ನಾಳೆ ಕೊಪ್ಪಳ ಬಂದ್‌ಗೆ ಕರೆ ಕೊಟ್ಟ ಕ್ರಿಯಾ ಸಮಿತಿ, ಬೆಳಗ್ಗೆ 6 ಗಂಟೆಯಿಂದ ಸ್ತಬ್ಧ

Published : Oct 30, 2026, 07:06 PM IST
Koppal farmers Baldota

ಸಾರಾಂಶ

ನಾಳೆ ಕೊಪ್ಪಳ ಬಂದ್‌ಗೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ. ಬೆಳಗ್ಗೆ 6 ಗಂಟೆಯಿಂದ ಕೊಪ್ಫಳ ಬಂದ್ ಆಗಲಿದೆ. ಸಂಘಟನೆಗಳು, ಸ್ಥಳೀಯರು, ಮಠಾಧೀಶರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕೊಪ್ಪಳ (ಅ.30) ಕಳೆದೊಂದು ವರ್ಷದಿಂದ ಪ್ರತಿಭಟನೆಯಲ್ಲಿ ಮುಳುಗಿರುವ ಕೊಪ್ಪಳದಲ್ಲಿ ನಾಳೆ ಬಂದ್‌ಗೆ ಕರೆ ನೀಡಲಾಗಿದೆ. ಜಂಟಿ ಕ್ರಿಯಾ ಸಮಿತಿ ನಾಳೆ (ಅ.31) ಕೊಪ್ಪಳ ಬಂದ್‌ಗೆ ಕರೆ ನೀಡಿದೆ. ಬೆಳಗ್ಗೆ 6 ಗಂಟೆಯಿಂದ ಬಂದ್ ನಡೆಯಲಿದೆ. ಕೊಪ್ಪಳ ಸಂಪೂರ್ಣ ಸ್ತಬ್ಧವಾಗಲಿದೆ. ಬಲ್ಡೋಟಾ ಕಾರ್ಖಾನೆ ನಿರ್ಮಾಣ ವಿರೋಧಿಸಿ ಹೋರಾಟಕ್ಕೆ ಒಂದು ವರ್ಷ ಹಿನ್ನಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿದೆ.

ಬೆಳಿಗ್ಗೆ 6 ಗಂಟೆಯಿಂದ ಬಂದ್ ಮಾಡುವುದಾಗಿ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ. ಕಳೆದ ವರ್ಷ (2025) ಅಕ್ಟೋಬರ್ 31ರಂದು ಬಲ್ಡೋಟಾ ಕಾರ್ಖಾನೆ ನಿರ್ಮಾಣ ವಿರೋಧಿಸಿ ಹೋರಾಟ ಆರಂಭಗೊಂಡಿತ್ತು. ಈಗಾಗಲೇ ಕೊಪ್ಪಳದಲ್ಲಿರುವ ಕಾರ್ಖಾನೆಗಳಿಂದ ಹೊರಬರುತ್ತಿರುವ ಧೂಳು, ಕಲುಷಿತ ಗಾಳಿಯಿಂದ ಗ್ರಾಮಸ್ಥರಲ್ಲಿ ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮತ್ತೊಂದು ಕಾರ್ಖಾನೆ ಗ್ರಾಮಸ್ಥರ ಜೀವಕ್ಕೆ ಕುತ್ತು ತರಲಿದೆ ಎಂದು ಸ್ಥಳೀಯರು ಹೋರಾಟ ಆರಂಭಿಸಿದ್ದರು. ಇದೀಗ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಪ್ರತಿಭಟನೆ ತೀವ್ರಗೊಳಿಸಲು ಬಂದ್‌ಗೆ ಕರೆ ನೀಡಲಾಗಿದೆ.

ಗವಿಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭ

ಕಳೆದ ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ಜಿಲ್ಲಾ ಬಚಾಬೋ ಆಂದೋಲನ ಸಮಿತಿ ಇದೀಗ ಬಂದ್‌ಗೆ ಕರೆ ನೀಡಿದೆ. ಬೆಳಿಗ್ಗೆ ಗವಿಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳಲಿದೆ. ಪ್ರತಿಭಟನಾ ಮೆರವಣಿಗೆ ಸಾಗಿ ಬಂದು ನಗರಸಭೆ ಬಳಿ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ. ಬಹಿರಂಗ ಸಮಾವೇಶದಲ್ಲಿ ಹಲವು ಮಠಾಧೀಶರು,ಹೋರಾಟಗಾರರು ಭಾಗಿಯಾಗುತ್ತಿದ್ದಾರೆ ಎಂದು ಜಂಟಿ ಕ್ರಿಯಾ ಸಮಿತಿ ಹೇಳಿದೆ.

ಕಳದ ಒಂದು ವರ್ಷದಿಂದ ಕೊಪ್ಪಳ ಸತತವಾಗಿ ಹೋರಾಟಗಳಿಂದಲೇ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಕಾರ್ಖಾನೆಗಳ ಧೂಳಿನಿಂದ ಕಂಗೆಟ್ಟ ಕೊಪ್ಪಳದ ಜನತೆಗೆ ಮುಕುಂದ್ ಸುಮಿ ಸ್ಪೆಷಲ್ ಸ್ಟೀಲ್ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. 40.78 ಹೆಕ್ಟೇರ್ ಪ್ರದೇಶದಲ್ಲಿ ಇರುವ ಕಾರ್ಖಾನೆಯನ್ನು 66.2 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆ ಮಾಡಲಾಗುತ್ತಿದೆ. ಸದ್ಯ 0.7 ಟನ್ಸ್ ಪರ್ ಆ್ಯನಮ್ ಅಲಾಯ್ ರೋಲಿಂಗ್ ಸಾಮರ್ಥ್ಯ ಇರುವ ಕಾರ್ಖಾನೆಯನ್ನು

0.9 ಟನ್ಸ್ ಪರ್ ಆ್ಯನಮ್ ಸಾಮರ್ಥ್ಯಕ್ಕೆ ವಿಸ್ತರಣೆ ಮಾಡಲಾಗುತ್ತಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಕಾರ್ಖಾನೆಯ ವಿಸ್ತರಣೆ ಕುರಿತು ಕೊಪ್ಪಳ ಜಿಲ್ಲಾಡಳಿತ ಪರಿಸರ ಸಾರ್ವಜನಿಕ ಆಲಿಕೆ ಸಭೆ ನಡೆಸಿತ್ತು. ಈ ವೇಳೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿತ್ತು.

PREV
Read more Articles on
click me!

Recommended Stories

ಹಾಲಿನ ಕಥೆ ಒಂದೆಡೆಯಾದರೆ, ನಂದಿನಿ ಮೊಸರಿನಲ್ಲೂ ಗ್ರಾಹಕನಿಗೆ ಗುನ್ನಾ; ಲೀಟರ್‌ಗೆ 14 ರೂಪಾಯಿ ಬರೆ
Name Change: ಕಾಂಗ್ರೆಸ್‌ಗೆ ಮತ್ತೆ ಕಾಡಿದ ಕೊನೇ ಕ್ಷಣದ ಬದಲಾವಣೆ: ರಾಜ್ಯೋತ್ಸವ ಪಟ್ಟಿ ಘೋಷಣೆ ಬಳಿಕ ದಿಢೀರ್ ತಿದ್ದುಪಡಿ!