ಮಹಿಳೆ ಮೈಮೇಲೆ ಆವರಿಸಿಕೊಂಡು ವಿಮಲ್ ಗುಟ್ಕಾ ಕೇಳಿದ ದೆವ್ವ!

By Suvarna News  |  First Published Jun 10, 2024, 1:01 PM IST

ನರೇಗಾ  ಕಾಮಗಾರಿಯಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದ್ದ ‌ವೇಳೆ ಮಹಿಳೆಯನ್ನು ದೆವ್ವವೊಂದು ಆವರಿಸಿಕೊಂಡು ವಿಚಿತ್ರವಾಗಿ ವರ್ತಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.


ಕೊಪ್ಪಳ (ಜೂ.10): ನರೇಗಾ  ಕಾಮಗಾರಿಯಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದ್ದ ‌ವೇಳೆ ಮಹಿಳೆಯನ್ನು ದೆವ್ವವೊಂದು ಆವರಿಸಿಕೊಂಡು ವಿಚಿತ್ರವಾಗಿ ವರ್ತಿಸಿದ ಘಟನೆ ಇಲ್ಲಿನ  ಕೆರೆಹಳ್ಳಿ ಗ್ರಾಮದಲ್ಲಿ‌ನಡೆದಿದೆ. ಹೀಗಾಗಿ ಮಹಿಳೆಯ ದೇಹ  ಆವರಿಸಿಕೊಂಡ ದೆವ್ವವನ್ನು  ಬಿಡಿಸಲು ಪಕ್ಕದೂರಿನ ಖಾಜಾ ಸಾಹೇಬ್ ಯಡಿಯಪೂರ ಎನ್ನುವವರನ್ನು ಕರೆಸಲಾಯ್ತು. ಈ ವೇಳೆ  ವಿಮಲ್ ಗುಟ್ಕಾ ಕೇಳಿ ಎಲ್ಲರಿಗೂ ಆಶ್ಚರ್ಯವಾಗಿದೆ.

ಪೋಕ್ಸೋ ಪ್ರಕರಣದಲ್ಲಿ ಸಾಕ್ಷಿ ನಾಶ ಪ್ರಯತ್ನವಾಗಿದ್ಯಾ?, ಮುರುಘಾಶ್ರೀಯನ್ನು ಜೈಲಿಂದ ಕೋರ್ಟ್‌ಗೆ ಕರೆತಂದ ಪೊಲೀಸ್

Tap to resize

Latest Videos

undefined

ಕೊಪ್ಪಳದ ಕೆರೆಹಳ್ಳಿ ಗ್ರಾಮದಲ್ಲಿ‌ನಡೆದ ಘಟನೆ ನಡೆದಿದ್ದು,  ನರೇಗಾ ಕೆಲಸದಲ್ಲಿ ತೊಡಗಿದ್ದ ನಾರಾಯಣ ಪೇಟೆ ಗ್ರಾಮದ ಮಹಿಳೆ  ಹೈಡ್ರಾಮಾ ಮಾಡಿದ್ದಾಳೆ. ಮೈಮೇಲೆ ಏನೋ ಆವರಿಸಿಕೊಂಡಂತೆ ವಿಚಿತ್ರವಾಗಿ ವರ್ತನೆ ಮಾಡಿದ್ದಾಳೆ. ವಿಮಲ್ ಗುಟ್ಕಾ ಕೊಡುವಂತೆ  ಅತ್ತುಕೊಂಡು ಕೇಳಿದ್ದಾಳೆ. 

ನಿವೇದಿತಾ ಜತೆ ಮೈಸೂರಿಗೆ ಹೋದ ಚಂದನ್ ಮರಳಿಲ್ಲ! ಡಿವೋರ್ಸ್ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ವಕೀಲೆ

ನನಗೆ ವಿಮಲ್ ಕೊಟ್ರೆ ಹೋಗ್ತಿನಿ ಎಂದು ಮಹಿಳೆ ಮೈಮೇಲೆ‌ ದೆವ್ವ ಬಂದಂತೆ ವರ್ತನೆ ಮಾಡಿದ್ದಾನೆ. ಹೀಗಾಗಿ ಬಂಡಿಹರ್ಲಾಪುರಾ ಗ್ರಾಮದಲ್ಲಿ ದೆವ್ವ ಬಿಡಿಸುವ ಖಾಜಾ ಸಾಹೇಬ್ ಯಡಿಯಪೂರ ಅವರು ಬಂದು ಮಹಿಳೆಗೆ ಆವರಿಸಿಕೊಂಡ ದೆವ್ವವನ್ನು ಪ್ರಶ್ನೆ ಮಾಡಿದ್ದಾರೆ. ದೆವ್ವ ಬಿಡಿಸುವಾಗ ಮಹಿಳೆಗೆ ಆವರಿಸಿಕೊಂಡಿದ್ದ ದೆವ್ವ  ವಿಮಲ್‌ ಗುಟ್ಕಾ ಕೇಳಿದೆ. ಈ ವೇಳೆ ತಲೆ ಮೇಲೆ ಕಲ್ಲೊರಿಸಿ ಖಾಜಾ ಸಾಹೇಬ್ ದೆವ್ವ ಬಿಡಿಸಿದ್ದಾನೆ. ಖಾಜಾ ಸಾಹೇಬ್ ಪೂಜೆ ಮಾಡುತ್ತಿದ್ದಂತೆ ನಾನು ಹೋಗ್ತಿನಿ ಬಿಟ್ಟು ಬಿಡು ಎಂದು ಮಹಿಳೆಗೆ ಆವರಿಸಿಕೊಂಡಿದ್ದ ದೆವ್ವ ಕಣ್ಣೀರು ಹಾಕಿದೆ.

click me!