* ಕೊಪ್ಪಳ ತಾ.ಪಂ. ವಾಹನ ಚಾಲಕ ವಯೋನಿವೃತ್ತಿ
* ತಾವೇ ವಾಹನ ಚಲಾಯಿಸಿ ಚಾಲಕನನ್ನ ಮನೆಗೆ ಬಿಟ್ಟು ಬೀಳ್ಕೊಟ್ಟ ಕಾರ್ಯ ನಿರ್ವಹಕ ಅಧಿಕಾರಿ
* ಮನೆಗೆ ಡ್ರಾಪ್ ಮಾಡಿ ಬಂದ ಬೀಳ್ಕೊಟ್ಟ ಎಂ.ಮಲ್ಲಿಕಾರ್ಜುನ
ಕೊಪ್ಪಳ, (ಸೆ.01): ತಮ್ಮ ವಾಹನದ ಚಾಲಕ ನಿವೃತ್ತಿಯಾದ ಹಿನ್ನೆಲೆಯಲ್ಲಿ ಕೊಪ್ಪಳ ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವಿಶೇಷ ಗೌರವದೊಂದಿಗೆ ಆತನಿಗೆ ಬೀಳ್ಕೊಡಿಗೆ ಕೊಟ್ಟಿದ್ದಾರೆ.
ಹೌದು... ಕಾರ್ಯನಿರ್ವಾಹಕ ಅಧಿಕಾರಿ .ಎಂ.ಮಲ್ಲಿಕಾರ್ಜುನ ಅವರು ನಿವೃತ್ತಿಯಾದ ಚಾಲಕ ಚನ್ನಬಸಪ್ಪ ಹಾದಿಮನಿ ಅವರನ್ನ ವಾಹನದಲ್ಲಿ ಕೂರಿಸಿಕೊಂಡು ವಾಹನ ಚಲಾಯಿಸಿಕೊಂಡು ಹೋಗಿ ಮನೆಗೆ ಡ್ರಾಪ್ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡಿಗೆ ನೀಡಿದ್ದಾರೆ.
ಸೇವೆಯಿಂದ ASI ನಿವೃತ್ತಿ: ಕುದುರೆ ಮೆರವಣಿಗೆ ಮೂಲಕ ಬೀಳ್ಕೊಟ್ಟ ಸಿಬ್ಬಂದಿ
ಕೊಪ್ಪಳ ತಾಲ್ಲೂಕ ಪಂಚಾಯತಿಯ ವಾಹನ ಚಾಲಕರಾಗಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಚನ್ನಬಸಪ್ಪ ಹಾದಿಮನಿ ಅವರು ಮಂಗಳವಾರದಂದು (ಆ.31) ವಯೋನಿವೃತ್ತಿ ಹೊಂದಿದ ಪ್ರಯುಕ್ತ ಕೊಪ್ಪಳ ತಾಲ್ಲೂಕ ಪಂಚಾಯತಿ ವತಿಯಿಂದ ಬೀಳ್ಕೊಡಲಾಯಿತು.
ತಾ.ಪಂ. ವಾಹನ ಚಾಲಕ ವಯೋನಿವೃತ್ತಿ ಪ್ರಯುಕ್ತ ಕಾರ್ಯನಿರ್ವಾಹಕ ಅಧಿಕಾರಿ .ಎಂ.ಮಲ್ಲಿಕಾರ್ಜುನ ಅವರು ಸ್ವತಃ ತಾವೇ ಸರ್ಕಾರಿ ವಾಹನದಲ್ಲಿ ವಾಹನ ಚಾಲಕರಾಗಿ ಚನ್ನಬಸಪ್ಪ ಅವರನ್ನು ಮನೆಗೆ ತಲುಪಿಸಿ ಅವರಿಗೆ ವಿಶೇಷವಾಗಿ ಬೀಳ್ಕೊಟ್ಟರು. ಚಾಲಕ ಮತ್ತು ಅಧಿಕಾರಿ ಎನ್ನುವ ಬೇಧಭಾವ ತೋರದೇ ಇರುವ ಅಧಿಕಾರಿಗಳ ಕಾರ್ಯ ಮಾದರಿಯಾಯ್ತು.