* ಕೊರೋನಾ ಸೋಂಕಿನ ಕಾರಣ ಮನೆಯಲ್ಲೇ ಮೃತಪಟ್ಟಿದ್ದ ಮಹಿಳೆ
* ಆಡಳಿತದಿಂದ ಅಂತ್ಯಸಂಸ್ಕಾರ ಸಿದ್ಧತೆ ಕಾಣದ ಕಾರಣ ಗವಿಮಠದಿಂದ ಅಂತ್ಯಸಂಸ್ಕಾರ
* ಒಂದು ವಾರದಿಂದ ಸೋಂಕಿನಿಂದ ಬಳಲುತ್ತಿದ್ದರು
* ಜಿಲ್ಲಾಡಳಿತವಾಗಲಿ,ನಗರಸಭೆಯಾಗಲಿ ಅಂತ್ಯಸಂಸ್ಕಾರಕ್ಕೆ ಮುಂದೆ ಬರಲಿಲ್ಲ.
ಕೊಪ್ಪಳ(ಮೇ 13) ಕೊರೊನಾ ಸೋಂಕಿನಿಂದ ಮೃತ ಪಟ್ಟ ಮಹಿಳೆಯ ಅಂತ್ಯಸಂಸ್ಕಾರವನ್ನು ಗವಿ ಮಠದ ನೇತೃತ್ವದಲ್ಲಿ ನೆರವೇರಿಸಲಾಗಿದೆ. ಕೊರೊನಾ ಸೋಂಕಿನಿಂದ 48 ವರ್ಷದ ಅಂಜಿನಮ್ಮ ಮೃತಪಟ್ಟಿದ್ದರು. ಕೊಪ್ಪಳದ ವಾರ್ಡ್ ನಂಬರ್ 4 ರ ನಿವಾಸಿ ಅಂಜಿನಮ್ಮ ಪ್ರಾಣ ಚೀನಿ ವೈರಸ್ ಗೆ ಬಲಿಯಾಗಿತ್ತು. ಮನೆಯಲ್ಲಿ ಮೃತರಾದ ಹಿನ್ನಲೆ ,ಜಿಲ್ಲಾಡಳಿತವಾಗಲಿ,ನಗರಸಭೆಯಾಗಲಿ ಅಂತ್ಯಸಂಸ್ಕಾರಕ್ಕೆ ಮುಂದೆ ಬರಲಿಲ್ಲ.
ಜಿಲ್ಲಾಡಳಿತ,ನಗರಸಭೆ ಮುಂದಾಗದ ಹಿನ್ನಲೆ ಗವಿ ಮಠದ ನೇತೃತ್ವದಲ್ಲಿಯೇ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಗವಿ ಶ್ರೀಗಳ ಆದೇಶದಿಂದ ಮೃತ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿತು. ಅಂತ್ಯ ಸಂಸ್ಕಾರದ ಖರ್ಚನ್ನು ಗವಿ ಮಠದ ಶ್ರೀಗಳು ಭರಿಸಿದರು.
ಅಗತ್ಯ ಸೇವೆ ನೀಡುವ ನೌಕರರಿಗೆ ಉಚಿತ ಬಸ್ ಪಾಸ್
ಗವಿ ಮಠದ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೆಲಸ ಮಾಡೋ ಸಿಬ್ಬಂದಿಗಳನ್ನ ಕರೆಸಿ ಅಂತ್ಯ ಸಂಸ್ಕಾರಕ್ಕೆ ಸೂಚನೆ ನೀಡಲಾಯಿತು. ಕಳೆದ ಸೋಮುವಾರ ಅಂಜಿಮಮ್ಮ ಹಾಗೂ ತಾಯಿ ಕೋವಿಡ್ ಟೆಸ್ಟ್ ಮಾಡಿಸಿದ್ರು. 75 ವರ್ಷದ ತಾಯಿಗೆ ನೆಗಟಿವ್ ಬಂದಿತ್ತು, ಮಗಳು ಅಂಜಿನಮ್ಮನಿಗೆ ಕೋವಿಡ್ ಧೃಡವಾಗಿತ್ತು.