ಮಧ್ಯರಾತ್ರಿ ಕರೆಸಿ ಕೊಂದಿದ್ದ ಮುಖಂಡ : ಪ್ರಿಯಕರನ ಅಗಲಿಕೆಯಿಂದ ಬಾಲಕಿ ಸೂಸೈಡ್

By Kannadaprabha News  |  First Published Sep 1, 2021, 4:05 PM IST
  • ಪ್ರಿಯಕರನ ಹತ್ಯೆಯಿಂದ ಮಾನಸಿಕವಾಗಿ ಆಘಾತ ಕ್ಕೊಳಗಾಗಿದ್ದ ಮಂಡ್ಯ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನ ಮಗಳು 
  • ನಗರದ ಬಾಲಕಿಯರ ಬಾಲಮಂದಿರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ 

  ಮಂಡ್ಯ (ಸೆ.01): ಪ್ರಿಯಕರನ ಹತ್ಯೆಯಿಂದ ಮಾನಸಿಕವಾಗಿ ಆಘಾತ ಕ್ಕೊಳಗಾಗಿದ್ದ ಮಂಡ್ಯ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಾಲಕಿಯರ ಬಾಲಮಂದಿರದಲ್ಲಿ ಮಂಗಳವಾರ ನಡೆದಿದೆ. 

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಅವರ ಪುತ್ರಿ ಮಾನ್ವಿತಾ (17) ಡೆತ್‌ನೋಟ್ ಬರೆ ದಿಟ್ಟು ನೇಣಿಗೆ ಶರಣಾಗಿರುವ ಬಾಲಕಿಯಾಗಿ ದ್ದಾಳೆ. ಪ್ರಿಯಕರನ ಕೊಲೆಯಾದ ನಂತರ ಬಾಲ ಮಂದಿರದಲ್ಲೇ ಇದ್ದ ಮಾನ್ವಿತಾ ಆಗಾಗ್ಗೆ ತನ್ನ ಪ್ರಿಯಕರನ ಸಮಾಧಿ ಸ್ಥಳ ತೋರಿಸುವಂತೆ ಪಟ್ಟು ಹಿಡಿದಿದ್ದಳು. ಅವಳ ಆಸೆ ಈಡೇರದಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ದ್ದಳು. 

Tap to resize

Latest Videos

ಈಕೆ ಒಮ್ಮೆ ಬಾಲಮಂದಿ ರದ ಕಾಂಪೌಂಡ್ ಹಾರಿ ಪ್ರಿಯಕರ ಸಮಾಧಿ ನೋಡಬೇಕೆಂಬ ಆಸೆಯಿಂದ ಓಡುತ್ತಿದ್ದಳು. ಇದನ್ನು ಗಮನಿಸಿದ ಬಾಲಮಂದಿ ರದ ಸಿಬ್ಬಂದಿ ತಕ್ಷಣವೇ ಆಕೆ ಯನ್ನು ಹಿಡಿದು ಬಾಲಮಂದಿರ ದೊಳಕ್ಕೆ ಕರೆದೊಯ್ದಿದ್ದರು. ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಬೆಳಗಿನ ಉಪಹಾರ ಸೇವಿಸಿದ ಬಳಿಕ ಮಾನ್ವಿತಾ ಶೌಚಾಲಯಕ್ಕೆ ತೆರಳಿದ್ದಳು. 

