ರಾಮ ಮಂದಿರ ನಿರ್ಮಾಣ ಕ್ರೆಡಿಟ್ ಯಾವುದೊ ಪಕ್ಷಕ್ಕೆ ಸೇರಬೇಕಿಲ್ಲ, ಇದರ ಕ್ರೆಡಿಟ್ ದೇಶದ ಜನರಿಗೆ ಸಿಗಬೇಕು, ಮಹಾತ್ಮಾ ಗಾಂಧಿ ಸಾಯುವಾಗ ಹೇ ರಾಮ್ ಎಂದಿದ್ದಾರೆ ಎಂದು ಹೇಳುತ್ತ ಮತ್ತೆ ರಾಮನಾಮ ಜಪಿಸುತ್ತ ಈ ದೇಶದ ಸಂಸ್ಕೃತಿ ಯಾರ ಸ್ವತ್ತು ಅಲ್ಲ, ನಾವು ಯಾರನ್ನು ದ್ವೇಷಿಸುವುದಿಲ್ಲ, ಸಾಮರಸ್ಯದ ಬದುಕು ನಮ್ಮದಾಗಬೇಕು ಎಂಬುವವರು ತಾವೆಂದು ಹೇಳುತ್ತಲೇ ರಾಮ ಮಂದಿರ ನಿರ್ಮಾಣಕ್ಕೆ ಕೆಪಿಸಿಸಿ ಅಧ್ಯಕ್ಷನಾಗಿ ಸಂಪೂರ್ಣ ಬೆಂಬಲವಿದೆ ಎಂದ ಡಿಕೆಶಿ
ಕಲಬುರಗಿ(ಆ.05): ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಕಲಬುರಗಿ ಭೇಟಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಮನಾಮ ಜಪಿಸಿ ಗಮನ ಸೆಳೆದರು. ರಾಮ ಮಂದಿರ ವಿಚಾರವಾಗಿ ಪ್ರಶ್ನೆಗಳು ಬಂದಾಗ ಪ್ರತಿಕ್ರಿಯಿಸಿ, ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಬೆಂಬಲ ಇದೆ, ರಾಮ ಯಾರೊಬ್ಬರ ಸ್ವತ್ತಲ್ಲ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಹೃದಯದಲ್ಲಿ ರಾಮ ಇದ್ದಾನೆ ಎಂದ ಅವರು, ರಾಮ... ರಾಮ... ರಾಮ.. ಎಂದು ರಾಮನಾಮ ಜಪಿಸಲಾರಂಭಿಸಿದರು.
ರಾಮ ಮಂದಿರ ನಿರ್ಮಾಣ ಕ್ರೆಡಿಟ್ ಯಾವುದೊ ಪಕ್ಷಕ್ಕೆ ಸೇರಬೇಕಿಲ್ಲ, ಇದರ ಕ್ರೆಡಿಟ್ ದೇಶದ ಜನರಿಗೆ ಸಿಗಬೇಕು, ಮಹಾತ್ಮಾ ಗಾಂಧಿ ಸಾಯುವಾಗ ಹೇ ರಾಮ್ ಎಂದಿದ್ದಾರೆ ಎಂದು ಹೇಳುತ್ತ ಮತ್ತೆ ರಾಮನಾಮ ಜಪಿಸುತ್ತ ಈ ದೇಶದ ಸಂಸ್ಕೃತಿ ಯಾರ ಸ್ವತ್ತು ಅಲ್ಲ, ನಾವು ಯಾರನ್ನು ದ್ವೇಷಿಸುವುದಿಲ್ಲ, ಸಾಮರಸ್ಯದ ಬದುಕು ನಮ್ಮದಾಗಬೇಕು ಎಂಬುವವರು ತಾವೆಂದು ಹೇಳುತ್ತಲೇ ರಾಮ ಮಂದಿರ ನಿರ್ಮಾಣಕ್ಕೆ ಕೆಪಿಸಿಸಿ ಅಧ್ಯಕ್ಷನಾಗಿ ಸಂಪೂರ್ಣ ಬೆಂಬಲವಿದೆ ಎಂದರು.
ಡಿಕೆ ಶಿವಕುಮಾರ್‌ಗೆ ಮಂಗಳಮುಖಿಯರಿಂದ ಸಿಕ್ತು ಗ್ರ್ಯಾಂಡ್ ವೆಲ್ಕಮ್
ಡಿಕೆಶಿ ಟೆಂಪಲ್ ರನ್:
ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಕಲಬುರಗಿಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿತ್ತು. ಸೋಮವಾರ ಬೆಳಗ್ಗೆ 10 ಗಂಟೆಗೆ ಕಲಬುರಗಿಗೆ ಬಂದಿಳಿದವರೇ ನೇರವಾಗಿ ಭೀಮಾ ತೀರಲ್ಲಿರುವ ದತ್ತಾತ್ರೇಯ ಮಹಾರಾಜರು ನೆಲೆ ನಿಂತಿರುವ ಗಾಣಗಾಪುರಕ್ಕೆ ಭೇಟಿ ನೀಡಿದರು. ದತ್ತಾತ್ರೇಯ ದೇಗುಲದಲ್ಲಿರುವ ದತ್ತನ ಸ್ವರ್ಣ ಪಾದುಕೆಗಳಿಗೆ ವಿಶೇಷ ಪೂಜೆ ನೆರವೇರಿಸಿದರು. ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊದಲನೇ ಬಾರಿ ದತ್ತನ ದರ್ಶನ ಪಡೆದರು. ಈ ಹಿಂದೆ ಆದಾಯ ತೆರಿಗೆ ವಿಚಾರದಲ್ಲಿ ಅನೇಕ ಗೊಂದಲಗಳಾದ ನಂತರ ದೆಹಲಿ ಜೈಲಿನಿಂದ ಬಿಡುಗಡೆಯಾದ ನಂತರ ದತ್ತನ ಸನ್ನಿಧಿಗೆ ಆಗಮಿಸಿದ್ದರು. ಡಿಕೆಶಿ ಗಾಣಗಾಪುರ ಭೇಟಿಯ ಹೊತ್ತಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸೇರಿದ್ದರಿಂದ ಸಾಮಾಜಿಕ ಅಂತರ ಮಾಯವಾಗಿತ್ತು. ಗಾಣಗಾಪುರದಿಂದ ಕಲಬುರಗಿಗೆ ಬಂದ ನಂತರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಾದ ನಂತರ ಶರಣಬಸವೇಶ್ವರ ಮಂದಿರ, ಖಾಜಾ ಬಂದೇನವಾಜ್ ದರ್ಗಾ, ಬುದ್ಧ ವಿಹಾರಗಳಿಗೂ ಡಿಕೆಶಿ ಭೇಟಿ ನೀಡಿದರು.
;