ತುಂಗಭದ್ರಾ ಜಲಾಶಯ ಸಮಸ್ಯೆ ನಿವಾರಿಸುವಂತೆ ಮೋದಿಗೆ ರಕ್ತದಲ್ಲಿ ಪತ್ರ ಬರೆದ ರೈತ

By Web Desk  |  First Published Sep 20, 2019, 5:38 PM IST

ವಿವಿಧ ಬೇಡಿಕೆಗಳಿಗೆ ಸ್ಪಂದದಿಸುವಂತೆ  ಕೊಪ್ಪಳ ಜಿಲ್ಲೆಯ ರೈತನೋರ್ವ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಪತ್ರದಲ್ಲೇನಿದೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.


ಕೊಪ್ಪಳ(ಸೆ. 20): ತುಂಗಭದ್ರಾ ಡ್ಯಾಂ ಹೂಳಿನಿಂದ ತುಂಬಿಕೊಂಡಿದ್ದು, ಪರ್ಯಾಯ ಇನ್ನೊಂದು ಡ್ಯಾಮ್ ನಿರ್ಮಿಸಲು ಹಣಕಾಸಿನ ನೆರವನ್ನು ಒದಗಿಸುವಂತೆ ಕಾರಟಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಮಲ್ಲಿಕಾರ್ಜುನ ಎನ್ನುವ ರೈತನೊಬ್ಬ ಪ್ರಧಾನಿ ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

  ಟಿಬಿ ಡ್ಯಾಂನಲ್ಲಿ ಹೂಳು ತುಂಬಿಕೊಂಡಿದೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗಿದ್ದು, ಬೆಳೆಗಳಿಗೆ ನೀರು ಹರಿಸಲು ಆಗುತ್ತಿಲ್ಲ ಈ ಹಿನ್ನೆಲೆಯಲ್ಲಿ ಬೇರೆ ಡ್ಯಾಮ್​​ ಒಂದನ್ನು ನಿರ್ಮಾಣ ಮಾಡಲು ಅನುದಾನ ನೀಡಬೇಕೆಂದು ಪ್ರಧಾನಿಗಳಿಗೆ ಸೆ. 17 ರಂದು ರಕ್ತದಲ್ಲಿ ಐದು ಪುಟದ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಜತೆಗೆ, ಪ್ರಧಾನಿ ನರೇಂದ್ರ ಮೋದಿಯವರ 69ನೇ ಜನ್ಮ ದಿನವನ್ನು ಸಿದ್ದಾಪೂರ ಗ್ರಾಮದಲ್ಲಿ ಈ ರೈತ ಸಂಭ್ರಮದಿಂದ ಆಚರಿಸಿದ್ದಾರೆ.

Tap to resize

Latest Videos

ತುಂಗಭದ್ರಾದಿಂದ ಜಗಳೂರಿಗೆ ನೀರು: ವರದಿ ಕೇಳಿದ ಬಿಎಸ್‌ವೈ

ಅನುದಾನದ ಜತೆಗೆ ಪ್ರವಾಹ ಸಂದರ್ಭದಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ರೈತರ ಗದ್ದೆಗೆ ಹರಿಸಲು ನವಲಿ ಗ್ರಾಮದ ಹತ್ತಿರ ನಿಯೋಜಿತ ಪರ್ಯಾಯ ಡ್ಯಾಂ ನಿರ್ಮಿಸಿಕೊಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ನದಿಗಳ ನೀರನ್ನು ಸಮರ್ಪಕವಾಗಿ ಬಳಸಲು ತುಂಗಭದ್ರಾ ಹಾಗೂ ಕೃಷ್ಣಾ ನದಿಗೆ ಕಟ್ಟಲಾದ ಡ್ಯಾಂಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಿ ಅಗತ್ಯ ಹಣಕಾಸು ನೆರವು ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

click me!