ಗಬ್ಬೆದ್ದು ನಾರುತ್ತಿದ್ದ ಕೊಟ್ಟಾರ ಮೇಲ್ಸೇತುವೆ ಅಡಿಭಾಗಕ್ಕೆ ಹೊಸಲುಕ್..! 100 ಕ್ಕೂ ಹೆಚ್ಚು ಆಸನ

By Kannadaprabha News  |  First Published Oct 4, 2019, 11:08 AM IST

ಗಬ್ಬೆದ್ದು ನಾರುತ್ತಿದ್ದ ಕೊಟ್ಟಾರ ಮೇಲ್ಸೇತುವೆಯ ಅಡಿಭಾಗದಲ್ಲಿ ಈಗ ಜನರು ಹೋಗಿ ಆರಾಮವಾಗಿ ಕೂರಬಹುದು. ಹತ್ತಿರದಲ್ಲಿ ಓಡಾಡುವುದೇ ಸಾಧ್ಯವಿಲ್ಲ ಎಂಬಂತಾಗಿದ್ದ ಸ್ಥಳದಲ್ಲಿ ಈಗ 100ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಪುಟ್ಟಗಾರ್ಡನ್‌ ಕೂಡಾ ನಿರ್ಮಿಸಲಾಗಿದ್ದು, ಆಕರ್ಷಕವಾಗಿ ಬದಲಾಗಿದೆ.


ಮಂಗಳೂರು(ಅ.04): ಕಸ, ಅನವಶ್ಯಕ ವಸ್ತುಗಳಿಂದ ತುಂಬಿ ನಾರುತ್ತಿದ್ದ ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರ ಮೇಲ್ಸೇತುವೆಯ ಅಡಿಭಾಗವನ್ನು ರಾಮಕೃಷ್ಣ ಮಿಷನ್‌ ವತಿಯಿಂದ ಸುಂದರೀಕರಣಗೊಳಿಸಲಾಗಿದ್ದು, ಬುಧವಾರ ಗಾಂಧಿ ಜಯಂತಿಯ ಅಂಗವಾಗಿ ಲೋಕಾರ್ಪಣೆಗೊಳಿಸಲಾಯಿತು.

ಮೇಲ್ಸೇತುವೆಯ ತಳಭಾಗವನ್ನು ಸ್ವಚ್ಛಗೊಳಿಸುವ ಕಾರ್ಯ ಕೆಲವು ದಿನಗಳಿಂದ ನಡೆದಿತ್ತು. ಬಳಿಕ ಅಲ್ಲಿ ಇಂಟರ್‌ಲಾಕ್‌ ಅಳವಡಿಸಿ, ಸಾರ್ವಜನಿಕರು ಕೂರಲು ನೂರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಪುಟ್ಟಗಾರ್ಡನ್‌ ಜನಮನ ಸೂರೆಗೊಳಿಸುತ್ತಿವೆ. ಬಸ್‌ ಪ್ರಯಾಣಿಕರು, ಬೆಳಗ್ಗೆ- ಸಂಜೆ ವೇಳೆ ವಾಕಿಂಗ್‌ ಮಾಡುವವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಅನುಕೂಲವಾಗಿದೆ. ನಗರ ಸೌಂದರ್ಯವನ್ನೂ ಹೆಚ್ಚಿಸಿದೆ. ಮೇಲ್ಸೇತುವೆ ಕಂಬಗಳಿಗೆ ವಿವಿಧ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ.

Tap to resize

Latest Videos

ನನ್ನನ್ನು ಹುಲಿ ಅಂಥಾನೂ ಒಪ್ಪಿದ್ದಾರೆ, ಆನೆ ಅಂಥಾನೂ ಒಪ್ಪಿದ್ದಾರೆ’

ಈ ಸಂದರ್ಭ ಬಳಿಕ ಮಾತನಾಡಿದ ಬೇಲೂರು ರಾಮಕೃಷ್ಣ ಮಠದ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್‌, ದೇಶದ ಹಲವೆಡೆಗಳಲ್ಲಿ ಸ್ವಚ್ಛತಾ ಅಭಿಯಾನ ನಡೆದಿದ್ದರೂ ಮಂಗಳೂರಿನಲ್ಲಿ ನಡೆದ ಸ್ವಚ್ಛತಾ ಅಭಿಯಾನ ಅತ್ಯಂತ ವಿಶಿಷ್ಟವಾಗಿ, ಯಶಸ್ವಿಯಾಗಿ ನಡೆದಿದೆ. ರಾಮಕೃಷ್ಣ ಮಠ ಮಾದರಿ ರೀತಿಯಲ್ಲಿ ಈ ಕಾರ್ಯವನ್ನು ಮಾಡಿದೆ ಎಂದು ಶ್ಲಾಘಿಸಿದರು. ಸ್ವಚ್ಛತೆಯ ಬಗ್ಗೆ ಜನತೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಪೊರಕೆ ಹಿಡಿದ ಬಂಟ್ವಾಳ ತಹಸೀಲ್ದಾರ್‌ ರಶ್ಮಿ

ಶಾಸಕ ಡಾ.ಭರತ್‌ ಶೆಟ್ಟಿಮಾತನಾಡಿ, ರಾಮಕೃಷ್ಣ ಮಿಷನ್‌ ಸಮಾಜದಲ್ಲಿ ಸ್ವಚ್ಛತೆಯ ಪರಿಕಲ್ಪನೆಯನ್ನು ಬೇರೂರುವಂತೆ ಮಾಡಿದೆ. ಎಲ್ಲರಿಗೆ ಸವಾಲಾಗುವ ಸ್ವಚ್ಛತಾ ಅಭಿಯಾನವನ್ನು ಕೈಗೆತ್ತಿಕೊಂಡು ಐದು ವರ್ಷಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸದ್ಯ ತ್ಯಾಜ್ಯ ನಿರ್ವಹಣೆ ನಗರದಲ್ಲಿ ಸವಾಲಾಗಿ ಪರಿಣಮಿಸಿದ್ದು, ಅದನ್ನೂ ನಿರ್ವಹಿಸುವಲ್ಲಿ ಮಿಷನ್‌ ಕೆಲಸಗಳು ಸ್ಫೂರ್ತಿಯಾಗಬೇಕಿದೆ ಎಂದರು.

ಎಂಆರ್‌ಪಿಎಲ್‌ನ ಸಮೂಹ ಮಹಾಪ್ರಬಂಧಕ ಬಿ.ಎಚ್‌.ಪ್ರಸಾದ್‌, ರಾಮಕೃಷ್ಣ ಮಠ ಮಂಗಳೂರಿನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಮಹರಾಜ್‌, ಬೇಲೂರು ಮಠದ ಟ್ರಸ್ಟಿಸ್ವಾಮಿ ಅಚ್ಯುತೇಶಾನಂದಜಿ, ಮಾಜಿ ಮೇಯರ್‌ ಶಶಿಧರ ಹೆಗ್ಡೆ ಇದ್ದರು.

ಬಂಟ್ವಾಳ: ಸುವರ್ಣ ನ್ಯೂಸ್ ಹೆಸರಲ್ಲಿ 50 ಸಾವಿರಕ್ಕೆ ಬೇಡಿಕೆ ಇಟ್ಟ ನಕಲಿ ಪತ್ರಕರ್ತ

click me!