
ಕೊಪ್ಪಳ: ಮಂಗಳವಾರ ನಡೆದ ಜಿಲ್ಲಾ ಯೋಜನಾ ಸಮಿತಿಯ 6 ಸದಸ್ಯರ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಆಡಳಿತಾರೂಢ ಕಾಂಗ್ರೆಸ್ ಗೆ ಟಕ್ಕರ್ ಕೊಟ್ಟಿದೆ.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಯೋಜನಾ ಸಮಿತಿಯ 6 ಸದಸ್ಯರಿಗಾಗಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪರಶುರಾಮ ಹನುಮಂತಪ್ಪ ನಾಯಕ( 46), ಬಾಲರಾಜ ಯಲ್ಲಪ್ಪ ಗಾಳಿ(49), ಶಿವನಗೌಡ ಪುಂಡಗೌಡ್ರು, ಸೋಮಶೇಖರಪ್ಪ ಭೇರಿಗಿ (51) ಜಯಶಾಲಿಯಾದರೆ ಕಾಂಗ್ರೆಸ್ ಬೆಂಬಲಿತ ಕಲ್ಲಬಾಗಿಲಮಠ ಸಿದ್ದೇಶಕುಮಾರ( 54),ಈಶಪ್ಪ ಅಮರಪ್ಪ ( 46) ಆಯ್ಕೆಯಾಗಿದ್ದಾರೆ. ಆರು ಸದಸ್ಯರ ಪೈಕಿ ನಾಲ್ಕು ಜನ ಬಿಜೆಪಿ ಬೆಂಬಲಿತರು ಆಯ್ಕೆಯಾಗುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಟಕ್ಕರ್ ಕೊಟ್ಟಿದ್ದಾರೆ.
ಒಟ್ಟು 96 ಮತದಾರರ ಪೈಕಿ 94 ಕ್ರಮಬದ್ಧ ಮತಗಳು ಚಲಾವಣೆಯಾಗಿದ್ದು, ಇದರಲ್ಲಿ 01 ಮತ ತಿರಸ್ಕೃತವಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 4ಗಂಟೆವರೆಗೆ ಮತದಾನ ನಡೆದಿದ್ದು, ಸಂಜೆ ಫಲಿತಾಂಶ ಘೋಷಿಸಲಾಯಿತು. ಫಲಿತಾಂಶದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾಗುತ್ತಿದ್ದಂತೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್,ವಿಪ ಸದಸ್ಯೆ ಹೇಮಲತಾ ನಾಯಕ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಸೇರಿದಂತೆ ಬಿಜೆಪಿಯ ವಿವಿಧ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: 800 ಗ್ರಾಂ ಇದ್ದ ಚಿನ್ನ 466 ಗ್ರಾಂ ಹೇಗಾಯಿತು? ಇನ್ನುಳಿದ ಬಂಗಾರ ಎಲ್ಲಿ ಹೋಯಿತು?
13ಕೆಪಿಎಲ್04 ಜಿಲ್ಲಾ ಯೋಜನಾ ಸಮಿತಿಯ 06 ಸದಸ್ಯರ ಚುನಾವಣೆಯಲ್ಲಿ ಮಂಗಳವಾರ ಬಿಜೆಪಿ ಮೇಲುಗೈ ಸಾಧಿಸಿದ್ದರಿಂದ ಆಯ್ಕೆಯಾದ ಸದಸ್ಯರೊಂದಿಗೆ ಬಿಜೆಪಿ ವಿಜಯೋತ್ಸವ ಆಚರಿಸಿತು.
ಇದನ್ನೂ ಓದಿ: ಶಾಸಕ ಸತೀಶ್ ಸೈಲ್‌ಗೆ ಫೆ. 5ರ ವರೆಗೆ ಮಧ್ಯಂತರ ಜಾಮೀನು ವಿಸ್ತರಣೆ