ಬಂದ್ ವಿಫಲಗೊಳಿಸಿದ್ದಕೆ ಥ್ಯಾಂಕ್ಸ್ ಹೇಳಿದ ಸಚಿವ ಕೋಟ

By Suvarna News  |  First Published Jan 8, 2020, 1:06 PM IST

ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್‌ಗೆ ಮಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಬಂದ್ ವಿಫಲಗೊಳಿಸಿದ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದ್ದಾರೆ.


ಮಂಗಳೂರು(ಜ.08): ಬಂದ್ ವಿಫಲಗೊಳಿಸಿದ ಸಾರ್ವಜನಿಕರಿಗೆ ಧನ್ಯವಾದಗಳು. ವಿಪಕ್ಷಗಳ ಪ್ರೇರಣೆಯಿಂದ ಕರೆ ಕೊಟ್ಟಿರುವ ಭಾರತ್ ಬಂದ್ ವಿಫಲವಾಗಿದೆ ಎಂದು ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್‌ಗೆ ಮಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಮಂಗಳೂರಿನಲ್ಲಿ ಮಾತನಾಡಿದ ಅವರು ಬಂದ್ ವಿಫಲಗೊಳಿಸಿದ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದ್ದಾರೆ.

Latest Videos

undefined

ಕಾಂಗ್ರೆಸ್‌ಗೆ ಅಮಿತ್‌ ಶಾ ಅವ್ರನ್ನು ತಡೆಯೋಕಾಗಲ್ಲ: ಬೊಮ್ಮಾಯಿ

ಕೆಲವೊಂದು ಕಡೆ ಸಮಸ್ಯೆ ಸೃಷ್ಟಿ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಂದ್‌ ವಿಫಲಗೊಳಿಸಿದ್ದಾರೆ. ಜನಜೀವನ ವ್ಯವಸ್ಥಿತವಾಗಿದ್ದು ಕರ್ನಾಟಕ ಸೇರಿ ಭಾರತಾದ್ಯಂತ ಬಂದ್ ಆಶಾವಾದ ವಿಫಲವಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರಿಗೆ ಭೇಟಿ ನೀಡುವುದನ್ನು ವಿರೋಧಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಯಾಕೆ? ಎಂದು ಐವನ್ ಡಿಸೋಜಾಗೆ ಟಾಂಗ್ ಕೊಟ್ಟಿದ್ದಾರೆ. ದೇಶದ ಗೃಹಮಂತ್ರಿ ಜಿಲ್ಲೆಗೆ ಬರ್ತಾರೆ ಅನ್ನೋದೆ ಸಂಭ್ರಮ‌. ಅದರಲ್ಲೂ ಒಂದು ಕಾಯ್ದೆ ಬಗ್ಗೆ ಮಾತನಾಡುತ್ತಾರೆ ಅನ್ನೊದು ಒಂದು ಆಶಾವಾದ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳೂರಲ್ಲಿ ಶಾಂತಿ ಕದಡಿದ್ದೇ ಐವನ್ ಡಿಸೋಜ: ನಳಿನ್

ಗೃಹ ಮಂತ್ರಿ ಮನೆ ಬಾಗಿಲಿಗೆ ಬರುವಾಗ ಐವನ್ ಡಿಸೋಜಾ ಸ್ವಾಗತ ಮಾಡುತ್ತಾರೆ ಅಂದುಕೊಂಡಿದ್ದೆ‌. ಐವನ್ ಸಣ್ಣತನ ಪ್ರದರ್ಶಿಸದೇ ಅವರನ್ನು ಸ್ವಾಗತ ಮಾಡಲು ಆಗ್ರಹಿಸುತ್ತೇನೆ ಎಂದು ಹೆಳಿದ್ದಾರೆ.

click me!