದೆ. ಗಡಿ ಭಾಗದಲ್ಲಿ ನೀರಾವರಿ ಪ್ರದೇಶ ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಖುದ್ದಾಗಿ ನೀರಾವರಿ ತಜ್ಞ ಎಂಜನಿಯರ್‌ಗಳನ್ನು ಕರೆಸಿ ವಿಸ್ತ್ರತ ವರದಿ ಸಿದ್ಧಪಡಿಸಿ ಹಿಂದಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2019-20ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಗೆ ಅನುದಾನ ಮೀಸಲಿಟ್ಟು ಅದನ್ನು ಘೋಷಣೆ ಮಾಡಲಾಗಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿ​ಕಾರಕ್ಕೆ ಬಂದ ಮೇಲೆ ಕೋವಿಡ್‌ ನೆಪವೊಡ್ಡಿ ಈ ಯೋಜನೆಗೆ ತಡೆ ಹಿಡಿಯಲಾಗಿತ್ತು.

ಕಳೆದ ಮೂರು ವರ್ಷಗಳಿಂದ ಮೇಹಕರ್‌ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಈ ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ ಮತ್ತು ಪ್ರಸ್ತುತ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ನೀರಾವರಿ ಸಚಿವರಿಗೆ ಸಾಕಷ್ಟುಸಲ ಖುದ್ದಾಗಿ ಭೇಟಿಯಾಗಿದ್ದೇನೆ. ಹತ್ತಾರೂ ಸಲ ಪತ್ರ ಬರೆಯುವುದರ ಜತೆಗೆ ಸದನ ಒಳಗೂ ಮತ್ತು ಹೊರಗೂ ಸಾಕಷ್ಟು ಸಲ ಮಾತನಾಡಿದ್ದೇನೆ. ಅಷ್ಟೇ ಅಲ್ಲದೇ ಇದೇ 20 ರಂದು ಬೆಳಗಾವಿಯಲ್ಲಿ ನಡೆದ ಅ​ವೇಶನದಲ್ಲಿ ಈ ಯೋಜನೆಗೆ ನೀರಾವರಿ ನಿಗಮದಿಂದ ಅನಮೋದನೆ ಸಿಕ್ಕರೂ ಟೆಂಡರ್‌ ಕರೆಯುವ ಬಗ್ಗೆ ವಿಳಂಬ ಆಗುತ್ತಿರುವ ಕುರಿತು ಪ್ರಸ್ತಾಪಿಸಿದ್ದೇನೆ. ಯೋಜನೆ ಅನುಷ್ಠಾನದ ಬಗ್ಗೆ ಸದನದಲ್ಲಿ ಭ ರವಸೆ ನೀಡಲಾಗಿತ್ತು. ಅದರ ಪರಿಣಾಮ ಗುರುವಾರ ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಮೇಹಕರ್‌ ಏತ ನೀರಾವರಿ ಯೋಜನೆಗೆ ಅನಮೋದನೆ ನೀಡಿದ್ದಾರೆ. ಬಹು ದಿನಗಳ ನನ್ನ ಕನಸು ಈಡೇರುತ್ತಿರುವುದು ಖುಷಿ ತಂದು ಕೊಟ್ಟಿದೆ. ಹಾಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಹಕರಿಸಿದ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.

Latest Videos

undefined

ಬಿಜೆಪಿಗರಿಗೆ ರಾಜ್ಯ ಸರ್ಕಾರದಿಂದಲೇ ಛೀಮಾರಿ: ಈಶ್ವರ ಖಂಡ್ರೆ

ಕೆಲವರಿಗೆ ಸುಳ್ಳೆ ಮನೆದೇವರು. ತಮ್ಮ ಮೂರು ಕಾಸಿನ ಕೊಡುಗೆ ಇಲ್ಲದಿದ್ದರೂ ಎಲ್ಲ ತಾವೇ ಮಾಡಿಸಿದ್ದು ಎಂದು ಹೇಳಿಕೊಳ್ಳುವ ಖಯಾಲಿ ಕೆಲವರಿಗೆ ರಕ್ತಗತವಾಗಿದೆ. ಈ ವರೆಗೆ ಮೇಹಕರ್‌ ಏತ ನೀರಾವರಿ ಬಗ್ಗೆ ಬಾಯಿ ಬಿಡದೆ ಈಗ ಏಕಾ ಏಕಿ ಪತ್ರಿಕಾ ಹೇಳಿಕೆ ನೀಡುವ ಬರಹ ಶೂರರ ಬಗ್ಗೆ ತಮಗೆ ಕನಿಕರ ಎನಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ನೀರಾವರಿ ಯೋಜನೆ ಕೇವಲ ಘೋಷÜಣೆಯಾಗಿ ಜನರಿಗೆ ಅನ್ಯಾಯ ಆಗಬಾರದು. ಕೂಡಲೇ ಅಗತ್ಯ ಹಣ ಬಿಡುಗಡೆ ಮಾಡಿ, ಶೀಘ್ರ ಟೆಂಡರ್‌ ಕರೆಯಬೇಕು ಎಂದು ಖಂಡ್ರೆ ಒತ್ತಾಯಿಸಿದ್ದಾರೆ.

click me!