ವಿದ್ಯುತ್‌ ಬಿಲ್‌ ಶಾಕ್: ಜೂನ್‌ವರೆಗೆ ವಿದ್ಯುತ್‌ ಕಡಿತವಿಲ್ಲ..?

By Kannadaprabha NewsFirst Published May 13, 2020, 7:56 AM IST
Highlights

ಮೆಸ್ಕಾಂನಿಂದ ವಿದ್ಯುತ್‌ ಬಿಲ್‌ ಪಾವತಿಯಾಗಿಲ್ಲವೆಂಬ ನೆಪದಲ್ಲಿ ಮುಂದಿನ ಜೂನ್‌ತಿಂಗಳವರೆಗೆ ಗೃಹ ಬಳಕೆಯ ವಿದ್ಯುತ್‌ ಕಡಿತಗೊಳಿಸಬಾರದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂಗೆ ಸೂಚನೆ ನೀಡಿದ್ದಾರೆ.

ಮಂಗಳೂರು(ಮೇ 13): ಮೆಸ್ಕಾಂನಿಂದ ವಿದ್ಯುತ್‌ ಬಿಲ್‌ ಪಾವತಿಯಾಗಿಲ್ಲವೆಂಬ ನೆಪದಲ್ಲಿ ಮುಂದಿನ ಜೂನ್‌ತಿಂಗಳವರೆಗೆ ಗೃಹ ಬಳಕೆಯ ವಿದ್ಯುತ್‌ ಕಡಿತಗೊಳಿಸಬಾರದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂಗೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ವಿದ್ಯುತ್‌ ದರ ಪ್ರಥಮ ಸ್ಲಾ್ಯಬ್‌ನಂತೆ 3.80 ರು.ಗೆ ನಿಗದಿಪಡಿಸಿ ಇಲ್ಲವೇ ಫೆಬ್ರವರಿ ತಿಂಗಳ ಕಡಿಮೆ ಬಿಲ್ಲಿನ ಆಧಾರದಲ್ಲಿ ಜನರಿಗೆ ಹೊರೆಯಾಗದಂತೆ ಪುನರ್‌ ಪರಿಶೀಲನೆ ಮಾಡಬೇಕು ಎಂದೂ ನಿರ್ದೇಶಿಸಿದರು.

ಹಾಡಹಾಗಲೇ ರಸ್ತೆಯಲ್ಲಿ ಕಾಡುಕೋಣ, ಜಿಂಕೆಯ ಓಡಾಟ..!

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಅಧಿಕಾರಿ ಮಟ್ಟದ ಸಭೆಯ ಆರಂಭದಲ್ಲಿಯೇ ಮೆಸ್ಕಾಂನ ಭಾರೀ ಶುಲ್ಕದ ಕುರಿತಂತೆ ಪ್ರಸ್ತಾಪಿಸಿದ ಅವರು, ಲಾಕ್‌ಡೌನ್‌ ಸಂದರ್ಭ ಗೃಹ ಬಳಕೆ ಹೆಚ್ಚಿಗೆಯಾಗಿದೆ. ಶೇ. 30ರಷ್ಟುಹೆಚ್ಚುವರಿ ಬಿಲ್‌ ನೀಡಲಾಗುತ್ತಿದೆ. ಏಪ್ರಿಲ್‌, ಮೇ ತಿಂಗಳಿಗೆ ಒಂದೇ ಬಿಲ್‌ ನೀಡಲಾಗಿದೆ ಎಂಬ ಜನರ ಆರೋಪಗಳ ಬಗ್ಗೆ ಅಧಿಕಾರಿಗಳನ್ನು್ನ ಪ್ರಶ್ನಿಸಿದರು.

ಗುಜರಾತ್‌ನಿಂದ ಧಾರವಾಡದಲ್ಲಿ ಕೊರೋನಾ ಬಾಂಬ್‌ ಸ್ಫೋಟ..!

ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿ, ಗೃಹ ಬಳಕೆಯ ವಿದ್ಯುತ್‌ ದರವನ್ನು ಪರಾಮರ್ಶೆ ಮಾಡಿ ನೀಡಲಾಗುತ್ತಿದೆ. ಒಟ್ಟು ಬಳಕೆಗೆ ಸಂಬಂಧಿಸಿ 30 ಯುನಿಟ್‌ವರೆಗೆ 3.80 ರು. ದರದಲ್ಲಿ, 30ರಿಂದ 100 ಯುನಿಟ್‌ವರೆಗೆ 5.20 ರು., 100-200 ಯುನಿಟ್‌ ಬಳಕೆಗೆ 6.75 ರು. ಹಾಗೂ 200ರಿಂದ ಮೇಲ್ಪಟ್ಟು 7.80 ರು. ದರದಲ್ಲಿ ಬಿಲ್‌ ನೀಡಲಾಗುತ್ತಿದೆ. ಎಪ್ರಿಲ್‌ನಲ್ಲಿ ನೀಡಿರುವುದು ಸರಾಸರಿ ಬಿಲ್‌. ಮೇನಲ್ಲಿ ಒಟ್ಟು ಬಿಲ್‌ ಕೊಟ್ಟಾಗ ಅದು ಜಾಸ್ತಿಯಾದಂತೆ ತೋರುತ್ತಿದೆ ಎಂದರು.

ನಿಮ್ಮದು ಮಾರ್ವಾಡಿ ವ್ಯಾಪಾರ ಅಲ್ಲ!:

ಕೊರೋನ ಸಂಕಷ್ಟದಿಂದ ಈಗಾಗಲೇ ಕಂಗೆಟ್ಟಿರುವ ಜನಸಾಮಾನ್ಯರಿಗೆ ಈ ರೀತಿ ಸ್ಲಾಬ್‌ ಆಧಾರದಲ್ಲಿ ದರ ವಿಧಿಸಿ ತೊಂದರೆ ನೀಡಬಾರದು ಎಂದು ಹೇಳಿದ ಅವರು, ನೀವು ಮಾಡುತ್ತಿರುವುದು ಮಾರ್ವಾಡಿ ವ್ಯಾಪಾರ ಅಲ್ಲ ಎಂದು ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದರು.

click me!