ಕೈ ನಾಯಕನಿಗೆ ಜೆಡಿಎಸ್‌ಗೆ ಆಹ್ವಾನ : ಗರಂ ಆದ KPCC ಲೀಡರ್

Kannadaprabha News   | Asianet News
Published : Mar 24, 2021, 12:18 PM ISTUpdated : Mar 24, 2021, 12:32 PM IST
ಕೈ ನಾಯಕನಿಗೆ ಜೆಡಿಎಸ್‌ಗೆ ಆಹ್ವಾನ : ಗರಂ ಆದ KPCC ಲೀಡರ್

ಸಾರಾಂಶ

 ಕೈ ನಾಯಕನನ್ನು ಜೆಡಿಎಸ್‌ಗೆ ಆಹ್ವಾನಿಸಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.  ಅಲ್ಲದೇ ಹೊರ ಹೋಗುವ ನಿಮ್ಮವರನ್ನ ಫಸ್ಟ್ ಉಳುಸ್ಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ. 

ಮೈಸೂರು (ಮಾ.24):  ತನ್ವೀರ್‌ ಸೇಠ್‌ ಜೆಡಿಎಸ್‌ಗೆ ಬಂದರೆ ಸ್ವಾಗತ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ ಅವರು, ಕುಮಾರಸ್ವಾಮಿಯವರೇ ಮೊದಲು ನಿಮ್ಮ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಿ. ಮೊದಲು ನಿಮ್ಮ ಪಕ್ಷದ ಶಾಸಕರು, ಮುಖಂಡರನ್ನು ಹಿಡಿದಿಟ್ಟುಕೊಳ್ಳಿ. ಅವರೇ ಕಿತ್ಕೊಂಡು ಬೇರೆ ಪಕ್ಷಕ್ಕೆ ಹೊಗ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಪಕ್ಷದ ಶಾಸಕರ ಉಸಾಬರಿ ನಿಮಗೇಕೆ? ಶಾಸಕ ತನ್ವೀರ್‌ ಸೇಠ್‌ ಜೆಡಿಎಸ್‌ಗೆ ಬಂದರೆ ಅವರನ್ನೇನಾದರೂ ಸಿಎಂ ಮಾಡ್ತೀರಾ? ಹಾಗಂತ ಘೋಷಣೆ ಮಾಡಿ ನೋಡೋಣ? ಸಿಎಂ ಮಾತ್ರ ನಿಮ್ಮ ಕುಟುಂಬದವರೇ ಆಗಬೇಕು ಎಂದರು. 

ಜಾರಕಿಹೊಳಿ ಸೀಡಿ ಕೇಸ್ : ಭಾರಿ ಸಂಶಯಕ್ಕೆ ಎಡೆ ಮಾಡಿದ ನಡೆ

ತನ್ವಿರ್‌ ಸೇಠ್‌ ಅವರನ್ನು ಜಾತಿ ಕೆಡಿಸುವಂತಹ ಕೆಲಸ ಏಕೆ ಮಾಡ್ತೀರಿ? ತನ್ವೀರ್‌ ಸೇಠ್‌ ಎಲ್ಲಿಗೂ ಹೋಗುವುದಿಲ್ಲ. ಅವರು ಕಾಂಗ್ರೆಸ್‌ ಪಕ್ಷದ ಚಿಹ್ನೆಯಲ್ಲಿ ಗೆದ್ದಿರೋರು, ಅವರು ಕಾಂಗ್ರೆಸ್‌ನಲ್ಲೇ ಇರುತ್ತಾರೆ ಎಂದ ಅವರು, ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಪ್ರಶ್ನಾತೀತ ನಾಯಕರು. ಅವರ ವಿರುದ್ದ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!