ಮುಜರಾಯಿ ದೇವಸ್ಥಾನದಲ್ಲಿಯೇ ಮೌಢ್ಯಾ : ಅಗ್ನಿಕುಂಡ ಹಾಯುವಾಗ ಕೋಳಿ ತೂರಿದ ಪೂಜಾರಿ

By Kannadaprabha News  |  First Published Jun 10, 2021, 7:08 AM IST
  • ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ಮೌಢ್ಯಾಚರಣೆ
  • ಅಗ್ನಿಕುಂಡ ಹಾಯುವಾಗ ಕೋಳಿ ತೂರಿದ ಪೂಜಾರಿ
  • ಕೋವಿಡ್ ನಿಯಮ ಉಲ್ಲಂಘಿಸಿದ  ಪೂಜಾರಿ 

 ಕೊಪ್ಪಳ (ಜೂ.10):  ಮುಜರಾಯಿ ಇಲಾಖೆ ಅಧೀನದಲ್ಲಿ ಇರುವ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ಜಾತ್ರೆ ಮಾಡಿರುವ ವೀಡಿಯೋ ಈಗ ವೈರಲ್‌ ಆಗಿದೆ. ಅಷ್ಟೇ ಅಲ್ಲ, ಅನೇಕ ಮೌಢ್ಯಾಚರಣೆಗಳನ್ನು ಮಾಡಿರುವ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿ ಮದ್ರಸಾಗೆ ನೆರವು : ವ್ಯಾಪಕ ವಿರೋಧ ...

Tap to resize

Latest Videos

ನಾಡಿನ ಎಲ್ಲ ಜಾತ್ರೆಗಳನ್ನು ನಿಷೇಧ ಮಾಡಿದ್ದರೂ ಸಂಪ್ರದಾಯಗಳನ್ನು ಮುರಿಯಬಾರದು ಎಂದು ದೇವಸ್ಥಾನದ ಆವರಣದಲ್ಲಿಯೇ ಜಾತ್ರೆಯ ವಿಧಿ-ವಿಧಾನಗಳನ್ನು ಮಾಡಲಾಗಿದೆ. ಹೀಗೆ ವಿಧಿ-ವಿಧಾನಗಳನ್ನು ನೆರವೇರಿಸುವ ನೆಪದಲ್ಲಿ ಮೌಢ್ಯಾಚರಣೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಅನ್ಯ ಧಾರ್ಮಿಕ ಕೇಂದ್ರಗಳಿಗೆ ಹಿಂದೂ ದೇವಾಲಯಗಳ ಹಣ ಬಳಕೆಗೆ ತಡೆ .

ಅಕ್ಕಿ ಪಾಯಸ ಮಾಡುವ ಪೂಜಾರಿ ಅವರು ಕುದಿಯುವ ಅಕ್ಕಿಯನ್ನು ಕೈಯಿಂದ ತೆಗೆಯುವುದು ಹಾಗೂ ಅಗ್ನಿ ಹಾಯುವ ವೇಳೆಯಲ್ಲಿ ಜೀವಂತ ಕೋಳಿಯೊಂದನ್ನು ತೂರಿಬಿಡುವ ವೀಡಿಯೋ ವೈರಲ್‌ ಆಗಿದೆ.

ಅಲ್ಲದೆ ಅಲ್ಲಿ ಯಾವುದೇ ಸಾಮಾಜಿಕ ಅಂತರವೂ ಇಲ್ಲ ಮತ್ತು ಕೋವಿಡ್‌ ನಿಯಂತ್ರಣದ ಮುನ್ನೆಚ್ಚರಿಕೆ ಕ್ರಮಗಳು ಅಲ್ಲಿ ಕಂಡುಬಾರದಿರುವುದು ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ. ಜಿಲ್ಲಾಡಳಿತದ ಅಧೀನದ ದೇವಸ್ಥಾನದಲ್ಲಿ ಮಾತ್ರ ಕೋವಿಡ್‌ ಇದ್ದರೂ ಎಲ್ಲ ಸಂಪ್ರದಾಯ ಮಾಡಿರುವ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

click me!