ವಿಜಯೇಂದ್ರ ಅವರನ್ನು ಮೆರವಣಿಗೆ ಸಮಾವೇಶ ಮಾಡಿ ಬಡ ಜನರಿಗೆ ದ್ರೋಹ ಮಾಡಿದ ಬಿಜೆಪಿಗರು| ನರೇಗಾ ಯೋಜನೆಗೆ ತೆರಳುತ್ತಿದ್ದ ಮಹಿಳೆಯರಿಗೆ 200, ಟ್ರ್ಯಾಕ್ಟರ್‌ಗಳಿಗೆ 3000 ಬಾಡಿಗೆ ನೀಡುವುದು ಬಹಿರಂಗ| ಬಡ ಮಹಿಳೆಯರಿಗೆ ಹಣವನ್ನು ನೀಡುತ್ತಿರುವುದು ಎನ್ನಲಾದ ವಿಡಿಯೋ ಮತ್ತು ಫೋಟೋ ಮಾಧ್ಯಮಗಳಿಗೆ ಬಿಡುಗಡೆ|
ಕಾರಟಗಿ(ಫೆ.22): ಕನಕಗಿರಿ ಕ್ಷೇತ್ರದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರನ್ನು ಸನ್ಮಾನಿಸುವ ಹೆಸರಿನಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಅನ್ನ, ಉದ್ಯೋಗ ಅರಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಗ್ರಾಮೀಣ ಜನರನ್ನು ದಾರಿ ತಪ್ಪಿಸಿ, ಹಣಕೊಟ್ಟು ಕರೆತಂದು ಶಕ್ತಿ ಪ್ರದರ್ಶನ ಮಾಡಲಾಗಿದೆ ಎಂದು ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಟೀಕೆ ಮಾಡಿದೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮುಖಂಡರು, ಶಾಸಕ ಬಸವರಾಜ್ ದಢೇಸ್ಗೂರು ನೇತೃತ್ವದಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ನರೇಗಾ ಕೆಲಸಕ್ಕೆ ಟ್ರ್ಯಾಕ್ಟರ್‌ಗಳಲ್ಲಿ ಹೊರಟ್ಟಿದ್ದ ಬಡ ಮಹಿಳೆಯರಿಗೆ ಹಣವನ್ನು ನೀಡುತ್ತಿರುವುದು ಎನ್ನಲಾದ ವಿಡಿಯೋ ಮತ್ತು ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
undefined
ಉಪಚುನಾವಣೆ ಬಳಿಕ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಲಿದೆ: ವಿಜಯೇಂದ್ರ
ಬ್ಲಾಕ್ ಅಧ್ಯಕ್ಷ ಅಂಬಣ್ಣ ನಾಯಕ ಮಾತನಾಡಿ, ಬಿ.ವೈ. ವಿಜಯೇಂದ್ರ ಅವರನ್ನು ಮೆರವಣಿಗೆ ಸಮಾವೇಶ ಮಾಡಿ ಬೀಗುತ್ತಿರುವ ಬಿಜೆಪಿಗರು ಅಸಲಿಗೆ ಕ್ಷೇತ್ರದ ಬಡ ಜನರಿಗೆ ದ್ರೋಹ ಮಾಡಿದ್ದಾರೆ. ನರೇಗಾ ಯೋಜನೆಗೆ ತೆರಳುತ್ತಿದ್ದ ಮಹಿಳೆಯರಿಗೆ 200, ಟ್ರ್ಯಾಕ್ಟರ್‌ಗಳಿಗೆ 3000 ಬಾಡಿಗೆ ನೀಡುವುದು ಬಹಿರಂಗವಾಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ತಾಪಂ ಅಧ್ಯಕ್ಷ ಪ್ರಕಾಶ ಭಾವಿ, ಬ್ಲಾಕ್ ಪ್ರ.ಕಾರ್ಯದರ್ಶಿ ಬಸವರಾಜ್ ನೀರಗಂಟಿ, ಮತ್ತು ಶರಣಪ್ಪ ಪರಕಿ, ಮರ್ಲಾನಹಳ್ಳಿ ಗ್ರಾಪಂ ಅಧ್ಯಕ್ಷ ರವಿನಂದನ್, ದುರುಗೇಶ ಪ್ಯಾಟಿಹಾಳ್, ಮಂಜುನಾಥ ನಾಯಕ್, ದೇವರಾಜ್ ಬರಗೂರು, ಅಮರೇಶ ಬರಗೂರು, ತಾಯಪ್ಪ ಕೋಟ್ಯಾಳ, ಅಬ್ದುಲ್ ರವೂಫ್, ಗಂಗಾಧರಗೌಡ ನವಲಿ, ಟಿವಿಎಸ್ ವೀರೇಶ, ಶಿವುಸ್ವಾಮಿ, ಸಾಗರ ಕುಲಕರ್ಣಿ ಸೇರಿದಂತೆ ಇನ್ನಿತರರು ಇದ್ದರು.