ವಿವಿಧೆಡೆ ಅಕಾಲಿಕ ಧಾರಾಕಾರ ಮಳೆ : ಜನರು ಹೈರಾಣ

Kannadaprabha News   | Kannada Prabha
Published : Jan 14, 2026, 07:32 AM IST
  rain

ಸಾರಾಂಶ

ಬೆಳಗಾವಿ ನಗರದಲ್ಲಿ ಸಂಜೆ ವೇಳೆಯಲ್ಲಿ ಅಕಾಲಿಕ ಸುರಿದ ಧಾರಾಕಾರ ಮಳೆಯಿಂದಾಗಿ ಜನರು ಹೈರಾಣದರು. ಒಂದೆಡೆ ವರ್ಷದ ಮೊದಲ ವರ್ಷಧಾರೆಗೆ ಹರ್ಷವಾಗಿದ್ದು, ಮತ್ತೊಂದೆಡೆ ಮಕರ ಸಂಕ್ರಮಣದ ಹಬ್ಬದ ಸಂಭ್ರಮಕ್ಕೆ ಖರೀದಿಯಲ್ಲಿ ತೊಡಗಿದ್ದ ಜನತೆಗೆ ಅಡ್ಡಿಯುಂಟಾಯಿತು.

ಬೆಳಗಾವಿ : ಬೆಳಗಾವಿ ನಗರದಲ್ಲಿ ಸಂಜೆ ವೇಳೆಯಲ್ಲಿ ಅಕಾಲಿಕ ಸುರಿದ ಧಾರಾಕಾರ ಮಳೆಯಿಂದಾಗಿ ಜನರು ಹೈರಾಣದರು. ಒಂದೆಡೆ ವರ್ಷದ ಮೊದಲ ವರ್ಷಧಾರೆಗೆ ಹರ್ಷವಾಗಿದ್ದು, ಮತ್ತೊಂದೆಡೆ ಮಕರ ಸಂಕ್ರಮಣದ ಹಬ್ಬದ ಸಂಭ್ರಮಕ್ಕೆ ಖರೀದಿಯಲ್ಲಿ ತೊಡಗಿದ್ದ ಜನತೆಗೆ ಅಡ್ಡಿಯುಂಟಾಯಿತು.

ಏಕಾಏಕಿ ಆಗಮಿಸಿದ್ದ ಮಳೆಯಿಂದಾಗಿ ತೊಂದರೆ

ಸಂಜೆ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳು ಮತ್ತು ತರಕಾರಿ ಖರೀದಿಯಲ್ಲಿ ಜನರು ಬ್ಯುಜಿಯಾಗಿದ್ದರು. ಹಬ್ಬದ ವ್ಯಾಪಾರವೂ ಜೋರಾಗಿಯೇ ನಡೆದಿತ್ತು. ಆದರೆ, ಸಂಜೆ ಏಕಾಏಕಿ ಆಗಮಿಸಿದ್ದ ಮಳೆಯಿಂದಾಗಿ ವ್ಯಾಪಾರಸ್ಥರು ಮತ್ತು ಖರೀದಿಯಲ್ಲಿ ತೊಡಗಿದ್ದ ಜನರು ತೀವ್ರ ತೊಂದರೆ ಅನುಭವಿಸಿದರು.

ಒಂದು ಗಂಟೆಗೂ ಹೆಚ್ಚು ಸುರಿದ ಧಾರಾಕಾರ ಮಳೆ

ಸಂಜೆ 5.30ರ ಸುಮಾರಿಗೆ ಶುರುವಾದ ಮಳೆ ನಿರಂತರ ಒಂದು ಗಂಟೆಗೂ ಹೆಚ್ಚು ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ರಾಣಿ ಚನ್ನಮ್ಮ ವೃತ್ತ, ಖಡೇಬಜಾರ್, ಬಸ್ ನಿಲ್ದಾಣ, ಕಾಲೇಜು ರಸ್ತೆ ಸೇರಿ ಮತ್ತಿತರ ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ರಸ್ತೆಗಳು ಜಲಾವೃತವಾಗಿ ಜನರು ಹಾಗೂ ವಾಹನಗಳ ಸವಾರರು ಪರದಾಡುವಂತಾಯಿತು. ಮಳೆ ಬರುವ ನಿರೀಕ್ಷೆ ಇರದ ಹಿನ್ನೆಲೆಯಲ್ಲಿ ಛತ್ರಿ, ಜಾಕೆಟ್‌ಗಳನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದ ಜನರು ಮಳೆಯಲ್ಲಿ ನೆನೆದುಕೊಂಡೇ ಮನೆ ಕಡೆಗೆ ತೆರಳಬೇಕಾಯಿತು. ಇನ್ನು, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ‌ ನೀರು ನುಗ್ಗಿ ಕೆಲವೆಡೆ ಅವಾಂತರವೂ ಸೃಷ್ಟಿಯಾಗಿದೆ.

ಸಂಕ್ರಾಂತಿ ಹಬ್ಬದ ಮುನ್ನಾ ದಿನವೇ ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳಲ್ಲಿ ವರುಣ ತಂಪೆರೆದಿದ್ದಾನೆ.

PREV
Read more Articles on
click me!

Recommended Stories

800 ಗ್ರಾಂ ಇದ್ದ ಚಿನ್ನ 466 ಗ್ರಾಂ ಹೇಗಾಯಿತು? ಇನ್ನುಳಿದ ಬಂಗಾರ ಎಲ್ಲಿ ಹೋಯಿತು?
Hassan: ಕಾಂಪೌಂಡ್ ತೆರವು ಪ್ರಕರಣ: ಪುಷ್ಪಾ ಅರುಣ್‌ಕುಮಾರ್‌ಗೆ ಸವಾಲು ಹಾಕಿದ ದೇವರಾಜು