ಮಂಡ್ಯದಲ್ಲಿ ಒಂದೇ ದಿನ 15 ಪಾಸಿಟಿವ್ ಪ್ರಕರಣ: ಸಕ್ರಿಯ ಸೋಂಕಿತರ ಸಂಖ್ಯೆ 224ಕ್ಕೆ ಏರಿಕೆ

Kannadaprabha News   | Asianet News
Published : Jun 02, 2020, 11:28 AM IST
ಮಂಡ್ಯದಲ್ಲಿ ಒಂದೇ ದಿನ 15 ಪಾಸಿಟಿವ್ ಪ್ರಕರಣ: ಸಕ್ರಿಯ ಸೋಂಕಿತರ ಸಂಖ್ಯೆ 224ಕ್ಕೆ ಏರಿಕೆ

ಸಾರಾಂಶ

ಮಂಡ್ಯದಲ್ಲಿ ಸೋಮವಾರ 15 ಮಂದಿಗೆ ಕೊರೋನಾ ಸೋಂಕು ಪಾಸಿಟಿವ್‌ ಬಂದಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ಸೋಂಕಿತರ ಸಂಖ್ಯೆ 285ಕ್ಕೆ ಏರಿದೆ. ಒಟ್ಟು ಬಿಡುಗಡೆಯಾದವರ ಒಟ್ಟು ಸಂಖ್ಯೆ 61 ಆಗಿದೆ. ಸಕ್ರಿಯ 224 ಪ್ರಕರಣಗಳಿವೆ.

ಮಂಡ್ಯ(ಜೂ. 02): ಮಂಡ್ಯದಲ್ಲಿ ಸೋಮವಾರ 15 ಮಂದಿಗೆ ಕೊರೋನಾ ಸೋಂಕು ಪಾಸಿಟಿವ್‌ ಬಂದಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ಸೋಂಕಿತರ ಸಂಖ್ಯೆ 285ಕ್ಕೆ ಏರಿದೆ. ಒಟ್ಟು ಬಿಡುಗಡೆಯಾದವರ ಒಟ್ಟು ಸಂಖ್ಯೆ 61 ಆಗಿದೆ. ಸಕ್ರಿಯ 224 ಪ್ರಕರಣಗಳಿವೆ. ಈ ದಿನ ಆಸ್ಪತ್ರೆಯಿಂದ ಯಾರು ಬಿಡುಗಡೆಯಾಗಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರದ 15 ಪ್ರಕರಣಗಳಲ್ಲಿ ಕೆ.ಆರ್‌. ಪೇಟೆ ತಾಲೂಕಿನ 10, ಪಾಂಡವಪುರ 1 ಹಾಗೂ ನಾಗಮಂಗಲ ತಾಲೂಕಿನ 4 ಮಂದಿ ಇದ್ದಾರೆ. ಈ ಮೂರು ತಾಲೂಕುಗಳಲ್ಲಿ ಸೋಂಕಿರುವ ಬಹುತೇಕರು ಮುಂಬೈನಿಂದ ಬಂದವರೇ ಆಗಿದ್ದಾರೆ. ಇವರೆಲ್ಲರನ್ನೂ ಸಾಂಸ್ಥಿಯ ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ.

ಒಬ್ಬ ಸೋಂಕಿತನಿಂದ ಮೂರು ಜಿಲ್ಲೆಗಳಿಗೆ ಢವಢವ; ಬೆಚ್ಚಿ ಬೀಳಿಸಿದೆ ಟ್ರಾವೆಲ್ ಹಿಸ್ಟರಿ

ಒಬ್ಬ ಇಂದಿನ ಸೋಂಕಿತ ಕೊರೋನಾ ವಾರಿಯರ್ಸ್‌ ಒಬ್ಬರಾಗಿದ್ದಾರೆ. ಇದರಲ್ಲಿ 10 ಮಂದಿ ಪುರುಷರು, ಇಬ್ಬರು ಮಹಿಳೆಯರು, ಮೂವರು ಮಕ್ಕಳಿಗೆ ಸೋಂಕು ದೃಢವಾಗಿದೆ. ಇಬ್ಬರು ಸೋಂಕಿತರಿಗೆ ಯಾವ ಮೂಲಗಳಿಂದ ಕೊರೋನಾ ಪಾಸಿಟಿವ್‌ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. 20 ವರ್ಷದ ಯುವಕನಿಗೆ ಉಸಿರಾಟದ ತೊಂದರೆ ಇದೆ. ಎಲ್ಲರನ್ನು ಮಂಡ್ಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

PREV
click me!

Recommended Stories

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸೀಮಂತ ಸಂಭ್ರಮ; ಶಾಸ್ತ್ರಬದ್ಧ ಸಂಪ್ರದಾಯ ಆಚರಣೆ!
ಪ್ರತಿಭಾವಂತ ವಿದ್ಯಾರ್ಥಿನಿ ಪ್ರಿಯಾಂಕಾ ಇನ್ನಿಲ್ಲ; ಹೊಟ್ಟೆನೋವು ತಾಳಲಾರದೇ ಆತ್ಮ*ಹತ್ಯೆ!