ಪ್ರೀತಿ ಬಲೆಯಲ್ಲಿ ಬಾಲಕ : ಮಧ್ಯರಾತ್ರಿ ಮಗಳ ಮೂಲಕ ಮನೆಗೆ ಕರೆಸಿ ಕೊಲೆಗೈದ ಮುಖಂಡ

ಬಹಳ ಹೊತ್ತಿನವರೆ ವಿಗೂ ಆಕೆ ಶೌಚಾಲಯದಿಂದ ಹೊರಗೆ ಬಾರದ ಕಾರಣ ಅನುಮಾನಗೊಂಡ ಸಿಬ್ಬಂದಿ ಬಾಗಿಲ ಕಿಂಡಿಯಿಂದ ನೋಡಲಾಗಿ ಮಾನ್ವಿತಾ ನೇಣು ಬಿಗಿ ದುಕೊಂಡಿರುವುದು ಕಂಡು ಬಂದಿತು. ತಕ್ಷಣವೇ ಬಾಗಿಲು ಮುರಿದು ಒಳಗೆ ಹೋಗಿ ನೋಡುವಷ್ಟರಲ್ಲಿ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶವವನ್ನು ಮಿಮ್‌ಸ್ ಶವಾಗಾರಕ್ಕೆ ಸಾಗಿಸಿದರು. ಹಿಂದೆ ಏನಾಗಿತ್ತು?: ಮಂಡ್ಯದ ವಿಶ್ವೇಶ್ವರಯ್ಯ ಬಡಾವಣೆಯ ನಿವಾಸಿ ಹಾಗೂ ನಗರಸಭಾ ಸದಸ್ಯ ಶಿವಲಿಂಗು ಅವರ ಪುತ್ರಿ ಮಾನ್ವಿತಾ ಹಾಗೂ ಅದೇ ಬಡಾ ವಣೆಯ ಸತೀಶ್ ಎಂಬುವರ ಪುತ್ರ ದರ್ಶನ್ ಒಬ್ಬರ ನ್ನೊಬ್ಬರು ಪ್ರೀತಿಸುತ್ತಿದ್ದರು. 

ಶಿವಲಿಂಗು ರಾಜ ಕಾರಣದಲ್ಲಿ ತೊಡಗಿಸಿಕೊಂಡಿದ್ದರೆ, ಪತ್ನಿ ಅನು ರಾಧ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡು ತ್ತಿದ್ದರು. ತಂದೆ-ತಾಯಿ ಮನೆಯಲ್ಲಿ ಇಲ್ಲದ ವೇಳೆ ಮಾನ್ವಿತಾ ಪ್ರಿಯಕರ ದರ್ಶನ್‌ನನ್ನು ತನ್ನ ಮನೆಗೇ ಕರೆಸಿ ಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ. ಮಗಳು ಮಾನ್ವಿತಾ ಪ್ರೀತಿಯ ವಿಚಾರ ಮನೆ ಯವರಿಗೆ ತಿಳಿದು ಸಾಕಷ್ಟು ಬುದ್ಧಿವಾದ ಹೇಳಿದ್ದರೂ ಇಬ್ಬರೂ ಕೇಳಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಮನೆ ಯವರು ಕಳೆದ ಏ.14ರಂದು ಮಧ್ಯರಾತ್ರಿ ಮಾನ್ವಿತಾಳಿಂದ ದೂರವಾಣಿ ಕರೆ ಮಾಡಿಸಿ ದರ್ಶನ್‌ನನ್ನು ಮನೆಗೆ ಕರೆಸಿಕೊಂಡ ಶಿವಲಿಂಗು, ಪತ್ನಿ ಅನುರಾಧ ಸೇರಿದಂತೆ ಹತ್ತು-ಹದಿನೈದು ಮಂದಿ ದರ್ಶನ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. 

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ದರ್ಶನ್‌ನನ್ನು ಮಂಡ್ಯದ ಮಿಮ್‌ಸ್ಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್‌ಸ್ಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದನು. ಬಳಿಕ ಮಾನ್ವಿತಾಳ ತಂದೆ ಶಿವಲಿಂಗು-ತಾಯಿ ಅನುರಾಧ ಸೇರಿದಂತೆ 17 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. 

ಆನಂತರ ಮಾನ್ವಿತಾ ತನ್ನ ಮನೆಯಲ್ಲಿರಲು ನಿರಾಕರಿಸಿದ್ದರಿಂದ ಪೊಲೀಸರು ಆಕೆಯನ್ನು ನಗರದ ವಿಶ್ವೇಶ್ವರನಗರದಲ್ಲಿರುವ ಬಾಲಕಿಯರ ಬಾಲಮಂದಿರದಲ್ಲಿ ಇರಿಸಿದ್ದರು. ಸೆಂಟ್ರಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಪ್ರಿಯಕರನೊಂದಿಗೆ ಮಾನ್ವಿತಾ ಕೊಂಡಿದ್ದಾಳೆ.

click me!