ಸಿದ್ದರಾಮಯ್ಯಗೆ ಸಮಾಜದಿಂದ ಬಹಿಷ್ಕಾರ ವಿಚಾರ : ತೀವ್ರ ಅಸಮಾಧಾನ

Suvarna News   | Asianet News
Published : Jan 25, 2021, 12:31 PM ISTUpdated : Jan 25, 2021, 12:47 PM IST
ಸಿದ್ದರಾಮಯ್ಯಗೆ ಸಮಾಜದಿಂದ ಬಹಿಷ್ಕಾರ ವಿಚಾರ : ತೀವ್ರ ಅಸಮಾಧಾನ

ಸಾರಾಂಶ

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯಗೆ ಬಹಿಷ್ಕಾರ ಹಾಕುತ್ತೇವೆ ಎನ್ನುವ ವಿಚಾರದ ಬಗ್ಗೆ ಕೈ ನಾಯಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 

ಮೈಸೂರು (ಜ.25):   ಸಿದ್ದರಾಮಯ್ಯ ಅವರನ್ನು ಸಮಾಜದಿಂದ ಬಹಿಷ್ಕರಿಸುತ್ತೇವೆ ಎಂದು  ಎಚ್. ವಿಶ್ವನಾಥ್ ಹೇಳಿರುವುದು ಸರಿಯಲ್ಲ.  ಬಹಿಷ್ಕಾರ ಎಂಬುದು ಅಸಂವಿಧಾನಿಕ ಪದವಾಗಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ ಹೇಳಿದರು. 

ಮೈಸೂರಿನಲ್ಲಿಂದು ಮಾತನಾಡಿದ ಲಕ್ಷ್ಮಣ್ , ವಿಶ್ವನಾಥ್ ಸಾಹಿತ್ಯ ಕೂಟದಲ್ಲಿ ಎಂಎಲ್‌ಸಿ ಆಗಿದ್ದಾರೆ.  ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಕುಂದು ತರಲು ಪ್ರಯತ್ನ ಮಾಡಲಾಗುತ್ತಿದೆ.  ಆರ್ ಎಸ್ ಎಸ್ ಹಾಗೂ ಎಚ್ ವಿಶ್ವನಾಥ್ ಅವರಿಂದ ಈ  ಪ್ರಯತ್ನ ನಡೆಯುತ್ತಿದೆ ಎಂದರು. 

ನನ್ನ ಮಗಳು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ ಎಂದ ಕಾಂಗ್ರೆಸ್ ಶಾಸಕ ...

ಸಿದ್ದರಾಮಯ್ಯ ಅವರು ಒಂದು ಜಾತಿ ವರ್ಗಕ್ಕೆ ಸೇರಿದವರಲ್ಲ. ವಿಶ್ವನಾಥ್ ಬಹಿಷ್ಕಾರ ಪದ ಹೇಗೆ ಬಳಸಿದರು. ಅವರಿಗೆ ಈ ಬಗ್ಗೆ ನಾಚಿಕೆಯಾಗಬೇಕು.  ಇದು ಅಕ್ಷಮ್ಯ ಅಪರಾಧ ಇದಕ್ಕೆ ನಮ್ಮ ವಿರೋಧವಿದೆ.  ಆ ಹೇಳಿಕೆಯನ್ನು ವಿಶ್ವನಾಥ್ ವಾಪಸ್ಸು ತೆಗೆದುಕೊಳ್ಳಬೇಕು ಎಂದು ಲಕ್ಷ್ಮಣ್ ಒತ್ತಾಯಿಸಿದರು. 

 ಸಿಎಂ ಕೈವಾಡ : ಅಕ್ರಮ ಗಣಿಗಾರಿಕೆಯನ್ನ ಸಕ್ರಮಗೊಳಿಸಿಕೊಳ್ಳಿ ಎನ್ನುವ ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮಣ್  ಸಿಎಂ ಹೇಳಿಕೆ ವಿಚಾರ.
ಅಕ್ರಮ ಗಣಿಕಾರಿಕೆ ಹಿಂದೆ ಸಿ ಎಂ ಕೈವಾಡ ಇದೆ.  ಗಣಿಗಾರಿಕೆ ನಡೆಸುವವರ ಹಿಂದೆ ಯಡಿಯೂರಪ್ಪ ಇದ್ದಾರೆ. ಅದಕ್ಕಾಗೆ ಈ ಹೇಳಿಕೆಯನ್ನ ಸಿಎಂ ಹೇಳುತ್ತಿದ್ದಾರೆ ಎಂದರು. 
 
90  ವರ್ಷದ ಹಳೆಯ‌ ಡ್ಯಾಂ ನ ಉಳಿಸುವ ನಿಟ್ಟಿನಲ್ಲಿ ತಕ್ಷಣ ಡ್ಯಾಂ ಸುತ್ತಲಿನ ಅಕ್ರಮ ಗಣಿಗಾರಿಕೆ ನಿಲ್ಲಿಸಿಬೇಕು. ಅಕ್ರಮ ಗಣಿಗಾರಿಕೆಯವರ ವಿರುದ್ದ ಕ್ರಿಮಿನಲ್ ಕೇಸ್ ಗಳನ್ನ ದಾಖಲು ಮಾಡಬೇಕು ಎಂದು ಲಕ್ಷ್ಮಣ್ ಹೇಳಿದರು.

PREV
click me!

Recommended Stories

ರೈತರಿಗೆ ಅನ್ಯಾಯ ಮಾಡುವ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅದು ಕಿರುಕುಳವೇ?: ಶಾಸಕ ಎಚ್.ಡಿ.ರೇವಣ್ಣ
ಪೊಲೀಸರ ಮುಂದೆಯೇ ಚಾಕು ಹಿಡಿದು ತೂರಾಡಿದ ಕನಕಪುರ ಕುಡುಕ; ಖಾಕಿಗೆ ಅವಾಜ್ ಹಾಕಿದ ವಿಡಿಯೋ ವೈರಲ್!