15 ಕ್ಷೇತ್ರಗಳ ಪೈಕಿ ಬಿಜೆಪಿ ಒಂದೂ ಕ್ಷೇತ್ರದಲ್ಲೂ ಗೆಲ್ಲಲ್ಲ: ಗುಂಡೂರಾವ್

By Web DeskFirst Published Nov 27, 2019, 11:53 AM IST
Highlights

ಯಾವುದೇ ಸಿದ್ಧಾಂತಕ್ಕಲ್ಲದೇ, ರಾಜ್ಯದ ಉದ್ಧಾರಕ್ಕಲ್ಲದೇ ಸ್ವಂತ ಉದ್ದೇಶಕ್ಕಾಗಿ ಚುನಾವಣೆ ನಡೆಯುತ್ತಿದೆ| ಮೈತ್ರಿ ಸರ್ಕಾರ ಬಿದ್ದ ಮೇಲೆ ನಡೆದ ಘಟನೆ ಜನರಿಗೆಲ್ಲಾ ಗೊತ್ತಿದೆ| ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಜನರೇ ಒಳ್ಳೆಯ ಬುದ್ದಿ ಕಲಿಸಲಿದ್ದಾರೆ ಎಂದ ಗುಂಡೂರಾವ್| 

ಬೆಳಗಾವಿ(ನ.27): ರಾಜ್ಯದಲ್ಲಿ ಬಹಳ ಸ್ಪಷ್ಟವಾದ ಅಲೆಯೊಂದು ಎದ್ದಿದೆ, ಅನರ್ಹ ಶಾಸಕರ ವಿರುದ್ಧ ವಾತಾವರಣ ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದ 15 ಕ್ಷೇತ್ರಗಳ ಪೈಕಿ ಬಿಜೆಪಿ ಒಂದೂ ಕ್ಷೇತ್ರದಲ್ಲೂ ಗೆಲ್ಲಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. 

ಬುಧವಾರ ಜಿಲ್ಲೆಯ ಗೋಕಾಕ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ನೀತಿ ನಿಯಮ ಇಲ್ಲದೇ ಸರ್ಕಾರ ರಚನೆ ಮಾಡಬೇಕೆಂದು ಮಾಡಿದ್ದಾರೆ. ಯಾವುದೇ ಸಿದ್ಧಾಂತಕ್ಕಲ್ಲದೇ, ರಾಜ್ಯದ ಉದ್ಧಾರಕ್ಕಲ್ಲದೇ ಸ್ವಂತ ಉದ್ದೇಶಕ್ಕಾಗಿ ಚುನಾವಣೆ ನಡೆಯುತ್ತಿದೆ. ಮೈತ್ರಿ ಸರ್ಕಾರ ಬಿದ್ದ ಮೇಲೆ ನಡೆದ ಘಟನೆ ಜನರಿಗೆಲ್ಲಾ ಗೊತ್ತಿದೆ. ಹೀಗಾಗಿ ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಜನರೇ ಒಳ್ಳೆಯ ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ಎರಡೂ ತಿಂಗಳಿಂದ ವಿಧಾನಸೌಧದಲ್ಲಿ ಸೂತಕದ ಛಾಯೆ ಆವರಿಸಿದೆ. ಕಳೆದ ಎರಡೂ ತಿಂಗಳಲ್ಲಿ ಯಾವ ಮಂತ್ರಿಯೂ ಕೆಲಸ ಮಾಡುತ್ತಿಲ್ಲ. ಚುನಾವಣೆ ಗೆಲ್ಲಬೇಕು, ಅದಕ್ಕಾಗಿ ಹಣ ಬೇಕಾಗಿದೆ. ಹೀಗಾಗಿ ವರ್ಗಾವಣೆ ಮಾಡಿಸಲು ಮಂತ್ರಿಗಳು ಕಮಿಷನ್ ದಂಧೆಗೆ ಇಳಿದಿದ್ದಾರೆ ಎಂದು ಗುಂಡೂರಾವ್ ಅವರು ಆರೋಪಿಸಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!