'ಇಂದಿರಾ ಗಾಂಧಿಯಂತೆ ನಿರ್ಧಾರ ತೆಗೆದುಕೊಳ್ಳೋಕೆ ಮೋದಿಗೆ ಸಾಧ್ಯವೇ..?' ಪ್ರಧಾನಿ ರಾಜೀನಾಮೆಗೆ ಆಗ್ರಹ

By Kannadaprabha NewsFirst Published Jun 2, 2020, 12:22 PM IST
Highlights

ದೇಶವನ್ನು ಅಭಿವೃದ್ಧಿ ಕಡೆ ಕೊಂಡೊಯ್ಯಲು ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಡಾ.ಇಂತಿಯಾಜ್‌ ಅಹಮದ್‌ ಆಗ್ರಹಿಸಿದ್ದಾರೆ.

ತುಮಕೂರು(ಜೂ. 02): ದೇಶವನ್ನು ಅಭಿವೃದ್ಧಿ ಕಡೆ ಕೊಂಡೊಯ್ಯಲು ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಡಾ.ಇಂತಿಯಾಜ್‌ ಅಹಮದ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್‌-19ನಿಂದ ದೇಶದ ಆರ್ಥಿಕತೆ ಕುಸಿದಿರುವ ಹಿನ್ನೆಲೆಯಲ್ಲಿ ಮಾಸ್ಕ್‌, ಸ್ಯಾನಿಟೈಸರ್‌ ಖರೀದಿಸಲು ಪಿಎಂ ಕೇರ್‌ಗೆ ಫಂಡ್‌ ನೀಡಿ ಎನ್ನುವ ನೀವು ನಾಳೆ ಗಡಿಯಲ್ಲಿ ಯುದ್ಧದ ಪರಿಸ್ಥಿತಿ ಬಂದರೆ ದೇಶದ ಭದ್ರತೆಗೆ ಎಲ್ಲಿಂದ ಹಣ ತರುವಿರಿ ಎಂದು ಪ್ರಶ್ನಿಸಿದ್ದಾರೆ.

Latest Videos

ಮಂಡ್ಯದಲ್ಲಿ ಒಂದೇ ದಿನ 15 ಪಾಸಿಟಿವ್ ಪ್ರಕರಣ: ಸಕ್ರಿಯ ಸೋಂಕಿತರ ಸಂಖ್ಯೆ 224ಕ್ಕೆ ಏರಿಕೆ

ದಿ.ಪ್ರಧಾನಿ ಇಂದಿರಾಗಾಂಧಿ ಅವರು ತೆಗೆದುಕೊಂಡಿದ್ದ ದಿಟ್ಟನಿರ್ಧಾರ, ನಿಲುವುಗಳನ್ನು ತೆಗೆದುಕೊಳ್ಳಲು ನಿಮ್ಮ ಕೈಯಲ್ಲಿ ಸಾಧ್ಯವೇ?, ವರ್ಷಕ್ಕೆ 60 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹಿಸುವ ಕೇಂದ್ರ ಸರ್ಕಾರ ಆ ಹಣ ಏನು ಮಾಡುತ್ತದೆ ಎಂಬುದೇ ಪ್ರಶ್ನೆಯಾಗಿ ಉಳಿದಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ತತ್ತರಿಸಿದ್ದ ಸಂತ್ರಸ್ತರಿಗೆ ಅವರದ್ದೇ ಆದ ರಾಜ್ಯ ಸರ್ಕಾರ 30 ಕೋಟಿ ನೆರೆ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಕೇಂದ್ರ ಸರ್ಕಾರ ಕೊಟ್ಟಿದ್ದು ಮಾತ್ರ ಬಿಡಿಗಾಸು. ಇಂತಹ ತಾರತಮ್ಯ ನೀತಿಯಿಂದ ನೆರೆ ಸಂತ್ರಸ್ತರಿಗೆ ಇಂದಿಗೂ ಪರಿಹಾರ ತಲುಪಿಲ್ಲ ಎಂದಿದ್ದಾರೆ.

ಒಬ್ಬ ಸೋಂಕಿತನಿಂದ ಮೂರು ಜಿಲ್ಲೆಗಳಿಗೆ ಢವಢವ; ಬೆಚ್ಚಿ ಬೀಳಿಸಿದೆ ಟ್ರಾವೆಲ್ ಹಿಸ್ಟರಿ

ನೋಟು ಅಮಾನ್ಯೀಕರಣದಿಂದ ಇಂದಿಗೂ ಬಡವರು, ಮಧ್ಯಮ ವರ್ಗದವರು ಚೇತರಿಸಿಕೊಳ್ಳಲಾಗದೆ ಸಂಕಷ್ಟಎದುರಿಸುತ್ತಿದ್ದಾರೆ. ಕಳೆದ ಆರೂವರೆ ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಕೊಟ್ಟಿದ್ದಾದರೂ ಏನು, ನೋಟು ಅಮಾನ್ಯೀಕರಣದಿಂದ ಯಾರಿಗೆ ಲಾಭವಾಯಿತು ಎಂಬುದನ್ನು ಪ್ರದಾನಿಗಳು ಸ್ಪಷ್ಟಪಡಿಸಬೇಕಿದೆ ಎಂದು ತಿಳಿಸಿದ್ದಾರೆ.

click me!